ಭದ್ರಾ ನಾಲೆಯ ಏರಿ ಮಣ್ಣು ಅಕ್ರಮ ಸಾಗಾಟ.! ಗೊತ್ತಿದ್ದು ಕಣ್ಮುಚ್ಚಿ ಕುಳಿತ ದಾವಣಗೆರೆ ಜಲಸಂಪನ್ಮೂಲ ಇಲಾಖೆ.!

ದಾವಣಗೆರೆ: ಭದ್ರಾ ನಾಲಾ ವ್ಯಾಪ್ತಿ ಅಡಿಯಲ್ಲಿ ಬರುವ ಏರಿ ಮಣ್ಣನ್ನು ದಿನಂಪ್ರತಿ ಕಳ್ಳತನದಿಂದ ರಾಜಾರೋಷವಾಗಿ ಅಕ್ರಮವಾಗಿ ಸಾಗಾಣಿಕೆ ಮಾಡಲಾಗುತ್ತಿದ್ದು, ಸಂಬ0ಧಪಟ್ಟ ಜಲ ಸಂಪನ್ಮೂಲ ಇಲಾಖೆ ಅಧಿಕಾರಿಗಳಿಗೆ ಗೊತ್ತಿದ್ದರೂ ಕಣ್ಮುಚ್ಚಿ ಕುಳಿತಿರುವುದು ವಿಪರ್ಯಾಸದ ಸಂಗತಿಯಾಗಿದೆ. ದಾವಣಗೆರೆ ಭದ್ರಾ ನಾಲಾ -2 ಉಪ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಚಿಕ್ಕತೊಗಲೇರಿ, ಹಿರೇತೊಗಲೇರಿ ಹಾಗೂ ಕುರ್ಕಿ ಗ್ರಾಮಗಳ ವ್ಯಾಪ್ತಿಗಳಯಲ್ಲಿರುವ ಭದ್ರಾ ನಾಲಾ ಪರಿ ವ್ಯಾಪ್ತಿಯಡಿಯಲ್ಲಿರುವ ಏರಿ ಮಣ್ಣನ್ನು ಕೆಲ ದುರುಳರು ತಮ್ಮ ವಯಕ್ತಿಕ ಕಾರಣಗಳಿಗಾಗಿ ಕಳ್ಳತನದಿಂದ ಅಕ್ರಮವಾಗಿ ನೂರಾರು ಲೋಡ್ ಟಿಪ್ಪರ್ ಮೂಲಕ ಸಾಗಿಸುತ್ತಿದ್ದಾರೆ.

ಸರ್ಕಾರದ ವ್ಯಾಪ್ತಿಗೊಳಪಡುವ ಭದ್ರಾ ನಾಲೆಯ ಏರಿ ಮಣ್ಣನ್ನು ಅನಧಿಕೃತವಾಗಿ ಸಾಗಾಟ ಮಾಡುವುದರಿಂದ ನಾಲಾ ಹಾಗೂ ನಾಲಾ ಕಟ್ಟಡಗಳಿಗೆ ಧಕ್ಕೆ ಉಂಟಾಗುವ ಸಂಭವವಿದೆ. ಅಲ್ಲದೇ ಜನರು ಸಾರ್ವಜನಿಕ ಸ್ವತ್ತನ್ನು ಕಳ್ಳತನ ಮಾಡುವ ಮೂಲಕ ಅಪರಾಧವೆಸಗುತ್ತಿದ್ದಾರೆ. ಭದ್ರಾ ನಾಲಾ ಉಪವಿಭಾಗ ಚೈನೆಜ್ ಗಳಲ್ಲಿ ಅನಧಿಕೃತವಾಗಿ ಟಿಪ್ಪರ್, ಟ್ರ್ಯಾಕ್ಟರ್  ಸೇರಿದಂತೆ ಇನ್ನಿತರೆ ವಾಹನಗಳ ಮೂಲಕ ದಿನಂಪ್ರತಿ ನೂರಾರು ಲೋಡ್ ಕಾಲುವೆಯ ಮಣ್ಣನ್ನು ಸಾಗಿಸಲಾಗುತ್ತಿದ್ದು ಸಂಬ0ಧಪಟ್ಟ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು, ದಿನದಿಂದ ದಿನಕ್ಕೆ ಟಿಪ್ಪರ್, ಲಾರಿ ಮೂಲಕ ಕಾಲುವೆಯ ಏರಿ ಮಣ್ಣನ್ನು ಸಾಗಿಸುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಇನ್ನೂ ಕೆಲವೇ ತಿಂಗಳುಗಳಲ್ಲಿ ಏರಿ ಇರದೆ ಕಾಲುವೆ ಮತ್ತು ಪಕ್ಕದ ಜಮೀನು ಸಮವಾಗಿ ಮಳೆಗಾಲದಲ್ಲಿ ನೀರು ನುಗ್ಗಿ ರೈತರ ಜಮೀನುಗಳು ಹಾಳಾಗುವ ಸಂಭವವೂ ಇದೆ.

40 ವರ್ಷದ ಹಿಂದೆ ಭದ್ರಾ ಚಾನೆಲ್ ನಿರ್ಮಾಣ ಮಾಡುವ ಸಂದರ್ಭದಲ್ಲಿ ಚಾನೆಲ್‌ನಿಂದ ಹೊರ ತೆಗೆದ ಮಣ್ಣನ್ನು ಏರಿ ಮಾಡಲಾಗಿತ್ತು. ಆದರೆ ನೀರು ಹೊರ ಹೋಗದಂತೆ ತಡೆಗಟ್ಟಲು ಮಾಡಿರುವ ಈ ಏರಿ ಮಣ್ಣನ್ನು ದಿನಂಪ್ರತಿ ಸಾಗಿಸುತ್ತಿದ್ದರೂ ಸಹ ಜಲಸಂಪನ್ಮೂಲ ಇಲಾಖೆ ಕಣ್ಮುಚ್ಚಿ ಕುಳಿತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಹಾಗಾಗಿ ಈ ಬಗ್ಗೆ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕಿದೆ.

garudavoice21@gmail.com 9740365719

Leave a Reply

Your email address will not be published. Required fields are marked *

error: Content is protected !!