9 ಐ ಎ ಎಸ್ ಅಧಿಕಾರಿಗಳನ್ನ ವರ್ಗಾವಣೆಗೊಳಿಸಿ ಆದೇಶಿಸಿದ ಸರ್ಕಾರ

ಬೆಂಗಳೂರು: ಕರ್ನಾಟಕ ಸರ್ಕಾರ ಸೋಮವಾರ ಒಟ್ಟು 9 ಐಎಎಸ್ ಅಧಿಕಾರಿಗಳನ್ನ ವರ್ಗಾವಣೆ ಮಾಡಿದೆ. ವಿಜಯಪುರ ಜಿಲ್ಲಾಧಿಕಾರಿಯಾಗಿದ್ದ ವಿಜಯಮಹಾಂತೇಶ ಬಿ ದ್ಯಾಮಣ್ಣನವರ್ ಇವರನ್ನ ವರ್ಗಾಯಿಸಿ ಯಾವುದೇ ಜಾಗ ತೋರಿಸದೆ ಇವರ ಜಾಗಕ್ಕೆ ಬಾಗಲಕೋಟೆ ಜಿಲ್ಲೆಯ ಜಿಲ್ಲಾಪಂಚಾಯತ್ ಸಿಇಒ ಆಗಿದ್ದ ಬೂಬಾಲನ್ ಅವರನ್ನ ನೇಮಿಸಿದೆ.
ಹಾಸನ ಜಿಲ್ಲಾಧಿಕಾರಿಯಾಗಿ ಸತ್ಯಭಾಮ ಸಿ, ಇವರನ್ನ ನೇಮಿಸಿದೆ, ಪದ್ಮಾ ಬಸವಂತಪ್ಪ ಇವರನ್ನ ಕೋಲಾರ ಜಿಲ್ಲಾಪಂಚಾಯತ್ ಸಿಇಒ ಆಗಿ ನೇಮಿಸಿದೆ, ನಂಗ್ಜಾಯಿ ಮೊಹಮದ್ ಆಲಿ ಅಕ್ರಮ್ ಶಾ ಇವರನ್ನ ಹೊಸಪೇಟೆ ಸಬ್ ಡಿವಿಷನ್ ಉಪವಿಭಾಗಾಧಿಕಾರಿಯಾಗಿ ಸರ್ಕಾರ ನೇಮಿಸಿ ಆದೇಶಿಸಿದೆ.