ಹೈಟೆಕ್ ಆಸ್ಪತ್ರೆಯಲ್ಲಿ  ಅತ್ಯಾಧುನಿಕ ಕನಿಷ್ಠ ಗಾಯದ ಹೃದ್ರೋಗ ಶಸ್ತ್ರಚಿಕಿತ್ಸೆ ಆರಂಭ

 

ದಾವಣಗೆರೆ.ಜೂ.೩೦; ಎಸ್.ಎಸ್.ನಾರಾಯಣ ಹಾರ್ಟ್ ಸೆಂಟರ್ ಕರ್ನಾಟಕದ ದಾವಣಗೆರೆಯಲ್ಲಿರುವ ತನ್ನ ಆಸ್ಪತ್ರೆ ಆವರಣದಲ್ಲಿ ಕನಿಷ್ಠ ಗಾಯದ ಹೃದಯ ಶಸ್ತ್ರಚಿಕಿತ್ಸಾ ವಿಭಾಗ ಆರಂಭಿಸಿದೆ. ಮಿನಿಮಲ್ ಇನ್‌ವೇಸಿವ್ ಕಾರ್ಡಿಯಾಕ್ ಸರ್ಜರಿ ಅಥವಾ ಕೀ ಹೋಲ್ ಹೃದಯ ಶಸ್ತçಚಿಕಿತ್ಸೆ ಹೃದಯ ರೋಗಗಳಿಗೆ ಚಿಕಿತ್ಸೆ ನೀಡುವ ವಿನೂತನ ಅನುಶೋಧನೆಯಾಗಿದೆ. ಇದಕ್ಕಾಗಿಯೇ ವಿಶೇಷ ವಿಭಾಗವನ್ನು ತೆರೆಯಲಾಗಿದ್ದು, ಇದು ಅತ್ಯಾಧುನಿಕ ಹಾಗೂ ತೀರಾ ಅತ್ಯುನ್ನತ ಸಲಕರಣೆಗಳು ಮತ್ತು ವ್ಯಾಪಕ ಅನುಭವ ಇರುವ ತಂಡವನ್ನು ಒಳಗೊಂಡಿದೆ.

ಕನಿಷ್ಠ ಗಾಯದ ಹೃದಯ ಶಸ್ತ್ರ

ಚಿಕಿತ್ಸೆ ಹೃದ್ರೋಗಗಳಿಗೆ ಚಿಕಿತ್ಸೆ ನೀಡುವಲ್ಲಿ ಬಹಳಷ್ಟು ಪ್ರಯೋಜನಕಾರಿ. ಕೆಲ ಬಗೆಯ ಹೃದ್ರೋಗಗಳಿಗೆ ಕನಿಷ್ಠ ಗಾಯದ ಶಸ್ತçಚಿಕಿತ್ಸೆಯೇ ಅತ್ಯಂತ ಸೂಕ್ತವಾಗಿದೆ.

ದಾವಣಗೆರೆ ತಂಡದಲ್ಲಿ ಇಂಥ ಶಸ್ತ್ರ

ಚಿಕಿತ್ಸೆಯನ್ನು ಹೃದ್ರೋಗ ಶಸ್ತ್ರ

ಚಿಕಿತ್ಸಾ ಸಲಹಾತಜ್ಞ ಡಾ. ಮುರಳೀಬಾಬು, ಡಾ. ರವಿವರ್ಮ ಪಾಟೀಲ್, ಹೃದ್ರೋಗ ಅರಿವಳಿಕೆ ತಜ್ಞ ಡಾ.ಪ್ರಶಾಂತ್ ಹಾಗೂ ಡಾ.ಸುಜಿತ್ ಎಚ್.ಎಂ. ಅವರನ್ನು ಒಳಗೊಂಡ ತಂಡ ನಿರ್ವಹಿಸುತ್ತದೆ.

Leave a Reply

Your email address will not be published. Required fields are marked *

error: Content is protected !!