ಹೇಳಿದ ಸ್ಥಳಕ್ಕೆ ಕರೆತರುತ್ತೇನೆ ತಾಕತ್ತಿದ್ದರೆ ಕೊಲೆಮಾಡಿ ಬಿಜೆಪಿಗರಿಗೆ ಸುರ್ಜೀವಾಲ ಸವಾಲು

ಕೊಲೆಮಾಡಿ ಬಿಜೆಪಿಗರಿಗೆ ಸುರ್ಜೀವಾಲ ಸವಾಲು
ಮಂಡ್ಯ: ನೀವು ಹೇಳಿದ ಸಮಯಕ್ಕೆ, ಸ್ಥಳಕ್ಕೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರನ್ನು ಕರೆದುಕೊಂಡು ಬರುತ್ತೇವೆ. ನಿಮಗೆ ತಾಕತ್ ಇದ್ದರೆ ಅವರನ್ನು ಕೊಲೆ ಮಾಡಿ ಎಂದು ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸವಾಲು ಹಾಕಿದ್ದಾರೆ.
ಮಂಗಳವಾರ ಕಾಂಗ್ರೆಸ್ ಭರವಸೆಗಳ ಬಾಂಡ್ ಬಿಡುಗಡೆ ಮಾಡಿ ಮಾತನಾಡಿದ ಅವರು ಕೊಲೆ ಮಾಡುವುದು ಬಿಜೆಪಿ ಸಂಸ್ಕೃತಿ ಎಂದು ಕಿಡಿಕಾರಿದ್ದಾರೆ.
ನಾವು ದೇಶದ ಅಭಿವೃದ್ಧಿ, ಬಡವರ ಬದುಕಿನ ಪರವಾಗಿ ಮಾತನಾಡುತ್ತಿದ್ದೇವೆ. ಆದರೆ ‘ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವ ಅಶ್ವತ್ಥನಾರಾಯಣ ಕೊಲೆ ಮಾಡುವ ಮಾತುಗಳನ್ನಾಡುತ್ತಿದ್ದಾರೆ ಎಂದು ಟೀಕಿಸಿದರು.
ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯನ್ನು ಕೊಂದರು. ದೇಶದ ಉಕ್ಕಿನ ಮಹಿಳೆ ಎನಿಸಿಕೊಂಡಿದ್ದ ಇಂದಿರಾ ಗಾಂಧಿಯ ದೇಹಕ್ಕೆ 50 ಗುಂಡು ಹೊಡೆದು ಕೊಂದರು, ಪ್ರೀತಿಯ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ಅವರ ದೇಹವನ್ನು ಛಿದ್ರಛಿದ್ರಗೊಳಿಸಿದರು ಇದು ಬಿಜೆಪಿ ಕೊಲೆ ಮಾಡುವ ಸಂಸ್ಕೃತಿಗೆ ಸಾಕ್ಷಿ ಎಂದರು.