ಬಜೆಟ್ ಪ್ರಮುಖಾಂಶಗಳು ಹೀಗಿವೆ ನೋಡಿ

ಬಜೆಟ್ ಪ್ರಮುಖಾಂಶಗಳು ಹೀಗಿವೆ ನೋಡಿ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಮಂಡಿಸಿರುವ ಎರಡನೇ  ಬಜೆಟ್‌ನ ಮುಖ್ಯಾಂಶಗಳು ಹೀಗಿವೆ.
* ಸಣ್ವ, ಅತಿ ಸಣ್ಣ ರೈತರಿಗಾಗಿ 180 ಕೋಟಿ ವೆಚ್ಚದಲ್ಲಿ ಜೀವನ್ ಜ್ಯೋತಿ ಕಿಸಾನ್ ಯೋಜನೆ ಘೋಷಣೆ.
* ಬಿಪಿಎಲ್ ಕಾರ್ಡ್‌ದಾರರಿಗೆ ಮಾಸಿಕ ಅಕ್ಕಿ 5 ರಿಂದ 6 ಕೆ.ಜಿಗೆ ಹೆಚ್ಚಳ.
* ರೈತರಿಗೆ ನೀಡಲಾಗುತ್ತಿದ್ದ 3 ಲಕ್ಷ ರೂ. ಬಡ್ಡಿ ರಹಿತ ಸಾಲ 5 ಲಕ್ಷ ರೂಪಾಯಿಗೆ ಹೆಚ್ಚಳ.
* ಗೃಹಿಣಿ ಶಕ್ತಿ ಯೋಜನೆ ಘೋಷಣೆ. ಭೂರಹಿತ ಮಹಿಳಾ ಕಾರ್ಮಿಕರಿಗೆ ತಿಂಗಳಿಗೆ  500 ರೂ. ಸಹಾಯ ಧನ
*  ಶಾಲಾ–ಕಾಲೇಜುಗಳ ವಿದ್ಯಾರ್ಥಿನಿಯರಿಗೆ ‘ವಿದ್ಯಾವಾಹಿನಿ’ ಯೋಜನೆ ಅಡಿಯಲ್ಲಿ 350 ಕೋಟಿ ವೆಚ್ಚದಲ್ಲಿ ಉಚಿತ ಬಸ್‌ ಪಾಸ್‌ ಸೌಲಭ್ಯ
* ನೇಕಾರ ಸಮ್ಮಾನ ಯೋಜನೆಯಡಿ ಸಹಾಯಧನ 3 ಸಾವಿರ ರೂಪಾಯಿಯಿಂದ 5 ಸಾವಿರಕ್ಕೆ ಏರಿಕೆ.
* ರಾಜ್ಯದಲ್ಲಿ ಕಾರ್ಮಿಕರ 19 ವಿಮಾ ಆಸ್ಪತ್ರೆ ಆರಂಭ.
* ಎಸ್‌–ಎಸ್‌ಟಿಗೆ ವಸತಿ ಯೋಜನೆಯಡಿ ನೀಡಲಾಗುತ್ತಿದ್ದ ಘಟಕ ಸಹಾಯಧನ 1.5 ಲಕ್ಷದಿಂದ 2 ಲಕ್ಷಕ್ಕೆ ಹೆಚ್ಚಳ.
* ಮುಖ್ಯಮಂತ್ರಿ ವಿದ್ಯಾಶಕ್ತಿ ಯೋಜನೆ ಆರಂಭ. ಸರ್ಕಾರಿ ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳಿಗೆ ದಾಖಲಾಗುವವರಿಗೆ ಶುಲ್ಕ ವಿನಾಯಿತಿ.
* ಕಿಸಾನ್ ಕಾರ್ಡ್ ಹೊಂದಿರುವ ರೈತರಿಗೆ ಭೂಸಿರಿ ಯೋಜನೆ. ರೈತರಿಗೆ  10 ಸಾವಿರ ಸಹಾಯಧನ. ತುರ್ತು ಸಂದರ್ಭದಲ್ಲಿ ರೈತರಿಗೆ ಬೀಜ, ಗೊಬ್ಬರ ಖರೀದಿಗೆ ಅನುಕೂಲ.
* ರೈತರಿಗೆ ನೀಡಲಾಗುತ್ತಿದ್ದ 3 ಲಕ್ಷ ಬಡ್ಡಿ ರಹಿತ ಸಾಲ 5 ಲಕ್ಷ ರೂಪಾಯಿಗೆ ಹೆಚ್ಚಳ.
* ಆರ್ಟಿಫಿಷಿಯನ್ ಇಂಟೆಲಿಜೆನ್ಸ ಮೂಲಕ ಟ್ರಾಫಿಕ್ ನಿರ್ವಹಣೆಗೆ ಯೋಜನೆ. 75 ಜಂಕ್ಷನ್ ಅಭಿವೃದ್ಧಿ.
* ಅಮೃತ ನಗರೋತ್ಥಾನ ಯೋಜನೆಯಡಿ ಬೆಂಗಳೂರಿನಲ್ಲಿ 6,000 ಕೋಟಿ ಕಾಮಗಾರಿಗಳಿಗೆ ಒತ್ತು.
* ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಯಾದ ಬಳಿಕ ತಾಯಿ ಮತ್ತು ಮಗು ಮನೆಗೆ ತೆರಳಲು ನಗು–ಮಗು ವಾಹನ.
* ಮಹಿಳಾ ಸಂಘಟಿತ ಕಾರ್ಮಿಕರಿಗೂ ಉಚಿತ ಬಸ್ ಪಾಸ್, 30 ಲಕ್ಷ ಮಹಿಳೆಯರಿಗೆ ಉಚಿತ ಬಸ್ ಪಾಸ್.
* ನೇಕಾರರು, ಮೀನುಗಾರರಿಗೂ ರೈತ ವಿದ್ಯಾನಿಧಿ ಯೋಜನೆ ವಿಸ್ತರಣೆ
* 73 ಕರ್ನಾಟಕ ಪಬ್ಲಿಕ್ ಶಾಲೆ ಮತ್ತು 50 ಆದರ್ಶ ವಿದ್ಯಾಲಯ ಸ್ಥಾ‍ಪನೆ
* ಗ್ರಾಮ ಪಂಚಾಯ್ತಿ ಸದಸ್ಯರು, ಅತಿಥಿ ಶಿಕ್ಷಕರು, ಗ್ರಂಥಾಲಯ ಸಿಬ್ಬಂದಿ, ಆಶಾ, ಅಂಗನವಾಡಿ ಮತ್ತು ಬಿಸಿಯೂಟ ಸಹಾಯಕರ ಗೌರವ ಧನ 1000 ಹೆಚ್ಚಳ.
* ಕೊಪ್ಪಳದ ಅಂಜನಾದ್ರಿ ಬೆಟ್ಟದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ 100 ಕೋಟಿ.
* ಆಯುಷ್ಮಾನ್ ಭಾರತ್ ಆರೋಗ್ಯ ವಿಮಾ ಯೋಜನೆಯಡಿ ತೃತೀಯ ಹಂತದ ಆರೈಕೆ ಒದಗಿಸಲು ಕೋಲಾರ, ಬಾಗಲಕೋಟೆ, ಯಾದಗಿರಿ, ಗದಗ, ಚಿಕ್ಕಮಗಳೂರು, ರಾಮನಗರ, ವಿಜಯನಗರ ಹಾಗೂ ದೊಡ್ಡಬಳ್ಳಾಪುರದಲ್ಲಿ 50 ಹಾಸಿಗೆಗಳ ಕ್ರಿಟಿಕಲ್ ಕೇರ್ ವಿಭಾಗ ಸ್ಥಾಪನೆ.
* ಕೇಂದ್ರದ ಪ್ರಸಾದ್ ಯೋಜನೆಯಡಿ ಚಾಮುಂಡಿ ಬೆಟ್ಟ ಅಭಿವೃದ್ಧಿ.
* ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ 5 ಕೋಟಿ ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಾಣ.

Leave a Reply

Your email address will not be published. Required fields are marked *

error: Content is protected !!