ಜಿಎಂಐಟಿ: ಇನ್ಫರ್ಮೇಷನ್ ವಿಭಾಗದಿಂದ ಎರಡು ದಿನದ ಕಾರ್ಯಾಗಾರ.

ದಾವಣಗೆರೆ : ನಗರದ ಪ್ರತಿಷ್ಠಿತ ಜಿಎಂ ತಾಂತ್ರಿಕ ಮಹಾವಿದ್ಯಾಲಯದ ಇನ್ಫರ್ಮೇಷನ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದಿಂದ ಎರಡು ದಿನದ ಕಾರ್ಯಾಗಾರ ” ಡಾಟಾಬೇಸ್ ಬೂಟ್ ಕ್ಯಾಂಪ್” ಉದ್ಘಾಟನೆಯ ಸಮಾರಂಭವನ್ನು ವಿಭಾಗದ ಸೆಮಿನಾರ್ ಹಾಲ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಎರಡು ದಿನದ ಕಾರ್ಯಾಗಾರವು ವಿಭಾಗದ ಐದನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗಾಗಿದ್ದು, ಹುಬ್ಬಳ್ಳಿಯ ಹೆಸರಾಂತ ಡಾಕೆಟ್ ರನ್ ಟೆಕ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಅಜಯ್ ಎಸ್ ಕಬಡಿ ನಡೆಸಿಕೊಡಲಿದ್ದಾರೆ.

ಈ ಕಾರ್ಯಾಗಾರವನ್ನು ಹುಬ್ಬಳ್ಳಿಯ ಫ್ರೆಂಡ್ಸ್ ಯೂನಿಯನ್ ಫಾರ್ ಏನೇರಝಿಸಿಂಗ್ ಲೈವ್ಸ್ (ಫ್ಯುಯೆಲ್) ಸಹಯೋಗದಲ್ಲಿ ಹಮ್ಮಿಕೊಂಡಿದ್ದೇವೆ ಎಂದು ಕಾರ್ಯಾಗಾರದ ಸಂಯೋಜಕರು ಗಳಾದ ಶ್ರೀ ವಿಶ್ವನಾಥ್ ವಿ ಕೆ ಮತ್ತು ಸೌಮ್ಯ ಎತ್ತಿನಹಳ್ಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಕಾರ್ಯಾಗಾರದಿಂದ ವಿದ್ಯಾರ್ಥಿಗಳು ಪ್ರಾಯೋಗಿಕ ಜ್ಞಾನವನ್ನು ಪಡೆಯುವುದಲ್ಲದೆ, ಕಾರ್ಯಾಗಾರದ ಕೊನೆಯಲ್ಲಿ ಪ್ರಾಜೆಕ್ಟ್ ತಯಾರಿಸುವ ತಂತ್ರಗಾರಿಕೆಯನ್ನು ಕಲಿಯುವರು ಎಂದು ವಿಭಾಗದ ಮುಖ್ಯಸ್ಥರಾದ ಡಾ ಸುನಿಲ್ ಕುಮಾರ್ ಬಿ ಎಸ್ ತಿಳಿಸಿದರು.

ಡಿಬಿಎಂಎಸ್ ವಿಷಯದಲ್ಲಿ ವಿದ್ಯಾರ್ಥಿಗಳು ನೈಪುಣ್ಯತೆಯನ್ನು ಹೊಂದಿದ್ದಲ್ಲಿ ಅದು ಕಂಪನಿ ಸಂದರ್ಶನ ಪ್ರಕ್ರಿಯೆಯಲ್ಲೂ ಸಹಕಾರಿಯಾಗುವುದು ಮತ್ತು ಈ ರೀತಿಯ ಹಲವು ಚಟುವಟಿಕೆಗಳಲ್ಲಿ ಭಾಗವಹಿಸುವುದರ ಮೂಲಕ ಹೆಚ್ಚಿನ ಜ್ಞಾನವನ್ನು ಪಡೆಯಬಹುದಾಗಿದೆ ಎಂದು ಪ್ರಾಂಶುಪಾಲರಾದ ಡಾ ವೈ ವಿಜಯಕುಮಾರ್ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಆಡಳಿತಾಧಿಕಾರಿಗಳಾದ ಶ್ರೀ ವೈ ಯು ಸುಭಾಶ್ಚಂದ್ರ, ಶ್ರೀ ಅಜಯ್ ಕಬಡಿ, ಕಾಲೇಜಿನ ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥರಾದ ಶ್ರೀ ತೇಜಸ್ವಿ ಕಟ್ಟಿಮನಿ ಟಿ ಆರ್ , ವಿಭಾಗದ ಅಧ್ಯಾಪಕರು ಗಳಾದ ಶ್ರೀ ವಿಶ್ವನಾಥ್ ವಿ ಕೆ, ಸೌಮ್ಯ ಎತ್ತಿನಹಳ್ಳಿ, ವಿಭಾಗದ ಎಲ್ಲಾ ಅಧ್ಯಾಪಕ ವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!