ದಾವಣಗೆರೆ: ದಾವಣಗೆರೆ ಲೋಕಾಯುಕ್ತ ತಂಡ ಭರ್ಜರಿ ಭೇಟೆಯಾಡಿದೆ. 2 ಲಕ್ಷ ಲಂಚದ ಹಣ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಟ್ರ್ಯಾಪ್ ಮಾಡಲಾಗಿದೆ.
ದಾವಣಗೆರೆ ಜಿಲ್ಲೆಯ ನಗರ ಮತ್ತು ಗ್ರಾಮೀಣ ಅಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕ ಕೆ ಆರ್ ಮಂಜುನಾಥ್ ಹಾಗೂ ನಗರ ಯೋಜನೆ ವಿಭಾಗದ ಭರತ್ ಲಂಚ ಸ್ವೀಕರಿಸುವಾಗ ದಾವಣಗೆರೆ ಲೋಕಾಯುಕ್ತ ತಂಡ ಬಂಧಿಸಿದೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಶ್ರೀನಿವಾಸ್ ಎಂಬುವವರು ತಮ್ಮ ಜಮೀನಿನಲ್ಲಿ ಬಡಾವಣೆ ನಿರ್ಮಾಣ ಮಾಡಲು ಬಯಸಿದ್ದರು, ಅದಕ್ಕೆ ಸಂಬಂಧಿಸಿದಂತೆ ಪರವಾನಿಗೆ, ನಕ್ಷೆ ಮಾಡಿಕೊಡಲು ಮೂರು ಲಕ್ಷಕ್ಕೆ ಭೇಡಿಕೆಯನ್ನ ಇಡಲಾಗಿತ್ತು, ನೊದಲ ಕಂತಿ ನಲ್ಲಿ ಒಂದು ಲಕ್ಷ ಹಣ ನೀಡಲಾಗಿತ್ತು, ಇಂದಯ ಉಳಿದ ಎರಡು ಲಕ್ಷ ಹಣ ನೀಡುವಾಗ ಲೋಕಾಯುಕ್ತ ಅಧಿಕಾರಿಗಳು ಇಬ್ಬರನ್ನೂ ಟ್ರ್ಯಾಪ್ ಮಾಡಿ ಬಂಧಿಸಿದ್ದಾರೆ.
ಶ್ರೀನಿವಾಸ್ ದಾವಣಗೆರೆಯ ಶ್ರೀರಾಮ ಸೇನೆಯ ಕಾರ್ಯಕರ್ತರಾಗಿದ್ದು, ಅಧಿಕಾರಿಗಳ ಲಂಚಕ್ಕೆ ಬೇಸತ್ತು ದೂರು ನೀಡಿದ್ದರು. ಇವರ ದೂರನ್ನ ಪರಿಶೀಲಿಸಿ ಲೋಕಾಯುಕ್ತರು ಇಂದು ಬೆಳಗ್ಗೆ ದಾಳು ನಡೆಸಿದ್ದಾರೆ.
ಶ್ರೀರಾಮ ಸೇನೆಯ ಜಿಲ್ಲಾ ಅದ್ಯಕ್ಷ ಮಣಿಸರ್ಕಾರ ನೇತೃತ್ವದಲ್ಲಿ ಲೋಕಾಯುಕ್ತಕ್ಕೆ ದೂರನ್ನ ನೀಡಲಾಗಿತ್ತು,ದಾವಣಗೆರೆ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಶ್ರೀರಾಮ ಸೇನೆ ಹಿಂದೂ ಪರ ಹೋರಾಟದಲ್ಲಿ ಹೇಗೆ ಕೆಲಸ ಮಾಡುತ್ತಿದ್ದರೋ ಅದೇ ರೀತಿಯಲ್ಲಿ ಭ್ರಷ್ಟ ಅಧಿಕಾರಿಗಳಿಗೆ ಸಿಂಹ ಸ್ವಪ್ನವಾಗಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಭಾರಿ ಸುದ್ದಿ ಹಬ್ಬಿದೆ. ಕಳೆದ ವಾರ ಪಿ ಡಬ್ಲ್ಯೂ ಡಿ ಇಲಾಖೆಯ ಇಂಜಿನಿಯರ್ ಗಳು ಯಾವ ರೀತಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಅವರ ವಿರುದ್ದ ಸ್ವಿಂಗ್ ಆಪರೇಷನ್ನ ಮಾಡಿದ್ದನ ಇಲ್ಲಿ ಸ್ಮರಿಸಬಹುದಾಗಿದೆ.
ಒಟ್ಟಾರೆ ದಾವಣಗೆರೆ ಲೋಕಾಯುಕ್ತ ತಂಡ ಭಾರಿ ಆಕ್ಟೀವ್ ಆಗಿದ್ದು ಇನ್ನೂ ಹೆಚ್ಚಿನ ಅಧಿಕಾರಿಗಳಲ್ಲಿ ನಡುಕ ಉಂಟಾಗಿರುವುದಂತು ಸತ್ಯದ ಸಂಗತಿ.
