ಕುರುಬ ಜಾತಿ ನಿಂದಿಸಿದ ವ್ಯಕ್ತಿ ವಿರುದ್ದ ಕ್ರಮಕ್ಕೆ ಹಾಲುಮತ ಮಹಾಸಭಾ ಮನವಿ

ದಾವಣಗೆರೆ : ಸಾರ್ವಜನಿಕವಾಗಿ ಕುರುಬ ಜಾತಿಯನ್ನು ನಿಂದನೆ ಮಾಡಿರುವ ವ್ಯಕ್ತಿಯ ವಿರುದ್ದ ಬಂಧಿಸುವ0ತೆ ಒತ್ತಾಯಿಸಿ ಕುರುಬ ಹಾಲುಮತ ಸಭಾ ದಾವಣಗೆರೆ ಜಿಲ್ಲಾ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಜೂನ್ 13ರಂದು ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ವಾಟ್ಸಾಪ್ ಗಳಲ್ಲಿ ಜಾತ್ಯಾತೀತ ಜನತಾದಳ (ಜೆಡಿಎಸ್) ಪಕ್ಷದ ಬೆಂಗಳೂರು ನಗರ ಸಂಘಟನಾ ಕಾರ್ಯದರ್ಶಿ ಜಿ. ಶ್ರೀನಿವಾಸ್ ಕಾಮತ್ ಎಂಬ ವ್ಯಕ್ತಿಯೊಬ್ಬ ಕುರುಬ ಜಾತಿಯನ್ನು ನಿಂದನೆ ಮಾಡಿ ವಿಡಿಯೋವೊಂದನ್ನು ಹರಿಬಿಟ್ಟಿದ್ದಾನೆ. ಈ ವೀಡಿಯೋದಲ್ಲಿರುವ ಆ ವ್ಯಕ್ತಿಯ ಮಾತುಗಳು ಕುರುಬ ಸಮಾಜದವರ ಮನಸ್ಸುಗಳನ್ನು ತೀವ್ರ ಘಾಸಿಗೊಳಿಸಿದೆ. ಇಡೀ ಕುರುಬ ಸಮಾಜದ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿ, ದ್ವೇಷದ ವಾತಾವರಣ ಹಾಗೂ ಪ್ರಚೋದನೆಗೆ ದಾರಿ ಮಾಡಿಕೊಟ್ಟಿದೆ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ವಿಡಿಯೋದಲ್ಲಿ ಜಾತಿನಿಂದನೆ ಮಾಡಿರುವ ಅನಾಮಧೇಯ ವ್ಯಕ್ತಿ ಜಾತ್ಯಾತೀತ ಜನತಾದಳ (ಜೆಡಿಎಸ್) ಪಕ್ಷದ ಚಿಹ್ನೆವುಳ್ಳ ಬಾವುಟ ಮತ್ತು ಕೊರಳಪಟ್ಟಿಯನ್ನು ಹೊಂದಿರುತ್ತಾನೆ. ಬೆಂಗಳೂರಿನ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ಬಹಿರಂಗವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಏಕವಚನದಲ್ಲಿ ಟೀಕಿಸಿ, ಕುರುಬ ಜಾತಿಯನ್ನು ಹಾಗೂ ಕುರುಬ ಜಾತಿ ಕುರಿ ಕಾಯುವ ವೃತ್ತಿಯನ್ನು ನಿಂದನೆ ಮಾಡಿ, ನಮ್ಮ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿ, ಸಮಾಜದಲ್ಲಿ ದ್ವೇಷದ ಪ್ರಚೋದನೆ ವಾತಾವರಣವನ್ನು ನಿರ್ಮಿಸಿದ್ದಾರೆ. ಈತನನ್ನು ಬಂಧಿಸಿ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ಸಂಚಾಲಕ ರಾಜು ಬಿ. ಮೌರ್ಯ, ಜಿಲ್ಲಾಧ್ಯಕ್ಷ ಸಿ. ವೀರಣ್ಣ, ಚಂದ್ರು ದೀಟೂರ್, ಘನರಾಜ್, ಎಸ್.ಎಂ.ಸಿದ್ದಲಿ0ಗಪ್ಪ, ಷಣ್ಮುಖಪ್ಪ, ಆರ್.ಬಿ. ಪರಮೇಶ್, ಪರಶುರಾಮ್, ನಾಗರಾಜು, ರಮೇಶ್ ಮತ್ತು ಇತರರು ಇದ್ದರು.

 

 

 

garudavoice21@gmail.com 9740365719

Leave a Reply

Your email address will not be published. Required fields are marked *

error: Content is protected !!