ದಾವಣಗೆರೆ : ಅಬ್ದುಲ್ ನಜೀರ್ ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಮೈಸೂರು, ಜಿಲ್ಲಾ ಪಂಚಾಯತ್, ಗ್ರಾಮ ಪಂಚಾಯತ್ ಗ್ರಂಥಾಲಯ ಸಹಯೋಗದಲ್ಲಿ ಲೋಕಿಕೆರೆಯಲ್ಲಿ ಕಳೆದ 21 ರಿಂದ 29ರವರೆಗೆ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ ಸಮಾರೋಪ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಶಿಬಿರದ ಕೊನೆಯ ದಿನವಾದ ಇಂದು ಮಕ್ಕಳೇ ಇಡೀ ಸಮರೋಭ ಸಮಾರಂಭವನ್ನು ನಿರ್ವಹಿಸಿದ್ದು ವಿಶೇಷವಾಗಿತ್ತು.
ಈಗೀನ ಮಕ್ಕಳ ಶೈಕ್ಷಣಿಕ ಚಟುವಟಿಕೆ ಒರತಾದ ಪಠ್ಯೇತರ ಚಟುವಟಿಕೆ ಗಳಲ್ಲಿ ತೋಡಗಿಸಿ ಅವರಲ್ಲಿ ಸಾಮಾನ್ಯ ಜ್ಞಾನ ಆಟೋಟ, ಕ್ರಿಯಾಶೀಲ ಬಣ್ಣದ ಕಾಗದಗಳ ವಿಭಿನ್ನ ರೀತಿಯ ಪ್ರತಿಕೃತಿ, ಸಾಮಾನ್ಯ ಜ್ಞಾನ, ಗ್ರಾಮದ ಪಂಚಾಯತ್ , ಅಂಚೆ ಕಛೇರಿ, ಬ್ಯಾಂಕ್ ವ್ಯವಹಾರ ಆರೋಗ್ಯ ಕೇಂದ್ರ ಮಾಹಿತಿ, ಕೃಷಿ ಪೂರಕ ಅಕರಗಳ ಅಧ್ಯಯನ, ಕಂಪ್ಯೂಟರ್ ಜ್ಞಾನ, ದಿನಪತ್ರಿಕೆ ಓದುವ ಹವ್ಯಾಸ ಮಹತ್ವ,ಇವುಗಳ ಬಗ್ಗೆ ವಿಚಾರವಾದಿ ,ಚಿಂತಕ ಪ್ರೊ.ಕೆ.ಎ.ಒಬಳೇಶ್, ಮಂಜಪ್ಪ ಟಿ.ಲೋಕಿಕೆರೆ ಇತಿಹಾಸ ಐತಿಹ್ಯಗಳ ಬಗ್ಗೆ ಪರಿಚಯ ಸಮಗ್ರ ಮಾಹಿತಿ ನೀಡಿ ತಮ್ಮೂರ ಹಿನ್ನೆಲೆ ಐತಿಹಾಸಿಕ ಬಗ್ಗೆ ಪತ್ರಕರ್ತ ಪುರಂದರ್ ಲೋಕಿಕೆರೆ, ಉಪನ್ಯಾಸ ನೀಡಿದರು.
ಶಿಬಿರದಲ್ಲಿ ಪಾಲ್ಗೊಂಡು ಹಲವಾರು ವಿಷಯಗಳ ಬಗ್ಗೆ ಮಾಹಿತಿ, ತರಬೇತಿ ಪಡೆದ ಶಿಬಿರ ಮಕ್ಕಳೇ ಇಡೀ ಸಮರೋಭ ಸಮಾರಂಭವೊಂದರಲ್ಲಿ ಹಾಡು, ನೃತ್ಯ ಆಟೋಟ ಕಲಿಕೆ ಬಗ್ಗೆ ಪ್ರದರ್ಶನ ನೀಡಿ ಹಳ್ಳಿಯ ಸಾಮಾನ್ಯ ರಿ ಗಿಂಥ ವಿಶೇಷ ಎಂದು ತೋರಿಸಿಕೊಟ್ಠು ಸೈ ಎನಿಸಿಕೊಂಡಿದ್ದು ವಿಶೇಷ.
ಕಾರ್ಯಕ್ರಮ ಅಧ್ಯಕ್ಷತೆ ಶ್ರೀಮತಿ ಸುಧಾ ಅಂಜಿನಪ್ಪ, ವಹಿಸಿದ್ದರು.ಅತಿಥಿಗಳಾಗೀ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಅಶ್ವಿನಿ, ಕಾರ್ಯದರ್ಶಿ ಸುರೇಶ್,ಪಂ ಸ ದಸ್ಯ ಕವಿತಾ, ಶಾಲಾ ಮುಖ್ಯ ಶಿಕ್ಷಕ ಕೃಷ್ಣಮೂರ್ತಿ ಪೆನ್ನಜ್ಜರ ಅಂಜಿನಪ್ಪ, ತೊಳವರ ಮೂರ್ತಿ, ಮೂರ್ತಿ, ಪುರಂದರ್ ಲೋಕಿಕೆರೆ, ಸಮಾರಂಭ ಆರಂಭದಲ್ಲಿ ಶಿಬಿರಾರ್ಥಿಸ್ಪಂದನ ಪ್ರಾರ್ಥನೆ ನಂತರ ವಿದ್ಯಾ ಸ್ವಾಗತಿಸಿ ಕೊನೆಯಲ್ಲಿ ಪಿ ಡಿ ಓ ಅಶ್ವಿನಿ ವಂದಿಸಿ, ಕಾರ್ಯಕ್ರಮ ನಿರೂಪಿಸಿ ಅಚ್ಚುಕಟ್ಟಾಗಿ ನಿರ್ವಹಿಸಿದ ಬೇಬಿ ಸಿಂಚನ ಯಾವುದೇ ನಗರದ ಮಕ್ಕಳಿಗಿಂತ ಕಡಿಮೆ ಇಲ್ಲ ಎಂಬುದನ್ನು ಸಾಬೀತು ಪಡಿಸಿದರು, ಶಿಬಿರದಲ್ಲಿ ಪಾಲ್ಗೊಂಡು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಪ್ರಮಾಣ ಪತ್ರ ನೆನಪಿನ ಕಾಣಿಕೆ ನೀಡಲಾಯಿತು.
