sky deck; ಬೆಂಗಳೂರಿನಲ್ಲಿ ತಲೆ ಎತ್ತಲಿದೆಯಾ ದೇಶದಲ್ಲೇ ಅತೀ ಎತ್ತರದ ಸ್ಕೈ-ಡೆಕ್!?

ಡಿಕೆಶಿ ತನಿಖೆಗೆ ತಡೆ ಆದೇಶ ವಿಚಾರಣೆ ಮುಂದಕ್ಕೆ

ಬೆಂಗಳೂರು, ಅ.18: ಬೆಂಗಳೂರಿನ ಹೃದಯ ಭಾಗದಲ್ಲಿ ದೇಶದಲ್ಲೇ ಅತೀ ಎತ್ತರದ ಅಂದರೆ ಸುಮಾರು 250 ಮೀಟರ್ ಎತ್ತರದ ಸ್ಕೈ-ಡೆಕ್ (sky deck)(ವೀಕ್ಷಣಾ ಗೋಪುರ) ನಿರ್ಮಾಣ ಮಾಡುವ ಪ್ರಸ್ತಾವನೆಯನ್ನು ಬೆಂಗಳೂರು ಅಭಿವೃದ್ಧಿ ಸಚಿವರು ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನೀಡಿದ್ದಾರೆ.

ಮಂಗಳವಾರ ಡಿ.ಕೆ.ಶಿವಕುಮಾರ್ ಅವರು ಈ ಕುರಿತು ಆಷ್ಟ್ರೀಯಾ ಮೂಲದ ಕೂಪ್ ಹಿಮೆಲ್ಬಿಯ್ಯು [Coop Himmelb(I)au] ವಾಸ್ತುಶಿಲ್ಪ ಕಂಪನಿಯೊಂದಿಗೆ ಮಾತುಕತೆ ನಡೆಸಿದ್ದು, ಗೋಪುರಕ್ಕೆ ತಗುಲುವ ಖರ್ಚು-ವೆಚ್ಚ, ಕಟ್ಟಡದ ವಿನ್ಯಾಸ, ಬೇಕಾಗುವ ಸ್ಥಳಾವಕಾಶದ ಕುರಿತು ಚರ್ಚಿಸಿದ್ದಾರೆ.

lorry; ಮಳೆ, ಬೆಳೆ ಕೊರತೆ, ಯಾರ್ಡ್ ಗಳಲ್ಲಿ ನಿಂತಲ್ಲೇ ನಿಂತ ಲಾರಿಗಳು..!

ಈ ಗೋಪುರವು ಆಲದ ಮರದ ರೀತಿಯಲ್ಲಿ ನಿರ್ಮಾಣ ಮಾಡುವ ಯೋಜನೆಯನ್ನು ಹಮ್ಮಿಕೊಂಡಿದ್ದು, ಇದರಲ್ಲಿ ರೋಲರ್-ಕೋಸ್ಟರ್, ಎಕ್ಸಿಬಿಷನ್, ಬೆಂಗಳೂರಿನ ಪಕ್ಷಿನೋಟವನ್ನು ಕಣ್ತುಂಬಿಕೊಳ್ಳುವುದ್ದಕ್ಕೆ ಸ್ಕೈ-ಡೆಕ್, ಸ್ಕೈ-ಲಾಬಿ, ರೆಸ್ಟೋರೆಂಟ್, ಬಾರ್, ಶಾಪಿಂಗ್ ಪ್ಯಾಸೆಜ್ ಸೇರಿದಂತೆ ಹತ್ತು ಹಲವು ಮನೋರಂಜನಾ ಸೌಲಭ್ಯಗಳು ಇರಲಿವೆ.

ಈ ಯೋಜನೆ ಯಶಸ್ವಿಯಾಗಬೇಕಾದರೆ ಅಥವಾ ಈ ಕಟ್ಟಡ ನಿರ್ಮಾಣವಾಗಬೇಕದರೆ, ಸುಮಾರು 8 ರಿಂದ 10 ಎಕರೆ ಜಾಗದ ಅವಶ್ಯಕತೆಯಿದ್ದು, ಬೆಂಗಳೂರಿನ ಹೃದಯ ಭಾಗದಲ್ಲಿ ಗುರುತಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!