ಬಿಜೆಪಿಯವರಿಗೆ ತಾಕತ್ ಇದ್ರೆ ಒಗ್ಗಟ್ಟಾಗಿ ಅಭ್ಯರ್ಥಿ ಗೆಲ್ಲಿಸಿಕೊಂಡು ಬರಲಿ. ನಾನೇ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. -ಚನ್ನಗಿರಿ ಕೈ ಶಾಸಕ ಶಿವಗಂಗ ಬಸವರಾಜ್
ಬಿಜೆಪಿಯವರಿಗೆ ತಾಕತ್ ಇದ್ರೆ ಒಗ್ಗಟ್ಟಾಗಿ ಅಭ್ಯರ್ಥಿ ಗೆಲ್ಲಿಸಿಕೊಂಡು ಬರಲಿ.ನಾನೇ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ, ಬೇಕಾದ್ರೆ ಅಡ್ವಾನ್ಸ್ ಆಗಿಯೇ ರಾಜೀನಾಮೆ ಪತ್ರ ಕೊಡ್ತೀನಿ ಎಂದು ದಾವಣಗೆರೆ ಜಿಲ್ಲೆಯ ಚನ್ನಗಿರಿ ಕೈ ಶಾಸಕ ಶಿವಗಂಗ ಬಸವರಾಜ್ ಬಿಜೆಪಿ ಗೆ ಸವಾಲು ಹಾಕಿದ್ದಾರೆ.
ಜಿಲ್ಲಾ ಬಿಜೆಪಿ ಯಲ್ಲಿ ಎರಡು ಟೀಂ ವಿಚಾರಕ್ಕೆ ಪ್ರತಿಕ್ರಿಯಿಸಿದ ಬಸವರಾಜ್ ರವರು ದಾವಣಗೆರೆ ಜಿಲ್ಲೆಯ ಬಿಜೆಪಿ ಟಿಕೆಟ್ ಸಂಸದ ಸಿದ್ದೇಶ್ವರ ಪತ್ನಿ ಗಾಯತ್ರಿಗೆ ನೀಡಿದ್ದಾರೆ.ಅದರ ವಿರುದ್ಧ ರೇಣುಕಾಚಾರ್ಯ ಟೀಂ ಬಂಡಾಯವೆದ್ದಿದೆ.ಇಬ್ಬರು ಒಗ್ಗಟ್ಟಾಗಿ ತಾಕತ್ ಇದ್ರೆ ಈ ಭಾರಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸಿಕೊಂಡು ಬರಲಿ.ಎಂದಿದ್ದಾರೆ
ಈ ಬಾರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪರವಾದ ಅಲೆ ಇದೆ.ಒಂದು ಕತ್ತೆ ನಿಂತ್ರೂ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿಕೊಂಡು ಬರುತ್ತೇವೆ.ಬಿಜೆಪಿಯವರು ಬೇಕು ಅಂತಲೇ ಈ ರೀತಿ ಟೀಂ ಮಾಡಿಕೊಂಡಿದ್ದಾರೆ.ಬಿಜೆಪಿ ಸೋತರೆ ಒಗ್ಗಟ್ಟಿಲ್ಲದ್ದರಿಂದ ಸೋಲಾಯಿತು ಅಂತ ಹೇಳೋಕೆ ಕಾರಣ ಬೇಕು.ಅದಕ್ಕಾಗಿ ಹೀಗೆ ಟೀಂ ಮಾಡಿಕೊಂಡು ಓಡಾಡುತ್ತಿದ್ದಾರೆ.ಅವರಿಗೆ ತಾಕತ್ ಇದ್ರೆ ಬಿಜೆಪಿ ಅಭ್ಯರ್ಥಿ ಗೆಲ್ಲಿಸಿಕೊಂಡು ಬರಲಿ .
ಶಾಮನೂರು ಕುಟುಂಬಕ್ಕೆ ಟಿಕೆಟ್ ನೀಡಿದ ವಿಚಾರವಾಗಿ ದಾವಣಗೆರೆಯಲ್ಲಿ ಶಾಸಕ ಶಿವಗಂಗ ಬಸವರಾಜ್ ಸವಾಲು ಹಾಕಿದ್ದಾರೆ ಗೆಲ್ಲುವ ಅಭ್ಯರ್ಥಿ ಎಂದು ಪರಿಗಣಿಸಿ ಟಿಕೆಟ್ ನೀಡಿದ್ದಾರೆ,ಈ ಬಾರಿ ಮೋದಿಯ ದುರಾಡಳಿತ ಪರಿಣಾಮ ಬೀರುತ್ತದೆ, ಬಿಜೆಪಿಯವರ ಆಟ ನಡೆಯುವುದಿಲ್ಲ ಎಂದು ಕೈ ಶಾಸಕ ಹೇಳಿದ್ದಾರೆ .