flower show; ನ.13ರಂದು ಗ್ಲಾಸ್ ಹೌಸ್‌ನಲ್ಲಿ ಫಲಪುಷ್ಪ ಪ್ರದರ್ಶನ

ದಾವಣಗೆರೆ, ನ.07: ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಹಾಗೂ ತೋಟಗಾರಿಕೆ ಇಲಾಖೆಯಿಂದ ನವೆಂಬರ್ 13 ರಿಂದ 16ರವರೆಗೆ ಗ್ಲಾಸ್ ಹೌಸ್‍ನಲ್ಲಿ ಫಲಪುಷ್ಪ (flower show ) ಪ್ರದರ್ಶನ ಏರ್ಪಡಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿ ಡಾ: ವೆಂಕಟೇಶ್ ಎಂ.ವಿ. ಅವರು, ಗ್ಲಾಸ್ ಹೌಸ್‍ ನಲ್ಲಿ ನ.13ರಂದು ಸಂಜೆ ಲೇಸರ್, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.

smart class; ಸರ್ಕಾರಿ ಶಾಲೆಗಳ ಸ್ಮಾರ್ಟ್ ಕ್ಲಾಸ್ ಮೇಲ್ದರ್ಜೆಗೇರಿಸಿ, ಮೂಲಭೂತ ಸೌಕರ್ಯ ಕಲ್ಪಿಸಲು ಸೂಚನೆ

ಫಲಪುಷ್ಪ ಪ್ರದರ್ಶನದ ಅಂಗವಾಗಿ ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳ ವೀಕ್ಷಣೆಗಾಗಿ ಪ್ರವೇಶವು ಉಚಿತವಾಗಿರುತ್ತದೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನೃತ್ಯ ರೂಪಕ, ಲೇಸರ್ ಶೋ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಫಲಪುಷ್ಪ ಪ್ರದರ್ಶನದಲ್ಲಿ ಚಂದ್ರಯಾನ-3, ವಿವಿಧ ಕಲಾತ್ಮಕ ಪುಷ್ಪಗಳ ಪ್ರದರ್ಶನ ಸೇರಿದಂತೆ ಔಷಧ ಗಿಡಗಳ ಪ್ರದರ್ಶನ, ವಿವಿಧ ಖಾದ್ಯವುಳ್ಳ ಕ್ಯಾಂಟೀನ್‍ ಗಳು, ಉತ್ತರ ಕರ್ನಾಟಕ, ಮಲೆನಾಡು, ಮೈಸೂರು ಸೇರಿದಂತೆ ವಿವಿಧ ಭಾಗಗಳ ತಿನಿಸುಗಳು ಇಲ್ಲಿರಲಿವೆ ಎಂದು ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!