Part-1; ಗಣಿ ಸಚಿವರ ತವರಿನಲ್ಲಿ ಅಕ್ರಮ ಮರಳುಗಾರಿಕೆ.! ಪ್ರಶ್ನೆ ಮಾಡಿದ್ರೆ ಇಟ್ಟಿಗೆಯಿಂದ ಹಲ್ಲೆ.! 8 ಜನರ ವಿರುದ್ದ ಎಫ್ ಐ ಆರ್
ದಾವಣಗೆರೆ: ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ತುಂಗಭದ್ರಾ ನದಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ಪ್ರಶ್ನಿಸಿದ ವ್ಯಕ್ತಿಗೆ ಹಲ್ಲೆ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಹಲಸಬಾಳು ಗ್ರಾಮದ ಬಸವರಾಜ್ ಎಂಬುವವರ ಮೇಲೆ ಅದೇ ಗ್ರಾಮದ ಎಂಟು ಜನ ಹಲ್ಲೆ ನಡೆಸಿದ್ದಾರೆ ಎಂದು ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ‌್ದಾರೆ ಬಸವರಾಜ್.
ಬಸವರಾಜ್ ಹರಿಹರ ತಾಲೂಕಿನ ಆಮ್ ಆದ್ಮಿ ಪಕ್ಷದ ತಾಲ್ಲೂಕು ಅದ್ಯಕ್ಷರಾಗಿದ್ದು, ಗ್ರಾಮ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆ ವಿರುದ್ದ ಪ್ರಶ್ನಿಸಿದ್ದಾರೆ ಆದ್ರೆ ದುರಳರು ಇವರ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ.
ದೂರಿನ ಸಾರಾಂಶ ಹೀಗಿದೆ:
ದಿನಾಂಕ 06-03-2024 ರಂದು ರಾತ್ರಿ 10-00 ಗಂಟೆಗೆ ನಮ್ಮ ಊರಿನ ಮಧ್ಯ ಜಿ,ಹೆಚ್ ವೆಂಕಟೇಶ ಹಾಗೂ ಅಂಗಡಿ ಮಂಜಣ್ಣ ಇವರ ಮನೆಯ ಎದುರಿಗೆ ಈ ವ್ಯಕ್ತಿಗಳು ಮಾಡುತ್ತಿರುವ ಅನ್ಯಾಯ ಮತ್ತು ಅಕ್ರಮವನ್ನ ಪ್ರಶ್ನೆ ಮಾಡಿದ್ದು, ಆಗ ಇವರುಗಳು ನನ್ನ ಪ್ರಶ್ನೆಗೆ ಸರಿಯಾದ ಉತ್ತರ ಕೊಡಲಿಲ್ಲ, ಅದರ ಬದಲು ಈ ವ್ಯಕ್ತಿಗಳು ನನ್ನ ಮೇಲೆ ದೌರ್ಜನ್ಮದಿಂದ ವರ್ತಿಸಿ ನನಗೆ ಇಲ್ಲ ಸಲ್ಲದ ಬೈಗುಳಗಳನ್ನು, ಅವಾಚ್ಯ ಶಬ್ದಗಳಿಂದ ಬೈದು ನನ್ನ ಜೀವನಕ್ಕೆ ದಮಕಿ ನೀಡಿ ಪ್ರಾಣ ಬೆದರಿಕೆ ಹಾಕಿದ್ದಾರೆ.
ಈ ಆರೋಪಿಗಳು ನನ್ನನ್ನ ಈ ರೀತಿ ಉದ್ದೇಶಿಸಿ ನೀನು ಏನು ಬೇಕಾದರೂ ಮಾಡಿಕೊಳ್ಳುತ್ತೀಯೋ ಮಾಡಿಕೊ ನಾವು ಮಾಡುತ್ತಿರುವ ಈ ಕಾರ್ಯಕ್ಕೆ ಸಂಬಂದಪಟ್ಟ ವ್ಯಕ್ತಿಗಳೊಡನೆ ಒಪ್ಪಂದ ಮಾಡಿಕೊಂಡಿರುತೇವೆ ಮತ್ತು ನಮ್ಮನ್ನು ಈ ರೀತಿ ಪ್ರಶ್ನೆ ಮಾಡಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ನನಗೆ ‘ಧಮಕಿ ಹಾಕಿರುತ್ತಾರೆ, ಆಗ ನಾನು ಅದಕ್ಕೆ ಹೆದರಿದೆ, ಆರೋಪಿಗಳು ಟ್ರಾಕ್ಟರ್ ನಲ್ಲಿ, ಮರಳನ್ನ ತುಂಬಿಕೊಂಡು ಹೋಗುವುದನ್ನ ತಡೆದೆ, ರೇವಣಪ್ಪ ಬಾರ್ಕಿ ತಂದೆ ನಿಂಗಪ್ಪ ಇವನು ನನ್ನ ಮೇಲೆ ಗೂಂಡಾಗಿರಿ ಮಾಡಿ ಮರಳು ತುಂಬಿದ ಅವರ ಟ್ರ್ಯಾಕ್ಟರ್ ನೋಂದಣಿ ನಂ: KA-17/TE-5640 ನ್ನು ನನ್ನ ಮೇಲೆ ಹತ್ತಿಸಿ ನನ್ನನ್ನು ಮುಗಿಸಿಬಿಡುವ ಪ್ರಯತ್ನ ಮಾಡಿರುತ್ತಾರೆ.
ನಾನು ದಿನಾಂಕ; 12-03-2024 ರಂದು ರಾತ್ರಿ 11-00 ಗಂಟೆ ಸುಮಾರಿಗೆ ನಮ್ಮ ಊರಿನ ಜಿ.ಹೆಚ್, ವೆಂಕಟೇಶ ಇವರ ಮನೆಯ ಎದುರಿಗೆ ನಮ್ಮ ಊರಿನ 1) 1) ರೇವಣಪ್ಪ ಬಾರ್ಕಿ ತಂದೆ ನಿಂಗಪ್ಪ 2) ಮಹಾಂತೇಶ ಬಿನ್ ಹನುಮಂತಪ್ಪ 3) ಚಂದ್ರಶೇಖರ ಬಿನ್ ಸಿದ್ದಪ್ಪ, 4) ರಮೇಶ ಜಿ.ಬಿ ತಂದೆ ಗಂಗಪ್ಪ 5) ಬಸವರಾಜ ಹೆಚ್.ಬಿ ತಂದೆ ಹನುಮಂತಪ್ಪ 6] ಹರೀಶ ತಂದೆ ಗಂಗಪ್ಪ, 7] ಮಾರುತಿ ತಂದೆ ರಘು, 8] ರಮೇಶ ತಂದೆ ರೇವಣಪ್ಪ ಅಕ್ರಮವಾಗಿ ಮರಳನ್ನು ಸಾಗಾಣಿಕೆ ಮಾಡುತ್ತಿರುವಾಗ ನಾನು ಪುನಃ ಅವರನ್ನು ಪ್ರಶ್ನೆ ಮಾಡಿದ್ದಕ್ಕೆ ನೀನ್ನಾವನಲೇ ನಮ್ಮನ್ನ ಕೇಳಲು ಎಂದು ಎಲ್ಲರೂ ಅಕ್ರಮ ಗುಂಪು ಕಟ್ಟಿಕೊಂಡು ಬಂದು ಹೀನಾಯಮಾಗಿ ನನಗೆ ನಿಂದಿಸುತ್ತಾರೆ.
ಸದರಿ ಮೇಲ್ಕಂಡ ರೇವಣಪ್ಪ, ಮಾರುತಿ, ರಮೇಶ, ಹರೀಶ ಇವರುಗಳು ಆಲ್ಲೆ ಇದ್ದ ಒಂದು ಬಡಿಗೆಯಿಂದ ನನ್ನ ಮೈಕೈಗಳಿಗೆ ಬಲವಾಗಿ ಹೊಡೆದು ಹಾಗೂ ರಮೇಶ, ಮಾರುತಿ ಇವರು ಅಲಿಯೇ ಇದ್ದ ಇಟ್ಟಿಗಿಯಿಂದ ನನ್ನ ಹಿಂದೆಲೆಗೆ ಜೋರಾಗಿ ಹೊಡೆದರು. ನಂತರ ಉಳಿದವರು ನನ್ನನ್ನು ಹುರಳಾಡಿಸುತ್ತಾ ಕೈಕಾಲುಗಳಿಂದ ನನ್ನನ್ನು ಹೊಡೆಯುತ್ತಿರುವಾಗ ಚಂದ್ರಶೇಖರ ಅಲ್ಲಿ ಬಿದ್ದಿದ್ದ ಚೂಪಾದ ಕಲ್ಲನ್ನು ತೆಗೆದುಕೊಂಡು ನನ್ನ ಕೈಗಳಿಗೆ ಮತ್ತು ಕುತ್ತಿಗೆ ಹತ್ತಿರ ಮತ್ತು ಹೊಟ್ಟೆಯ ಹತ್ತಿರ ಎಳೆದಿರುತಾನೆ. ಇದರಿಂದ ನನ್ನ ದೇಹಕ್ಕೆ, ತೀವ್ರವಾಗಿ ಪೆಟ್ಟು ಬಿದ್ದು ನನ್ನ ಪ್ರಜ್ಞೆಯು ತಪ್ಪಿ ನನ್ನ ದೇಹಕ್ಕೆ ಬಾಕಿ ರಕ್ತಗಾಯಳಾಗಿರುತ್ತವೆ. ಆಗ ಅವರೆಲ್ಲರೂ ಸೇರಿ ನನ್ನನ್ನು ಸಿಕ್ಕಾಪಟ್ಟಿ ಹಿಗ್ಗಾ ಮುಗ್ಗಾ ಹೊಡೆಯುತ್ತಿರುವಾಗ ಆಲಿಯೇ ಇದ್ದ ವೆಂಕಟೇಶಪ್ಪ ತಂದೆ ಬಸಪ್ಪ ಮತ್ತು ಜಗದೀಶ ತಂದೆ ಮಾಲತೇಶಪ್ಪ ಇವರುಗಳು ಸ್ಥಳಕ್ಕೆ ಬಂದು ನನ್ನನ್ನು ಅವರಿಂದ ಬಿಡಿಸಿದರು.
ಆಗ ಅವರುಗಳಲ್ಲೊಬ್ಬರಾದ ಚಂದ್ರಶೇಖರ್ ಇವನು ನನಗೆ ಈ ರೀತಿ ಹೇಳುತ್ತಾ ಈ ದಿನ ನೀನು ನಮ್ಮ ಕೈಯಿಂದ ನಿನ್ನ ಜೀವವನ್ನ ಉಳಿಸಿಕೊಂಡಿದ್ದೀಯಾ ಮುಂದೆ ಈ ಊರಿನಲಿ.. ನೀನು ಯಾವ ರೀತಿ ಜೀವನ ಮಾಡುತ್ತೀಯಾ ನಾವು ನೋಡುತ್ತೇವೆ ಎಂದು ನನ್ನನ್ನು ಅವಾಚ್ಯ ಶಬ್ದಗಳಿಂದ ಬೈಯುತ್ತಾ ನನಗೆ ಜೀವ ಬೆದರಿಕೆಯನ್ನ ಹಾಕಿ ಧಮುಕಿ ನೀಡಿರುತ್ತಾರೆ,
ನಾನು ತದ ನಂತರ ಹರಿಹರ ಸರ್ಕಾರಿ ಆಸ್ಪತ್ರೆಗೆ ಹೋಗಿ ಅಲ್ಲಿ.. ಚಿಕಿತ್ಸೆಯನ್ನು ಪಡೆದು ನಂತರ ಸುಧಾರಿಸಿಕೊಂಡು ಈ ದಿನ ತಡವಾಗಿ ಪೊಲೀಸ್ ಠಾಣೆಗೆ ಬಂದು ಮೇಲ್ಕಂಡವರ ವಿರುದ್ಧ
ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತದೆ ಎಂದು ಎಫ್ ಐ ಆರ್ ನಲ್ಲಿ ದೂರು ದಾಖಲಿಸಲಾಗಿದೆ.
ಒಟ್ಟಾರೆ ಹರಿಹರ ತಾಲೂಕಿನ ಹಲಸಬಾಳು ಗ್ರಾಮದಲ್ಲಿ ಸಧ್ಯ ಅಕ್ರಮ ಮರಳುಗಾರಿಕೆ ನಡೆಯುವುದನ್ನ ನಿಲ್ಲಿಸಲಾಗಿದೆ ಎಂಬ ಮಾಹಿತಿ ಲಬ್ಯವಾಗಿದೆ.
ಮುಂದುವರಿಯುವುದು…. Part-2