ಲೋಕಲ್ ಸುದ್ದಿ

ಜೈನ್ ಕಾಲೇಜಲ್ಲಿ ಇಂಟರ್ ನ್ಯಾಷನಲ್ ಕಾನ್ಫರೆನ್ಸ್

ಜೈನ್ ಕಾಲೇಜಿನಲ್ಲಿ ಇಂಟರ್ ನ್ಯಾಷನಲ್ ಕಾನ್ಫರೆನ್ಸ್

ದಾವಣಗೆರೆ: ಇಲ್ಲಿನ ಜೈನ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಟೆಕ್ನಿಕಲ್ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಹಯೋಗದೊಂದಿಗೆ ಇಂಜಿನಿಯರಿಂಗ್ ಇಂಟರ್ ನ್ಯಾಷನಲ್ ಕಾನ್ಫರೆನ್ಸ್ ಆನ್ ಇನ್ನೊವೇಷನ್-2023 (ಐಸಿಇಐ-2023) 2ನೇ ಸಮ್ಮೇಳನವನ್ನು ಆಯೋಜಿಸಲಾಗಿತ್ತು.

ಮುಖ್ಯ ಅತಿಥಿಗಳಾಗಿ ಬೋಲ್ಟನ್ ವಿಶ್ವವಿದ್ಯಾಲಯದ ಡಾ. ಸೆಲೆಸ್ಟೀನ್ ಐವೆಂಡಿ ಮತ್ತು ಅಲ್ಟಿಮೇಟ್ ಕ್ರೋನೋಸ್‌ ಗ್ರೂಪ್‌ನ ಡಾ.ಮಂಜುನಾಥ್ ಪರಮಶಿವಯ್ಯ ಭಾಗವಹಿಸಿ, ಬುದ್ದಿಜೀವಿಗಳಿಗೆ ನೆಟ್‌ವರ್ಕಿಂಗ್ ಹಂತವನ್ನು ರಚಿಸುವುದು, ಸಮಾಜಕ್ಕೆ ಅನುಕೂಲವಾಗುವಂತೆ ತಾಂತ್ರಿಕ ವಿಕಾಸನಕ್ಕಾಗಿ ಅವರ ಆಲೋಚನೆಗಳು ಮತ್ತು ಸಂಶೋಧನೆಗಳನ್ನು ವಿನಿಮಯ ಮಾಡಿಕೊಳ್ಳುವುದು ಅಗತ್ಯವೆಂದು ತಿಳಿಸಿದರು.

ಗೌರವ ಅತಿಥಿಗಳಾಗಿ ಬೆಂಗಳೂರಿನ ಎನ್‌ಎಮ್‌ಐಟಿಯ ಪ್ರಾಧ್ಯಾಪಕರು, ಎಸ್‌ಸಿ ಕೋಚೇರ್, ಐಇಇಇ, ಬೆಂಗಳೂರು ಡಾ. ಬಿ.ಡಿ. ಪರಮೇಶಚಾರಿ, ಬೆಂಗಳೂರು ಹಾಗೂ ಚೆನ್ನೈನ ಸೇಂಟ್‌ ಪೀಟರ್ಸ್‌ ಇನ್ಸಿಟ್ಯೂಟ್ ಆಫ್ ಹೈಯರ್ ಎಜುಕೇಶನ್ ಅಂಡ್ ರಿಸರ್ಚ್‌ನ ಪ್ರಾಧ್ಯಾಪಕರಾದ ಡಾ. ಜಿ.ಪಿ. ರಮೇಶ್‌ ಉಪಸ್ಥಿತರಿದ್ದರು.

ಪ್ರಪಂಚದ ನಾನಾ ಭಾಗಗಳಿಂದ ಸುಮಾರು 220ಕ್ಕೂ ಹೆಚ್ಚು ಸಂಶೋಧನಾ ಪತ್ರಿಕೆಗಳು ನೊಂದಣೆಯಾಗಿದ್ದು, ಸುಮಾರು 140ಕ್ಕೂ ಅಧಿಕ ಪತ್ರಿಕೆಗಳನ್ನು ಸ್ವೀಕರಿಸಿ ಪ್ರಕಟಿಸಲಾಯಿತು. ಜೆಇಟಿ ಪ್ರಾಂಶುಪಾಲ ಡಾ. ಡಿ.ಬಿ. ಗಣೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಾ.ಸಂತೋಷ್, ಇ ಅಂಡ್ ಸಿ ವಿಭಾಗದ ಪ್ರೊ. ರವಿರಾಯಪ್ಪ ಮತ್ತು ಪ್ರೊ. ಹೆಚ್.ಬಿ. ಶರಣಬಸವೇಶ್ವರ ಉಪಸ್ಥಿತರಿದ್ದರು.

Click to comment

Leave a Reply

Your email address will not be published. Required fields are marked *

Most Popular

To Top