ಸರ್ಕಾರಿ ಶಾಲೆಗಳು ಮತ್ತೆ ತನ್ನ ವೈಭವಿಕತೆಯನ್ನು ಮೆರೆಯಲಿ – ಸಂಕಲ್ಪ ಫೌಂಡೇಶನ್

ದಾವಣಗೆರೆ: 75ನೇ ಗಣರಾಜ್ಯೋತ್ಸವದ ಪ್ರಯುಕ್ತ ಸಂಕಲ್ಪ ಫೌಂಡೇಶನ್ (ಎಸ್ ಸಿ) ರಿ, ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಲೇಬರ್ ಕಾಲೋನಿಯಲ್ಲಿ ಆಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ 75 ವಸಂತದ ಗಣರಾಜ್ಯೋತ್ಸವದಲ್ಲಿ ಸಂವಿಧಾನದ ಅವಶ್ಯಕತೆ ಹಾಗೂ ಸಂವಿಧಾನ ಜಾರಿಗಾಗಿ ಶ್ರಮಿಸಿದ ಅಂಬೇಡ್ಕರ್ ಅವರ ಕುರಿತು ಅವರುಗಳ ಶ್ರಮದ ಕುರಿತು ಸಂಕಲ್ಪ ಫೌಂಡೇಶನ್ ಕಾರ್ಯದರ್ಶಿಗಳಾದ ಅಂಜಿನಪ್ಪ ಡಿ ಅವರು ತಿಳಿಸಿದರು, ಈ ಕಾರ್ಯಕ್ರಮವನ್ನು ಶಾಲಾ ಆವರಣದಲ್ಲಿ ಆಯೋಜನೆ ಮಾಡಲಾಗಿದ್ದು ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಾದ ಶ್ರೀಮತಿ ಜ್ಯೋತಿ ಹಾಗೂ ಶಾಲಾ ಶಿಕ್ಷಕರ ವೃಂದ ಹಾಗೂ ಮುಖ್ಯ ಶಿಕ್ಷಕರಾದ ಶ್ರೀ ಪಂಚಾಕ್ಷರಿ ಅವರು ಮಾತನಾಡುತ್ತ ಸರ್ಕಾರಿ ಶಾಲೆಗಳು ಅಳಿವಿನ ಅಂಚಿನಲ್ಲಿದೆ ಸರ್ಕಾರಗಳು ಇದರ ಬಗ್ಗೆ ಗಮನಹರಿಸಿ ವ್ಯವಸ್ಥೆಯಲ್ಲಿರುವ ಕೆಲವೊಂದು ಬದಲಾವಣೆಗಳ ಮಾಡುವ ಮೂಲಕ ಸರ್ಕಾರಿ ಶಾಲೆಗಳನ್ನು ಉಳಿಸುವ ಕಾರ್ಯವನ್ನು ಕೈಗೊಳ್ಳಬೇಕು ಸಂವಿಧಾನದಲ್ಲಿ ತಿಳಿಸಿರುವಂತೆ ಶಿಕ್ಷಣ ಗುಣಮಟ್ಟದಲ್ಲಿ ನೀಡುವ ಕೆಲಸ ನಮ್ಮದಾಗಿದೆ ಅದನ್ನು ನೀಡಲು ಶಾಲೆಗಳ ಅವಶ್ಯಕತೆ ಇನ್ನೂ ಹೆಚ್ಚಾಗಿರುವುದರಿಂದ ಅದನ್ನು ಉಳಿಸುವ ಕೆಲಸ ಸರ್ಕಾರ ಮಾಡಬೇಕೆಂದು ತಿಳಿಸಿದರು.

ಮತ್ತು ಎಸ್ ಡಿ ಎಂ ಸಿ ಅಧ್ಯಕ್ಷರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು ಅವರುಗಳು ಸರ್ಕಾರಿ ಶಾಲೆಗಳು ಮತ್ತೆ ತನ್ನ ವೈಭವಿಕತೆಯನ್ನು ಮೆರೆಯಲಿ ಎಂದು ತಿಳಿಸಿದರು ಹಾಗೂ ಈ ಒಂದು ಕಾರ್ಯಕ್ರಮದಲ್ಲಿ ಸಂಕಲ್ಪ ಫೌಂಡೇಶನ್ ಉಪಾಧ್ಯಕ್ಷರಾದ ಅಭಿಷೇಕ್ ಎಸ್ ರವರು ಸಂವಿಧಾನದ ಆಶಯ ಮತ್ತು ಗಣರಾಜ್ಯೋತ್ಸವದ ಪ್ರಾಮುಖ್ಯತೆ ಕುರಿತು ಮಾಹಿತಿ ನೀಡುತ್ತಾ, ಮಕ್ಕಳಿಗೆ ಸಿಹಿ ವಿತರಣೆಯನ್ನು ಮಾಡಿದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!