Free vaccine politics: ಸರ್ಕಾರದ ಉಚಿತ ಲಸಿಕೆಯನ್ನು ಖಾಸಗಿ ಬ್ಯಾನರ್ ನಲ್ಲಿ ಹಾಕಲು ಅವಕಾಶ ನೀಡಿದರೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ – ಸಚಿವ ಬೈರತಿ ಬಸವರಾಜ್

ದಾವಣಗೆರೆ: ಕೇಂದ್ರ ಸರ್ಕಾರದಿಂದ ಪೂರೈಕೆ ಮಾಡುವ ಉಚಿತ ಲಸಿಕೆಯನ್ನು ಖಾಸಗಿ ಶಿಬಿರದಲ್ಲಿ ನೀಡಿ ಪ್ರಚಾರ ಗಿಟ್ಟಿಸುವ ಯತ್ನ ಮಾಡಲಾಗುತ್ತಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ್ ಪರೋಕ್ಷವಾಗಿ ಶಾಮನೂರು ಕುಟುಂಬಕ್ಕೆ ಕುಟುಕಿದರು.

ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ಕುರಿತಂತೆ ಜಿಲ್ಲಾಡಳಿತ ಭವನದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಜನರ ಜೀವ ರಕ್ಷಣೆಗಾಗಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೇಂದ್ರಸರ್ಕಾರ ರಾಜ್ಯ ಮತ್ತು ಜಿಲ್ಲೆಗೆ ಸಮರ್ಪಕವಾಗಿ ಲಸಿಕೆ ಹಂಚಿಕೆ ಮಾಡುತ್ತಿದ್ದರೂ, ಕೆಲವು ಖಾಸಗಿಯವರು ಬ್ಯಾನರ್‍ನಲ್ಲಿ ತಮ್ಮ ಫೋಟೋ ಹಾಕಿಕೊಂಡು, ಕೆಲವರು ಖಾಸಗಿ ಬ್ಯಾನರ್‍ನಡಿ ಸರ್ಕಾರದಿಂದ ನೀಡುವ ಉಚಿತ ಕೋವಿಡ್ ಲಸಿಕೆ ನೀಡುತ್ತಿದ್ದಾರೆ ಎಂದು ಪರೋಕ್ಷವಾಗಿ ಶಾಮನೂರು ಶಿವಶಂಕರಪ್ಪ ಕುಟುಂಬದಿಂದ ಉಚಿತ ಲಸಿಕೆ ಹೆಸರಲ್ಲಿ ಆಯೋಜಿಸಿರುವ ಕಾರ್ಯಕ್ರಮದ ವಿರುದ್ಧ ಆರೋಪಿಸಿದರು.

ತಮ್ಮ ಸ್ವಂತ ಹಣದಲ್ಲಿ ಪಡೆದ ಲಸಿಕೆಯನ್ನು ಯಾವ ರೀತಿಯಾದರೂ ಹಾಕಿಕೊಳ್ಳಲಿ, ಇದಕ್ಕೆ ನಮ್ಮ ಆಕ್ಷೇಪಣೆ ಇಲ್ಲ. ಆದರೆ, ಖಾಸಗಿ ಬ್ಯಾನರ್‍ನಡಿ ಸರ್ಕಾರದಿಂದ ನೀಡುವ ಉಚಿತ ಲಸಿಕೆಯನ್ನು ವಿತರಿಸಲು ಅವಕಾಶವಿಲ್ಲ, ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ವಹಿಸಬೇಕು ಎಂದು‌ ಸೂಚಿಸಿದರು. 

ಕೇಂದ್ರ ಸರ್ಕಾರ ನೀಡುತ್ತಿರುವ ಉಚಿತ ಲಸಿಕೆಯನ್ನು ಖಾಸಗಿ ಬ್ಯಾನರ್‍ನಡಿ ಹಾಕಲು ಅವಕಾಶ ನೀಡಿದರೆ, ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ.

– ಬೈರತಿ‌ ಭಸವರಾಜ್  ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರು,

Leave a Reply

Your email address will not be published. Required fields are marked *

error: Content is protected !!