ಬಸ್ ನಿಲ್ಲಿಸಿದ ಚಾಲಕ, 10 ಸಾವಿರ ಮೌಲ್ಯದ ಆರೋಗ್ಯ ಕಿಟ್ ನೆಲಕ್ಕೆ – ನಿರ್ವಾಹಕನ ವಿರುದ್ದ ಯುವತಿ ತರಾಟೆ
ದಾವಣಗೆರೆ: ಕೆಎಸ್ಆರ್ಟಿಸಿ ಬಸ್ ಚಾಲಕ ಹಾಗೂ ನಿರ್ವಾಹಕರ ಬೇಜವಾಬ್ದಾರಿಯಿಂದ ಹತ್ತು ಸಾವಿರ ರೂಪಾಯಿ ಮೌಲ್ಯದ ಆರೋಗ್ಯ ಕಿಟ್ನ್ನು ಯುವತಿ ಕಳೆದುಕೊಂಡ ಘಟನೆ ಚಿತ್ರದುರ್ಗದಿಂದ ದಾವಣಗೆರೆ ಜಿಲ್ಲೆಯ ಜಗಳೂರಿಗೆ ಹೋಗುತ್ತಿದ್ದ ಸಾರಿಗೆ ಬಸ್ಸಿನಲ್ಲಿ ನಡೆದಿದೆ.
ಬಸ್ಸಿನ ಬಾಗಿಲು ಬಳಿ ಇಟ್ಟ ಆರೋಗ್ಯ ಕಿಟ್ ನೆಲಕ್ಕೆ ಬಿದ್ದಿದೆ. ಆದರೆ, ಚಾಲಕ ಸಕಾಲಕ್ಕೆ ಬಸ್ ನಿಲ್ಲಿಸದೆ, ಬರೊಬ್ಬರಿ ಒಂದು ಕಿಲೋ ಮೀಟರ್ ಬಳಿಕ ನಿಲ್ಲಿಸಿದ್ದಾನೆ. ಇದರಿಂದ ಕಿಟ್ ಕಾಣೆಯಾಗಿದೆ ಎಂದು ಚಾಲಕ ಮತ್ತು ನಿರ್ವಹಕರನ್ನು ಕಿಟ್ ಕಳೆದುಕೊಂಡ ಯುವತಿ ತರಾಟೆಗೆ ತೆಗೆದುಕೊಂಡಿದ್ದಾಳೆ.
ಸಕಾಲಕ್ಕೆ ಬಸ್ ನಿಲ್ಲಿಸಿದ್ದರೇ, ಯಾವುದೇ ತೊಂದರೆ ಆಗುತ್ತಿರಲಿಲ್ಲ. ಆದ್ರೆ, ದೂರ ಹೋಗಿ ನಿಲ್ಲಿಸಿದ್ದರಿಂದ ಹತ್ತು ಸಾವಿರ ರೂಪಾಯಿ ಆರೋಗ್ಯ ಕಿಟ್ ಅನ್ಯರ ಪಾಲಾಗಿದೆ ಎಂದು ಯುವತಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಇದಕ್ಕೆ ಸಮರ್ಪಕ ಉತ್ತರ ನೀಡಬೇಕು ಎಂದು ಯುವತಿ ಕಿಡಿಕಾರಿದ್ದಾಳೆ. ಆದರೆ, ಚಾಲಕ ಹಾಗೂ ನಿರ್ವಾಹಕ ಇದಕ್ಕೆ ಉತ್ತರಿಸದೆ ಬೇಜವಾಬ್ದಾರಿಯಿಂದ ವರ್ತಿಸಿದ್ದು, ಯುವತಿ ಪಿತ್ತ ನೆತ್ತಿಗೇರುವ ಹಾಗೆ ಮಾಡಿದೆ.