ಲೋಕಾಯುಕ್ತರ ಹೆಸರಲ್ಲಿ ತಹಲೋಕಾಯುಕ್ತ ಹೆಸರಲ್ಲಿ ತಹಶಿಲ್ದಾರನಿಗೆ ಕರೆ ಮಾಡಿ ಬೆದರಿಕೆ; ಅಪರಿಚತನ ವಿರುದ್ಧ ದೂರು ದಾಖಲುಶಿಲ್ದಾರ್​ಗೆ ಫೋನ್ ಮಾಡಿ ಬೆದರಿಕೆ, ಅಪರಿಚಿತನ ವಿರುದ್ಧ ದೂರು

In the name of Lokayukta, the Tehsildar was called and threatened; File a complaint against the stranger

In the name of Lokayukta, the Tehsildar was called and threatened; File a complaint against the stranger

ದಾವಣಗೆರೆ: ಅಪರಿಚಿತ ವ್ಯಕ್ತಿಯೊಬ್ಬನು ಲೋಕಾಯುಕ್ತ ಸೋಗಿನಲ್ಲಿ ನ್ಯಾಮತಿ ತಾಲೂಕು ತಹಶಿಲ್ದಾರ್‌ಗೆ ಫೋನ್ ಮಾಡಿ, ನಿಮ್ಮ ಹೆಸರಿನಲ್ಲಿ ಎಫ್ ಐಆರ್ ದಾಖಲಾಗಿದೆ. ದಾಳಿ ಆಗದಂತೆ ತಡೆಗೆ ಅನ್ನೈನ್‌ನಲ್ಲಿ ಹಣ ಹಾಕುವಂತೆ ಬೇಡಿಕೆ ಇಟ್ಟಿದ್ದಾನೆ. ತಹಶಿಲ್ದಾರ್ ಹಣ ಹಾಕದಿದ್ದಾಗ ಜೀವ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಈ ಘಟನೆ ಶುಕ್ರವಾರ ನಡೆದಿದ್ದರೂ, ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ತಹಶಿಲ್ದಾರ್ ಎಚ್.ಬಿ. ಗೋವಿಂದಪ್ಪ ಅವರು ನ್ಯಾಮತಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಲೋಕಾಯುಕ್ತರೆಂದು ವ್ಯಕ್ತಿ ಫೋನ್ ಕರೆ

ಅಪರಚಿತ ವ್ಯಕ್ತಿ ನ್ಯಾಮತಿ ತಾಲೂಕು ತಹಶಿಲ್ದಾರ್‌ಗೆ ಕರೆ ಮಾಡಿ, ತಾನು ಲೋಕಾಯುಕ್ತ ಡಿವೈಎಸ್ಪಿ ಎಂದು ಪರಿಚಯಿಸಿಕೊಂಡು, ತಹಶಿಲ್ದಾರರ ವಿವರ ಪಡೆದಿದ್ದಾನೆ. ನಿಮ್ಮ ವಿರುದ್ಧ ಬೆಂಗಳೂರಿನ ಲೋಕಾಯುಕ್ತ ಕಚೇರಿಯಲ್ಲಿ ಎಫ್‌ಐಆ‌ರ್ ದಾಖಲಾಗಿದೆ. ಲೋಕಾಯುಕ್ತ ಎಸ್‌ಪಿ ಮತ್ತು ಅವರ ಸಿಬ್ಬಂದಿ ಈಗಾಗಲೇ ನೀವು ಕೆಲಸ ಮಾಡುತ್ತಿರುವ ಸ್ಥಳ ಮತ್ತು ವಾಸವಿರುವ ಮನೆಯ ಮೇಲೆ ದಾಳಿ ಮಾಡಲು ತಯಾರಿ ಮಾಡಿಕೊಂಡಿದ್ದಾರೆ ಎಂದು ಫೋನಿನಲ್ಲಿ ನಂಬಿಸಿದ್ದಾನೆ.

ನಿಮ್ಮ ಬಗ್ಗೆ ಚೆನ್ನಾಗಿ ವಿಚಾರಿಸಿದ್ದೇನೆ, ನೀವು ಒಳ್ಳೆ ಅಧಿಕಾರಿ. ನಾನೂ ಈ ಲೋಕಾಯುಕ್ತ ದಾಳಿ ಆಗದಂತೆ ನೋಡಿಕೊಳ್ಳುತ್ತೇನೆ. ಅದ್ದರಿಂದ ಅನ್ನೈನ್ ನಲ್ಲಿ ಎರಡು ಲಕ್ಷ ಪೇಮೆಂಟ್ ವರ್ಗಾವಣೆ ಮಾಡುವಂತೆ ಆತನು ತಿಳಿಸಿದ್ದಾನೆ. ಬಳಿಕ ಪದೇ ಪದೇ ಕರೆ ಮಾಡಿ ಹಣ ವರ್ಗಾವಣೆ ಮಾಡಲು ಒತ್ತಾಯಿಸಿದ್ದಾನೆ.

ಹಣ ಹಾಕದೇ ಇದ್ದಾಗ, ನಿನಗೆ ಏನ್ ಮಾಡೋಕೋ ಮಾಡ್ತಿವಿ ನಮಗೆ ಗೊತ್ತಿದೆ ಎಂದು ತಹಶಿಲ್ದಾರ್‌ಗೆ ವ್ಯಕ್ತಿಯ ತಿಳಿಸಿದ್ದಾನೆ. ತನಗೆ ಪ್ರಾಣ ಬೆದರಿಕೆ ಮತ್ತು ಮಾನಸಿಕ ಕಿರುಕುಳ ನೀಡಿರುವ ವ್ಯಕ್ತಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಹಶಿಲ್ದಾರ್ ಎಚ್.ಬಿ. ಗೋವಿಂದಪ್ಪ ದೂರು ದಾಖಲು ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!