ಹಂದಿ ಹಣ್ಣಿ ಹುಡುಗರಿಂದ ದಾವಣಗೆರೆ ಜೈಲಿನಲ್ಲಿ ಬೇರೆ ಖೈದಿಗಳ ಜೊತೆ ಹೊಡೆದಾಟ.!

ದಾವಣಗೆರೆ: ದಾವಣಗೆರೆ ನಗರದ ಕಾರಾಗೃಹದಲ್ಲಿ ನಲ್ಲಿ ಗಲಾಟೆ ನಡೆದಿದೆ. ಶಿವಮೊಗ್ಗದ ಹಂದಿ ಹಣ್ಣಿ ಕಡೆಯ ಹುಡುಗರು ಹಾಗೂ ರಾಜಸ್ತಾನದ ಮೂಲದ ಕೈದಿಗಳ ನಡುವೆ ಗಲಾಟೆ ನಡೆದಿದೆ.

ಶಿವಮೊಗ್ಗ ಜಿಲ್ಲೆಯ ವಿನೋಬನಗರ ಪೊಲೀಸ್ ಚೌಕಿ ಬಳಿ ನಡೆದಿದ್ದ ರೌಡಿಶೀಟರ್ ಹಂದಿ ಹಣ್ಣಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳ ವಿರುದ್ಧ ಮತ್ತೊಂದು ಟೀಂ ಸೇಡು ತೀರಿಸಿಕೊಂಡಿತ್ತು. ಹಂದಿ ಅಣ್ಣಿ ಕೊಲೆ ಆರೋಪಿಗಳಿಬ್ಬರ ಮೇಲೆ ಹೊನ್ನಾಳಿ ತಾಲ್ಲೂಕಿನಲ್ಲಿ ಮಾರಣಾಂತಿಕ ಹಲ್ಲೆ ನಡೆದಿತ್ತು. ಈ ವೇಳೆ ಓರ್ವ ಸಾವನ್ನಪ್ಪಿದ್ದ.

ಸದ್ಯ ಈ ಹಲ್ಲೆ ಹಾಗೂ ಕೊಲೆ ಪ್ರಕರಣದಲ್ಲಿದ್ದ ಆರೋಪಿಗಳನ್ನು ದಾವಣಗೆರೆ ಜೈಲಿನಲ್ಲಿ ಇರಿಸಲಾಗಿತ್ತು. ಕಾರಾಗೃಹದಲ್ಲಿ ದಾವಣಗೆರೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ಸವಾರರಿಗೆ ಲಾರಿಯಿಂದ ಡಿಕ್ಕಿ ಹೊಡೆದ ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದ ರಾಜಸ್ತಾನ ಮೂಲದ ಆರೋಪಿಗಳಿದ್ದರು.

ಗರುಡವಾಯ್ಸ್ ಹಾಗೂ ಗರುಡಚರಿತೆ ಪತ್ರಿಕೆಯ ಮೂಲಕ್ಕೆ ಲಭ್ಯವಾಗಿರುವ ಮಾಹಿತಿ ಪ್ರಕಾರ, ಈ ಎರಡು ತಂಡಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದು ರಾಜಾಸ್ಥಾನದ ಖೈದಿಯ ಮುಖಕ್ಕೆ ಏಟು ಬಿದ್ದು ಬಾವು ಬಂದಿದೆಯಂತೆ. ಹದ್ದಿ ಹಣ್ಣಿ ಕಡೆಯವರು ಲಾರಿ ಚಾಲಕನ ಜೊತೆ ಗಲಾಟೆ ತೆಗೆದಿದ್ದಾರಂತೆ ಇದಕ್ಕೆ ಹೊಡೆದಾಟ ನಡೆಯಿತು ಎನ್ನಲಾಗಿದೆ. ಖಚಿತ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಬೇಕಿದೆ. ಆದಾಗ್ಯು ಕಾರಾಗೃಹದಲ್ಲಿ ಹೊಡೆದಾಟ ನಡೆದಿದ್ದು ಮೂಲಗಳ ಪ್ರಕಾರ ಏಳು ಮಂದಿಗೆ ದಾವಣಗೆರೆಯ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.

ದಾವಣಗೆರೆ ಎಸ್​ಪಿ ಉಮಾ ಪ್ರಶಾಂತ್ ವಿಷಯ ತಿಳಿಯುತ್ತಲೇ ಜೈಲಿಗೆ ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ. ಈ ಘಟನೆ ಸಂಬಂಧ ದಾವಣಗೆರೆಯ ಬಸವನಗರ ಪೋಲಿಸ್ ಠಾಣೆಯಲ್ಲಿ ಎಫ್ಐಆರ್ ಸಹ ದಾಖಲಾಗಿದೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!