ಏ.22ರಂದು ಸತ್ಯನಾರಾಯಣಪುರದಲ್ಲಿ ಶ್ರೀರಾಮ ದೇವಸ್ಥಾನ ಉದ್ಘಾಟನೆ
ದಾವಣಗೆರೆ; ಜಿಲ್ಲೆಯ, ಹರಿಹರ ತಾಲ್ಲೂಕು ಸಾಲಕಟ್ಟೆ ಬಳಿಯ ಸತ್ಯನಾರಾಯಣಪುರದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ರಾಮ ದೇವಸ್ಥಾನದ ಉದ್ಘಾಟನಾ ಸಮಾರಂಭವನ್ನು ಬರುವ ಏಪ್ರಿಲ್ 22ರ ಸೋಮವಾರ ಬೆಳಿಗ್ಗೆ 9 ಗಂಟೆಗೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಹಮ್ಮಿಕೊಳ್ಳಲಾಗಿದೆ.
ಏ. 22 ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಏ. 26ರ ಶುಕ್ರವಾರದವರೆಗೆ ನಡೆಯಲಿದೆ.
ದಿ. 22 ರಂದು ಬೆಳಿಗ್ಗೆ 9 ಗಂಟೆಯಿಂದ ಗೋಪೂಜೆಯೊಂದಿಗೆ ಪ್ರಾರಂಭವಾಗುತ್ತದೆ. ದಿ. 23 ರಂದು ಬೆಳಿಗ್ಗೆ 9 ಗಂಟೆಯಿಂದ ಪಂಚಗವ್ಯ ಕಳಶಾರಾಧನ ಹಾಗೂ ಪಂಚಗವ್ಯಾದಿ ವಾಸ ನೆರವೇರುವುದು.
ದಿ. 24 ರಂದು ಕ್ಷೀರಾಧಿವಾಸ ಕಳಸ ಆರಾಧನಾ ಕ್ಷೀರಾಧಿವಾಸ, ದಿ. 25 ರಂದು ಜಲಾವಧಿವಾಸ ಕಳಸ ಆರಾಧನಾ ಜಲಾಧಿವಾಸ, ದಿ. 26 ರಂದು ಯಜ್ಞದ ಮಹಾಪೂರ್ಣಾಹುತಿ ಅನುರಾಧ ನಕ್ಷತ್ರ ಯುಕ್ತ ಕಟಕ ಲಗ್ನದಲ್ಲಿ ನೆರವೇರುವುದು.
ಜೀವಧ್ವಜ ಶಿಖರ ದ್ವಾರಪಾಲಕ ಯಂತ್ರ ಪ್ರತಿಷ್ಠ, ದಿವ್ಯ ವಿಗ್ರಹ ಪ್ರತಿಷ್ಠಾ ಮಹೋತ್ಸವ ಹಾಗೂ ಕುಂಭಾಭಿಷೇಕ ನೆರವೇರುವುದು.
ದೇವಸ್ಥಾನದ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ತಿರುಮಲ ತಿರುಪತಿ ದೇವಸ್ಥಾನದ ಆಸ್ಥಾನಪಂಡಿತರಾದ ಶ್ರೀಮಾನ್ ಖಂಡವಿಲ್ಲಿ ವೆಂಕಟಸೂರ್ಯ ಜಗನ್ನಾಥಾಚಾರ್ಯ (ರವಿ) ಇವರ ನೇತೃತ್ವದಲ್ಲಿ ನಡೆಯಲಿದೆ.
ಸರ್ವಭಕ್ತಾದಿಗಳು ಆಗಮಿಸಿ ತನು-ಮನ-ಧನದೊಂದಿಗೆ ಭಾಗವಹಿಸಿ ಶ್ರೀರಾಮ ದೇವಸ್ಥಾನ ಉದ್ಘಾಟನಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ದೇವಸ್ಥಾನ ಕಮಿಟಿ ಪ್ರಕಟಣೆಯಲ್ಲಿ ಕೋರಿದೆ.