ವೀರ ಸೇನಾನಿ ಷಹಾಜಿ ಮಹಾರಾಜರಿಗೆ ಅವಮಾನ ಖಂಡನೀಯ – ಸುರೇಶ್.ಎಂ.ಜಾಧವ್
ಬೆಂಗಳೂರು: ಭಾರತ ದೇಶವು ಇಡೀ ವಿಶ್ವದಲ್ಲೇ ಏಕತೆಗಾಗಿ,ಸರ್ವಧರ್ಮಕ್ಕಾಗಿ,ಪ್ರಜಾಪ್ರಭುತ್ವಕ್ಕಾಗಿ ಹೆಸರುವಾಸಿಯಾಗಿದೆ ಕಾರಣ ಇಲ್ಲಿನ ಐತಿಹಾಸಿಕ ಮಹಾಪುರುಷರು ಇಂಥಾ ಐತಿಹಾಸಿಕ ಮಹಾಪುರುಷರನ್ನು ಅವಮಾನಿಸಿವುದು ಇಡೀ ದೇಶಕ್ಕೆ ಅವಮಾನಿಸಿದಂತೆ ಅದರಂತೆಯೇ ದೇಶ ಕಂಡ ಅಪ್ರತಿಮ ಸೇನಾನಿ ಷಹಾಜಿ ಮಹಾರಾಜರಿಗೆ ಅವಮಾನಿಸಿರುವುದು ಖಂಡನೀಯವಾಗಿದೆ ಎಂದು ಮರಾಠ ಸಮಾಜದ ಯುವ ಮುಖಂಡರಾದ ಸುರೇಶ್.ಎಂ.ಜಾಧವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಲವಾರು ಐತಿಹಾಸಿಕ ಪುರುಷರು ತಮ್ಮದೇ ಆದ ಐತಿಹಾಸಿಕ ಹಿನ್ನಲೆ ಹೊಂದಿದ್ದಾರೆ ಆದ್ದರಿಂದ ಅವರು ಇತಿಹಾಸ ಪುರುಷರಾಗಿದ್ದಾರೆ ಅವರೆಲ್ಲರ ತತ್ವ,ಸಿದ್ದಾಂತ, ತ್ಯಾಗ ಬಲಿದಾನ ಮುಂದಿನ ನಮ್ಮ ಪೀಳಿಗೆ ಆದರ್ಶವಾಗಬೇಕಿದೆ ಈ ನಿಟ್ಟಿನಲ್ಲಿ ಯುವಕರು ನಿಜವಾದ ಇತಿಹಾಸ ಅರಿಯಬೇಕು ಎಂದು ಯುವಕರಿಗೆ ಕರೆ ನೀಡಿದ್ದಾರೆ.
ದೇಶದ ಮೊದಲ ಪ್ರಧಾನಿಯಿಂದ ಹಿಡಿದು ಎಲ್ಲಾ ಪ್ರಧಾನಿಗಳು,ಎಲ್ಲಾ ಮುಖ್ಯಮಂತ್ರಿಗಳು, ಷಹಾಜಿ,ಶಿವಾಜಿ ಮಹಾರಾಜರ ವಿಷಯದಲ್ಲಿ ಗೌರವಾನ್ವಿತವಾಗಿ ನಡೆದುಕೊಂಡು ಬಂದಿದ್ದಾರೆ ಈಗ ಕೆಲವರು ಇತಿಹಾಸ ಗೊತ್ತಿಲ್ಲದೆ ಆಕ್ಷೇಪಿಸುತ್ತಿದ್ದಾರೆ.
ಇತ್ತೀಚೆಗೆ ಕರ್ನಾಟಕ ಸರ್ಕಾರವು ಹಿಂದೂ ಹೃದಯ ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜರ ತಂದೆ ಷಹಾಜಿ ಭೋಸ್ಲೆ ರವರ ಸಮಾಧಿ ಅಭಿವೃದ್ಧಿಗಾಗಿ 5 ಕೋಟಿ ಹಣವನ್ನು ಮೀಸಲಿಟ್ಟಿದ್ದು ಸ್ವಾಗತಾರ್ಹವಾಗಿದೆ ಆದರೆ ಕೆಲವರು ಇದನ್ನು ವಿರೋಧಿಸುತ್ತಿರುವುದು ಸರಿಯಲ್ಲ. ವೀರ ಸೇನಾಧಿಕಾರಿಯಾಗಿದ್ದ ಷಹಾಜಿ ಮಹಾರಾಜರ ಸಮಾಧಿ ನಮ್ಮ ಕರ್ನಾಟಕದಲ್ಲಿ ಅದರಲ್ಲೂ ನಮ್ಮ ದಾವಣಗೆರೆ ಜಿಲ್ಲೆಯಲ್ಲಿರುವುದು ಪ್ರತಿಯೊಬ್ಬರಿಗೂ ಹೆಮ್ಮೆಯ ವಿಷಯವಾಗಿದೆ ಕರ್ನಾಟಕಕ್ಕೆ ಷಹಾಜಿ, ಶಿವಾಜಿ ಮಹಾರಾಜರ ಕೊಡುಗೆ ಅಪಾರವಾಗಿದೆ ದಕ್ಷಿಣ ಭಾರತದಲ್ಲಿ ಪರಕೀಯರ ದಾಳಿಯಿಂದಾಗಿ ಹಿಂದುಗಳು ಅಪಾಯದಲ್ಲಿದ್ದರು ಆ ಸಂಧರ್ಭದಲ್ಲಿ ಬಿಜಾಪುರದ ಸುಲ್ತಾನರೊಂದಿಗೆ ಸೇರಿ ಮೊತ್ತ ಮೊದಲ ಬಾರಿಗೆ ಗೆರಿಲ್ಲಾ ತಂತ್ರಗಾರಿಕೆಯಿಂದ ಶತ್ರುಗಳನ್ನು ಹಿಮ್ಮೆಟ್ಟಿಸುವಲ್ಲಿ ಸಫಲರಾಗಿದ್ದರು ಅದೇ ಗೆರಿಲ್ಲಾ ತಂತ್ರ ಮುಂದೆ ಶಿವಾಜಿ ಮಹಾರಾಜರು ಸಹ ಬಳಸಿ ಅನೇಕ ಯುಧ್ದ ಗಳಲ್ಲಿ ಜಯಸಾಧಿಸಿರುವುದು ಇತಿಹಾಸವೇ ಸರಿ.
ಷಹಾಜಿ ಮಹಾರಾಜರು ಬೆಂಗಳೂರಿನಲ್ಲಿಯೂ ತಮ್ಮ ಆಸ್ಥಾನ ಹೊಂದಿದ್ದರು ಇಲ್ಲಿಯ ರಾಧಾ,ಮಾಧವ,ಹಾಗೂಅನೇಕ ವಿದ್ವಾಂಸರನ್ನು ಪೋಷಿಸಿದ್ದು ಇದೆ ಅಲ್ಲದೆ ತಮ್ಮ ಪುತ್ರ ಶಿವಾಜಿಯ ವಿವಾಹವನ್ನು ಇಲ್ಲಿಯ ನಿಂಬಾಳ್ಕರ್ ಕುಟುಂಬದೊಂದಿಗೆ ಏರ್ಪಡಿಸಿದ್ದು ಸಹ ಇಲ್ಲಿಯೇ ಎಂಬುದು ಇತಿಹಾಸದ ಪುಟಗಳಿಂದ ತಿಳಿಯುತ್ತದೆ. ಅಲ್ಲದೇ ಶಿವಾಜಿ ಮಹಾರಾಜರ ರಕ್ಷಣೆಗಾಗಿ ಬಲಾಢ್ಯ ಔರಂಗಜೇಬನನ್ನು ಎದುರು ಹಾಕಿಕೊಂಡ ಕೆಳದಿ ವೀರರಾಣಿ ಚೆನ್ನಮರ ಶೌರ್ಯ ಕೂಡ ಮರೆಯುವ ಹಾಗಿಲ್ಲ ಎಂಬುದನ್ನು ಈಗ ವಿರೋಧಿಸುತ್ತಿರುವವರು ಅರಿಯಬೇಕು.
ಷಹಾಜಿ ಮಹಾರಾಜರ ಸಮಾಧಿ ಈಗ ರಾಷ್ಟ್ರೀಯ ಸ್ಮಾರಕವಾಗಿದೆ ಇಲ್ಲಿಗೆ ಅನೇಕ ಮಹಾನೀಯರು ಭೇಟಿ ನೀಡಿ ದರ್ಶನ ಭಾಗ್ಯ ಪಡೆದಿದ್ದಾರೆ ಇದು ಮರಾಠಿಗರಿಗೆ ತುಂಬಾ ಪುಣ್ಯಸ್ಥಳವಾಗಿದೆ ಇಂಥಾ ಐತಿಹಾಸಿಕ ಸ್ಮಾರಕದ ಬಗ್ಗೆ ಕೇವಲವಾಗಿ ಮಾತನಾಡುವವವರು ಇತಿಹಾಸ ತಿಳಿದುಕೊಂಡು ಮಾತನಾಡಲಿ ಕರ್ನಾಟಕವು ಸರ್ವ ಜನಾಂಗದ ಶಾಂತಿಯ ತೋಟವಾಗಿದೆ ಇಂದು ಕೆಲವು ಸಂಘಟನೆಗಳು ಮಾಡುತ್ತಿರುವ ವಿರೋಧವು ಇಡೀ ಕರ್ನಾಟಕದ ಮರಾಠಿಗರಿಗೆ ಮಾಡುವ ಅವಮಾನಾವಾಗಿದೆ ಇದು ಖಂಡನೀಯವಾಗಿದೆ ಎಂದು ತಿಳಿಸಿದ್ದಾರೆ.
ಕನ್ನಡ ನಾಡು ನುಡಿಯ ವಿಚಾರಕ್ಕೆ ಬಂದರೆ ಇಲ್ಲಿಯ ಮರಾಠಿಗರು ಎಂದಿದಿಗೂ ಈ ನಾಡಿಗೆ ದ್ರೋಹವೆಸಗುವ ಕೆಲಸ ಮಾಡಿಲ್ಲ ಮುಂದೆ ಮಾಡುವುದೂ ಇಲ್ಲ ಈ ವಿಚಾರದಲ್ಲಿ ಮಹಾರಾಷ್ಟ್ರದ ನಡೆಯನ್ನು ಇಲ್ಲಿಯ ಕನ್ನಡಿಗ ಮರಾಠಿಗರು ಖಂಡಿಸುತ್ತಲೇ ಬಂದಿದ್ದಾರೆ ಆದಾಗ್ಯೂ ನಮ್ಮಲ್ಲಿಯ ಕೆಲವರು ನಮ್ಮನ್ನು ನೋಡುವ ದೃಷ್ಟಿಯೇ ಬೇರೆಯಾಗಿದೆ ಈ ಮನಸ್ಥಿತಿ ಬದಲಾಗಬೇಕಿದೆ ನಾವೂ ಸಹ ಇಲ್ಲಿಯವರೇ ಎಂಬುದನ್ನು ಮರೆಯಬಾರದು ಎಂದು ಹೇಳಿದರು.