Hindu-muslim; ಮುಸ್ಲಿಂ ಗೆಳೆಯನ ಆರೋಗ್ಯಕ್ಕಾಗಿ ತುಲಾ ಭಾರ ಹರಕೆ ತೀರಿಸಿದ ಹಿಂದೂ ಸ್ನೇಹಿತ

ದಾವಣಗೆರೆ, ಅ.13: ಕಾಲವನ್ನೂ ತಡೆಯೋರು ಯಾರು ಇಲ್ಲ, ನಿನ್ನಿಂದ ನನ್ನ, ನನ್ನಿಂದ ನಿನ್ನ ದೂರ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂಬ ಹಾಡು ನಿಮಗೆ ಗೊತ್ತಿದ್ದೇ ಇದೆ…ಸಾಹಸ ಸಿಂಹ ವಿಷ್ಣುವರ್ಧನ್ ತನ್ನ ಸ್ನೇಹಿತನಿಗಾಗಿ ಪ್ರಾಣ ಕೊಡಲು ಸಿದ್ದನಾಗಿರುತ್ತಾನೆ…ಇದು ಚಲನಚಿತ್ರ ಕಥೆಯಾದರೆ, Hindu-muslim ನಿಜವಾದ ಜೀವನದಲ್ಲಿ ವ್ಯಕ್ತಿಯೊಬ್ಬರು ತನ್ನ ಸ್ನೇಹಿತನ ಆರೋಗ್ಯಕ್ಕಾಗಿ ಹರಕೆ ಹೊತ್ತಿದ್ದು, ಧರ್ಮಸ್ಥಳದಲ್ಲಿ ಅವನ ಹೆಸರಿನಲ್ಲಿ ತುಲಾಭಾರ ನಡೆಸಿದ್ದಾರೆ.

ಇದು..ಈ ಸ್ಟೋರಿಯ ಕಥಾಹಂದರವಷ್ಟೇ..ಆದರೆ ಇದರ ಮುಂದುವರಿದ ಭಾಗ ಸಖತ್ ಇಂಟ್ರೆಸ್ಟಿಂಗ್ ಇದ್ದು, ಅದರ ಕಂಪ್ಲೀಟ್ ಡೀಟೆಲ್ಸ್ ನಿಮ್ಮ ಮುಂದೆ ಇಡುತ್ತಿದ್ದೇವೆ..ಹಾಗಾದ್ರೆ ಆ ಕಥೆ ಏನು ಬನ್ನಿ ನೋಡೋಣ….

ಒಬ್ಬ ವಕೀಲ ಮುಸ್ಲಿಂ ಸಮುದಾಯ, ಇನ್ನೊಬ್ಬ ಉದ್ಯಮಿ ಅರುಣ್ ಹಿಂದೂ ಸಮುದಾಯದವರಾಗಿದ್ದು, ಮುಸ್ಲಿಂ ವಕೀಲ ಅನೀಸ್ ಪಾಷಾ ಎಂಬುವರ ಬಳಿ ಉದ್ಯಮಿ ಅರುಣ್ ಒಂದು ಕೇಸ್‌ನ ಸಲುವಾಗಿ ಬರುತ್ತಾರೆ. ಆ ಕೇಸ್‌ನ್ನು ವಕೀಲ ಅನೀಸ್ ಪಾಷಾ ಗೆದ್ದು ಕೊಡುತ್ತಾರೆ. ವಕೀಲ ಅನಿಸ್ ಪಾಷ ಹಾಗೂ ಅರುಣ್ ಕುಚಿಕು ಗೆಳೆಯರಾಗುತ್ತಾರೆ. ಅಲ್ಲಿಂದ ಈ ಗೆಳೆತನ ಶುರುವಾಗುತ್ತದೆ. ಹೀಗಿರುವಾಗ ಕೊರೊನಾ ಸಮಯದಲ್ಲಿ ವಕೀಲ ಅನೀಸ್ ಪಾಷಾಗೆ ಹೃದಯಸಂಬಂಧಿ ಕಾಯಿಲೆ ಬರುತ್ತದೆ. ಇದರಿಂದ ಬೇಸರಗೊಂಡ ಗೆಳೆಯ ಅರುಣ್ ತನ್ನ ಸ್ನೇಹಿತ ಅನೀಸ್ ಪಾಷಾ ‘ಗುಣಮುಖರಾಗಲಿ’ ಎಂದು ಧರ್ಮಸ್ಥಳದ ಮಂಜುನಾಥ ಸ್ವಾಮಿಗೆ ತುಲಾಭಾರ ಮಾಡಿಸುತ್ತೇನೆ ಎಂದು ಹರಕೆ ಹೊತ್ತಿರುತ್ತಾರೆ. ಸ್ನೇಹಿತ ಅನೀಸ್ ಪಾಷಾ ಗುಣಮುಖರಾದ ಕಾರಣ ಕಳೆದ ವಾರವಷ್ಟೇ ಧರ್ಮಸ್ಥಳಕ್ಕೆ ಕರೆದೊಯ್ದು ಅರುಣ್ ದೇವರ ದರ್ಶನ, ಅಭಿಷೇಕ ಮಾಡಿಸಿ, ಅವರ ತುಲಾಭಾರ ಸೇವೆ ಸಲ್ಲಿಸಿದ್ದಾರೆ. ಇದಕ್ಕೆ ಸಹಕರಿಸಿದ ಮುಸ್ಲಿಂ ಸ್ನೇಹಿತ ಇತರರಿಗೆ ಮಾದರಿಯಾಗಿದ್ದಾರೆ.

Education; ಚಿಂದಿ ಆಯುವವರ ಮಕ್ಕಳಿಗೆ 6ನೇ ತರಗತಿಗೆ ದಾಖಲಾತಿ: ಪಿ.ಮಣಿವಣ್ಣನ್

‘ನನ್ನ ವೃತ್ತಿಯಲ್ಲಿ ಸಾಕಷ್ಟು ಕಕ್ಷಿದಾರರನ್ನು ಕಂಡಿದ್ದೇನೆ. ಆದರೆ, ಕಕ್ಷಿದಾರರಾಗಿ ಪರಿಚಿತರಾದ ಅರುಣ್ ಕುಮಾರ್ ತುಂಬಾ ಹತ್ತಿರವಾದರು. ಇಬ್ಬರೂ ಕುಟುಂಬ ಸ್ನೇಹಿತರಾಗಿದ್ದೇವೆ. 2021ರಲ್ಲಿ ಇದ್ದಕ್ಕಿದ್ದಂತೆಯೇ ಎದೆ ನೋವು ಕಾಣಿಸಿಕೊಂಡಿದ್ದರಿಂದ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆದೆ. ಹೃದಯದ ರಕ್ತನಾಳ ಎರಡು ಕಡೆ ಬ್ಲಾಕ್ ಆಗಿದ್ದರಿಂದ ಸ್ಟಂಟ್ ಅಳವಡಿಸಿದರು. ಈ ಸಂಬಂಧ ಗೆಳೆಯ ಅರುಣ್ ನನ್ನ ಆರೋಗ್ಯ ಸುಧಾರಣೆಗಾಗಿ ಹರಕೆ ಹೊತ್ತಿದ್ದರು. ಈಚೆಗೆ ಧರ್ಮಸ್ಥಳಕ್ಕೆ ಒಟ್ಟಿಗೇ ತೆರಳಿ ಹರಕೆ ತೀರಿಸಿ ಬಂದೆವು’ ಎಂದು ಅನಿಸ್ ಪಾಷ ತಿಳಿಸಿದರು.

Mahisha dasara; ಮೈಸೂರು ವ್ಯಾಪ್ತಿಯಡಿ ಸೆಕ್ಷನ್ 144 ಜಾರಿ

‘ನಮ್ಮ ಧರ್ಮ ಆಚರಣೆಗಳು ಬೇರೆಯಾದರೂ ಅರುಣ್ ಅವರ ಧಾರ್ಮಿಕ ನಂಬಿಕೆಗಳಿಗೆ ಯಾವುದೇ ಧಕ್ಕೆಯಾಗದಂತೆ ಹರಕೆ ನೆರವೇರಿಸಿದ್ದೇನೆ. ದಯವೇ ಧರ್ಮದ ಮೂಲವಯ್ಯ ಎಂಬ ಬಸವಣ್ಣನವರ ವಚನ, ಇನ್ನೊಬ್ಬರ ಭಾವನೆಗಳಿಗೆ ಧಕ್ಕೆಯಾಗದಂತೆ ಬದುಕುವುದೇ ನಿಜವಾದ ಧರ್ಮ ಎಂಬ ಖುರಾನ್ ಸಾಲುಗಳಂತೆ ನಾವು ಎಲ್ಲರೊಳಗೆ ಒಂದಾಗಿ ಬದುಕುತ್ತಿದ್ದೇವೆ’ ಎಂದು ಅವರು ವಿವರಿಸಿದರು. ಏನೇ ಆಗಲಿ ತಾನು ಹಿಂದು, ತಾನೂ ಮುಸ್ಲಿಂ ಎಂದು ಘರ್ಷಣೆಗೊಳಗಾಗುವ ಈ ಸಂದರ್ಭದಲ್ಲಿ ಜಾತಿ, ಬೇಧ ಮರೆತು, ಗೆಳೆಯನ ಆರೋಗ್ಯಕ್ಕಾಗಿ ಹರಕೆ ಹೊತ್ತ ಹಿಂದೂ ಭಕ್ತನ ಚಿಂತನೆ ಗ್ರೇಟ್ ಅಲ್ವ….

Leave a Reply

Your email address will not be published. Required fields are marked *

error: Content is protected !!