ವಿಶ್ವ ಸ್ಕೌಟ್, ಸ್ಕಾರ್ಫ್ ಮತ್ತು ಸೂರ್ಯೋದಯ ದಿನಾಚರಣೆ

ವಿಶ್ವ ಸ್ಕೌಟ್ ಸ್ಕಾರ್ಫ್ ಮತ್ತು ಸೂರ್ಯೋದಯ ದಿನಾಚರಣೆ.

ದಾವಣಗೆರೆ : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ಜಿಲ್ಲಾ ಸಂಸ್ಥೆ ದಾವಣಗೆರೆ. ವತಿಯಿಂದ ಇಂದು ವಿಶ್ವ ಸ್ಕೌಟ್ ಸ್ಕಾರ್ಫ್ ಮತ್ತು ಸೂರ್ಯೋದಯ ದಿನಾಚರಣೆಯನ್ನು ಪ್ರತಿಜ್ಞೆಯ ಮರು ಉಚ್ಚಾರಣೆ ಮಾಡುವ ಮೂಲಕ ಬಹಳ ಹೆಮ್ಮೆ ಮತ್ತು ಸಡಗರದಿಂದ ಆಚರಿಸಲಾಯಿತು . ಸಂಸ್ಥಾಪಕರಾದ ಲಾರ್ಡ್ ಬೇಡನ್ ಪವೆಲ್ ಅವರು 1907 ನೇ ಇಸವಿಯಲ್ಲಿ ಆಗಸ್ಟ್ 1 ನೇ ತಾರೀಕು ಇಂಗ್ಲೆಂಡಿನ ಬ್ರೌನ್ ಸೀ ಐಲ್ಯಾಂಡ್ ನಲ್ಲಿ ಪ್ರಯೋಗಿಕವಾಗಿ ಒಂದು ಶಿಬಿರವನ್ನು ನಡೆಸಿ ಅಂದಿನಿಂದ ವಿದ್ಯಾರ್ಥಿಗಳು ಸ್ಕೌಟ್ ಸಂಸ್ಥೆಯ ಇದರ ಜ್ಞಾಪಕಾರ್ಥಕವಾಗಿ ಶಾಲಾ ಅವಧಿಯಲ್ಲಿ ಸ್ಕೌಟ್ ಮತ್ತು ಗೈಡ್ನಲ್ಲಿ ಮತ್ತು ಕಾಲೇಜಿನಲ್ಲಿ ರೋವರ್ಸ್ ,ರೆಂಜರ್ಸ್ ಆಗಿ ಸೇವೆ ಸಲ್ಲಿಸಿದಂತಹವರು.

ತಮ್ಮ ವೃತ್ತಿ ಜೀವನದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ನ ನೆನಪನ್ನು ಮಾಡಿಕೊಳ್ಳಲು ಒಂದು ದಿನ ಸ್ಕಾರ್ಫ್ ಅನ್ನ ಧರಿಸಿ ವೃತ್ತಿಯಲ್ಲಿ ನಿರತರಾಗಿರುವುದು ಎಂದು ಮುರುಘರಾಜೇಂದ್ರ ಜೇ ಚಿಗಟೇರಿ ಜಿಲ್ಲಾ ಮುಖ್ಯ ಆಯುಕ್ತರು ಸ್ಕಾರ್ಫ್ ದಿನದ ಮಹತ್ವವನ್ನು ತಿಳಿಸಿದರು. ಹಾಗೂ ಇಂದು ಈ ಸಂಸ್ಥೆಯಲ್ಲಿ ಸೇರಿದ ಎಲ್ಲಾರು ಸಹ ಸ್ಕಾರ್ಫ್ ಅನ್ನು ಧರಿಸಿ ಸೇವೆಯನ್ನು ಮಾಡುವರು ಎಂದು ಹೇಳಿದರು. ಈ ಸಂದರ್ಭದಲ್ಲಿ ವಿಶೇಷ ಅತಿಥಿಗಳಾಗಿ ಪುಟ್ಟ ಕಬ್ ವಿದ್ಯಾರ್ಥಿ ಚಿರಂಜೀವಿ ಕೆನಡಾ ದೇಶದಿಂದ ಆಗಮಿಸಿದ್ದು ಈ ಕಾರ್ಯಕ್ರಮಕ್ಕೆ ಇನ್ನಷ್ಟು ರಂಗು ನೀಡಿತು.

ಈ ಸಂದರ್ಭದಲ್ಲಿ ಜಯಪ್ರಕಾಶ್ ಜೇ ಚಿಗಟೇರಿ ಜಿಲ್ಲಾಧ್ಯಕ್ಷರು , ಎಪಿ ಷಡಕ್ಷರಪ್ಪ ಜಿಲ್ಲಾ ಸ್ಕೌಟ್ ಆಯುಕ್ತರು , ಶ್ರೀಮತಿ ರತ್ನ ಜಿಲ್ಲಾ ಕಾರ್ಯದರ್ಶಿ, ಜಿಲ್ಲಾ ಸ್ಥಾನಿಕಾ ಆಯುಕ್ತರಾದ ಎನ್. ಕೆ. ಕೊಟ್ರೇಶ್, ಮತ್ತು ಕಿರಣ್ , ಶ್ರೀಮತಿ ಸುಖವಾನೀ ಜಿಲ್ಲಾ ಜಂಟಿ ಕಾರ್ಯದರ್ಶಿ, ಸುರೇಶ್ ಚೌಹನ್ , ಶ್ರೀಮತಿ ಅಶ್ವಿನಿ SGV ಹಾಗೂ ಯುವ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!