ಎಸ್.ಎಸ್.ಕೇರ್ ಟ್ರಸ್ಟ್‌ ಮೂಲಕ ಬಡವರಿಗೆ ಆರೋಗ್ಯ ಭಾಗ್ಯ ಕಲ್ಪಿಸುತ್ತಿರುವ ಶ್ರೀಮತಿ ಡಾ.ಪ್ರಭಾ ಎಸ್.ಎಸ್.ಮಲ್ಲಿಕಾರ್ಜುನ ರಿಗೆ ಹುಟ್ಟಿದ ಹಬ್ಬದ ಶುಭಾಶಯಗಳು – ಸಾಗರ್ ಎಲ್ ಎಂ ಹೆಚ್

ದಾವಣಗೆರೆ- ಸಮಾಜದಲ್ಲಿ ಪ್ರತಿಯೊಬ್ಬರಿಗೂ ಆರೋಗ್ಯ ಬಹಳ ಮುಖ್ಯ, ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ವೆಚ್ಚವನ್ನುಬರಿಸುವುದು  ಸಾಮಾನ್ಯ ಜನ ರಿಗೆ ಕಷ್ಟಕರವಾಗಿದ್ದು, ಒಂದು ಸರ್ಕಾರ ಮಾಡಲು ಕಷ್ಟಪಡುವಂತಹ ಉಚಿತ ಆರೋಗ್ಯ ವ್ಯವಸ್ಥೆಯಂತಹ ಯೋಜನೆಯನ್ನು ಒಂದು ಟ್ರಸ್ಟ್ ಮೂಲಕ ಮಾಡಿ, ಚಿಕಿತ್ಸೆಯ ಅವಶ್ಯವಿರುವ ಪ್ರತಿಯೊಬ್ಬ ಶ್ರೀಸಾಮಾನ್ಯನಿಗೆ ಆರೋಗ್ಯ ಮಾಹಿತಿ,
ಉಚಿತ ಚಿಕಿತ್ಸೆ ನೀಡುವಮೂಲಕ ಬಡವರ ಪಾಲಿನ ಅರೋಗ್ಯ ಮಾತೆ, ನಮ್ಮ ದಾವಣಗೆರೆ ಜಿಲ್ಲೆಯ ಸಹೋದರಿಯಾಗಿರುವ ಶ್ರೀಮತಿ ಪ್ರಭಾ ಎಸ್.ಎಸ್ ಮಲ್ಲಿಕಾರ್ಜುನ್ ರವರಿಗೆ ಅಕ್ಕ ನವರಿಗೆ ಹುಟ್ಟುಹಬ್ಬದ ಶುಭಾಶಯಗಳು.

ಗರ್ಭಿಣಿ ಸ್ತ್ರೀಯರಿಂದ ಹಿಡಿದು, ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಆರೋಗ್ಯ, ಸ್ತನ ಕ್ಯಾನ್ಸರ್, ಕಣ್ಣಿನ ಚಿಕಿತ್ಸೆ,ಡಯಾಲಿಸಿಸ್, ಹಾಗೂ ಇನ್ನಿತರ ಶಸ್ತ್ರಚಿಕಿತ್ಸೆಯ ಅವಶ್ಯವಿರುವ ಪ್ರತಿಯೊಬ್ಬರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಮೂಲಕ ಹೈಟೆಕ್ ಚಿಕಿತ್ಸೆಯನ್ನು ಉಚಿತವಾಗಿ ನೀಡುವ ಇವರ ಗುಣ ಅಭಿನಂದನಾರ್ಹ.

ವೈದ್ಯರಾಗಲಿ, ಸಂಘಟಕರಾಗಲಿ ನೀಡುವ ಪ್ರತಿಯೊಬ್ಬರ ಸಲಹೆಯನ್ನು ಶಾಂತ ಚಿತ್ತರಾಗಿ ಆಲಿಸುವ ಇವರು, ಅವರ ಸಲಹೆಗಳನ್ನು ಅಳೆದು ತೂಗಿ ಅಂತಿಮವಾಗಿ ಪ್ರತಿಯೊಬ್ಬರಿಗೂ ಅನುಕೂಲವಾಗುವ ರೀತಿಯಲ್ಲಿ ತೆಗೆದುಕೊಳ್ಳುವ ಇವರ ತೀರ್ಮಾನಗಳು ಬಡವರ ಸ್ನೇಹಿ ತೀರ್ಮಾನಗಳು ಆಗಿರುತ್ತವೆ.

ಗ್ರಾಮಾಂತರ ಪ್ರದೇಶಗಳಲ್ಲಿ ಹಾಗೂ ನಗರ ಪ್ರದೇಶಗಳಲ್ಲಿ ಆರೋಗ್ಯ ಶಿಬಿರಗಳನ್ನು ನಡೆಸುವ ಮೂಲಕ ಪ್ರತಿಯೊಬ್ಬರಿಗೂ ಆರೋಗ್ಯದ ಸಮಸ್ಯೆಯ ಮುನ್ನೆಚ್ಚರಿಕೆ,ತಿಳುವಳಿಕೆ ಹಾಗೂ ಚಿಕಿತ್ಸೆಯ ಅವಶ್ಯವಿರುವ ರೋಗಿಗಳಿಗೆ ತಮ್ಮದೇ ಟ್ರಸ್ಟ್ ಮೂಲಕ ಉಚಿತವಾಗಿ ಗುಣಮಟ್ಟದ ಚಿಕಿತ್ಸೆ ನೀಡುವುದು, ಇವರಿಗೆ ಸಾರ್ವಜನಿಕರ ಆರೋಗ್ಯದ ಬಗ್ಗೆ ಇರುವ ಕಾಳಜಿಗೆ ಸಾಕ್ಷಿಯಾಗಿದೆ .

ಉಚಿತ ಆರೋಗ್ಯ ಶಿಬಿರಗಳಲ್ಲಿ ಡಯಾಲಿಸಿಸ್ ರೋಗಿಗಳ ಸಂಖ್ಯೆ ಹೆಚ್ಚಾದಾಗ, ರೋಗಿಗಳಿಗೆ ಉಚಿತ ಡಯಾಲಿಸಿಸ್ನೀಡಲು ತಮ್ಮಲ್ಲಿರುವ ಇರುವ ಡಯಾಲಿಸಿಸ್ ಯೂನಿಟ್ಗಳು ಕಡಿಮೆ ಇರುವ ಮಾಹಿತಿ ಬಂದ  ತಕ್ಷಣವೇ ಮಾರ್ಗದರ್ಶಕರಾದ ಡಾ. ಶಾಮನೂರು ಶಿವಶಂಕರಪ್ಪನವರು ಹಾಗೂ ಎಸ್.ಎಸ್ ಮಲ್ಲಿಕಾರ್ಜುನ್ ರವರ ಜೊತೆ ಚರ್ಚಿಸಿ ಡಯಾಲಿಸಿಸ್ ಯೂನಿಟ್ಗಳ ಸಂಖ್ಯೆ ಹೆಚ್ಚಾಗಿದ್ದು ಇವರಿಗೆ ರೋಗಿಗಳ ಬಗ್ಗೆ ಇರುವ ಕಾಳಜಿ ತೋರಿಸುತ್ತದೆ.

ಪ್ರತಿಯೊಬ್ಬರ ಆರೋಗ್ಯದ ಬಗ್ಗೆ ಇಷ್ಟೊಂದು ಕಾಳಜಿ ವಹಿಸುವ ತಮಗೆ, ಆ ದೇವರು ಇನ್ನೂ ಹೆಚ್ಚಿನ ಆರೋಗ್ಯ ನೀಡಲಿ ಎಂದು ತಮ್ಮಿಂದ ಆರೋಗ್ಯ ಭಾಗ್ಯ ಪಡೆದ ಎಲ್ಲರ ಪರವಾಗಿ ಧನ್ಯವಾದ ತಿಳಿಸುತ್ತಾ,
ಹಾಗೂ ನಿಮ್ಮ ಸಾಮಾಜಿಕ ಕಳಕಳಿರುವ ನಿಮ್ಮಂತಹ ವ್ಯಕ್ತಿಗಳು ರಾಜಕೀಯ ಸ್ಥಾನಮಾನ ಪಡೆದು ಇನ್ನು ಹೆಚ್ಚು ಸಮಾಜ ಸೇವೆಯಲ್ಲಿ ಭಾಗಿಯಾಗಬೇಕೆಂದು ತಮ್ಮಲ್ಲಿ ವಿನಂತಿಸುತ್ತಾ, ಮತ್ತೊಮ್ಮೆ ಹುಟ್ಟು ಹಬ್ಬದ ಶುಭಾಶಯಗಳು ಕೋರುವ,

ಸಾಗರ್ ಎಲ್ ಎಂ ಹಚ್
ಗಾಂಧಿ ನಗರ
ದಾವಣಗೆರೆ

Leave a Reply

Your email address will not be published. Required fields are marked *

error: Content is protected !!