renukacharya; ಸಮರ್ಥ ನಾಯಕನಿಲ್ಲದ ಕಾರಣ ಬಿಜೆಪಿ ತೊರೆಯುತ್ತಿರುವ ನಾಯಕರು

ದಾವಣಗೆರೆ, ಅ.18: ಬಿಜೆಪಿ ಪಕ್ಷದಲ್ಲಿ ಸಮರ್ಥ ನಾಯಕನಿಲ್ಲದ್ದ ಕಾರಣದಿಂದ ಹಲವು ಕಾರ್ಯಕರ್ತರು ಬಿಜೆಪಿ ಪಕ್ಷವನ್ನು ತೊರೆಯುವುದಾಗಿ ಕರೆ ಮಾಡಿ ತಿಳಿಸುತ್ತಿದ್ದು, ಇವರಿಗೆ ನನ್ನ ಮೇಲೂ ನಂಬಿಕೆಯಿಲ್ಲ ಎಂದು ಎಂ.ಪಿ. ರೇಣುಕಾಚಾರ್ಯ (renukacharya) ಸ್ಪೋಟಕ ಮಾಹಿತಿ ನೀಡಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೊನ್ನಾಳಿ ಜಿಲ್ಲೆಯ ನ್ಯಾಮತಿ ತಾಲೂಕು ಬರಗಾಲ ಪಟ್ಟಿಗೆ ಸೇರ್ಪಡಿಸಲು ಒತ್ತಾಯಿಸಿದ್ದೇನೆ. ತಾಲೂಕಿಗೆ ಬರಬೇಕಾದ ಅನುದಾನ ಬಾಕಿಯಿದ್ದಾಗ ಮರುಚಾಲನೆ ಕೊಡುವಂತೆ ಕಾಂಗ್ರೆಸ್ ನಾಯಕರನ್ನು ಭೇಟಿಯಾಗಿ ಒತ್ತಾಯಿಸಿದ್ದೇನೆ. ಆದರೆ, ನಾನು ಇಲ್ಲಿಯವರೆಗೂ ಬಿಜೆಪಿ ಪಕ್ಷ ಬಿಟ್ಟು ಕಾಂಗ್ರೆಸ್ ಸೇರುತ್ತೇನೆಂದು ಎಲ್ಲಿಯೂ ಹೇಳಿಲ್ಲ ಎಂದು ತಿಳಿಸಿದರು.

ಸಂಸದ ಸಿದ್ದೇಶ್ವರ್ ಅವರು ವಯಸ್ಸಿನಲ್ಲಿ ನಮಗಿಂತ ಹಿರಿಯರು. ಅವರ ಮೇಲೆ ನನಗೆ ಅಪಾರ ಗೌರವವಿದೆ. ಆದರೆ, ಅವರ ತಂದೆ ಮಲ್ಲಿಕಾರ್ಜುನಪ್ಪನವರ ಮೂರು ಚುನಾವಣೆಗಳು ಮತ್ತು ಸಿದ್ದೇಶ್ವರ್ ಅವರ ನಾಲ್ಕು ಚುನಾವಣೆಗಳನ್ನು ನಡೆಸಿದ್ದೇವೆ. ಪಕ್ಷದಲ್ಲಿ ನಾನು ಸಿದ್ದೇಶ್ವರ್ ಅವರಿಗಿಂತ ಸೀನಿಯರ್ ಆಗಿದ್ದರು ಸಹ ಅಧಿಕೃತವಾಗಿ ಯಾರಿಗೂ ಎಂಪಿ ಟಿಕೆಟ್ ಘೋಷಣೆ ಮಾಡಲಿಲ್ಲ. ಈ ಕುರಿತು ಸಿದ್ದೇಶ್ವರ್ ಬಳಿ ಮಾತನಾಡಿದರೆ, ಪಕ್ಷದಲ್ಲಿ ಇರುವವರು ಇರಲಿ, ಹೋಗುವವರು ಹೋಗಲಿ ಎಂದು ಸಿದ್ದೇಶ್ವರ್ ಅವರು ಹೇಳುವುದು ಎಷ್ಟರ ಮಟ್ಟಿಗೆ ಸರಿ ಎಂದು ಕಿಡಿಕಾರಿದರು.

job fair; ಜಿ.ಮಲ್ಲಿಕಾರ್ಜುನಪ್ಪ ಹಾಲಮ್ಮ ಚಾರಿಟಿ ಫೌಂಡೇಶನ್ ನಿಂದ ಉದ್ಯೋಗ ಮೇಳ

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಜಾರಿಯಲ್ಲಿದ್ದಾಗ ಆರು ಸಚಿವ ಸ್ಥಾನ ಖಾಲಿ ಇತ್ತು. ಜಿಲ್ಲೆಯಲ್ಲಿ ರಾಜೂ ಗೌಡ ಮತ್ತು ನನಗೂ ಅನ್ಯಾಯ ಮಾಡಿದರು. ಕಡೆಪಕ್ಷ ಎಸ್.ಎ ರವೀಂದ್ರನಾಥ್ ಅವರಿಗೂ ಕೊಡಲಿಲ್ಲ. ಮಾಡಾಳ್, ಗುರುಸಿದ್ದನಗೌಡ ಸೇರಿದಂತೆ ಅನೇಕ ಕಾರ್ಯಕರ್ತರನ್ನು ಮೂಲೆ ಗುಂಪು ಮಾಡುವ ತಂತ್ರಗಾರಿಕೆ ನಡೆಯುತ್ತಿದ್ದು, ವಿನಾಕಾರಣ ಅಪಪ್ರಚಾರ ಮಾಡಲಾಗುತ್ತಿದೆ. ಪಕ್ಷದಲ್ಲಿ ಸರ್ವಾಧಿಕಾರಿ ಧೋರಣೆ ನಡೆಯುತ್ತಿದ್ದು ಅದನ್ನು ಖಂಡಿಸುತ್ತೇನೆ ಎಂದರು.

ಜಿಲ್ಲೆಯಲ್ಲಿ ಟಿಕೇಟ್ ಆಕಾಂಕ್ಷಿಗಳನ್ನು ಮುಗಿಸುವ ಕೆಲಸ ಮಾಡಿದ್ದಲ್ಲದೇ, ನಾನು ಟಿಕೆಟ್ ಆಕಾಂಕ್ಷಿ ಆದಾಕ್ಷಣ ಸಂಸದ ಸಿದ್ದೇಶ್ವರ್ ಅವರು ವ್ಯವಸ್ಥಿತವಾಗಿ ನನ್ನನ್ನು ಮುಗಿಸುವ ಕೆಲಸ ಮಾಡಿದ್ದಾರೆ ಎಂದು ಜಿ.ಎಂ ಸಿದ್ದೇಶ್ವರ್ ವಿರುದ್ದ ಹರಿಹಾಯ್ದರು.

Leave a Reply

Your email address will not be published. Required fields are marked *

error: Content is protected !!