ಆ.9 ರಿಂದ 13 ರವರೆಗೆ ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಶ್ರೀಗಳ ಅಧಿಕ ಶ್ರಾವಣ ಮಾಸದ ಇಷ್ಟಲಿಂಗ ಮಹಾಪೂಜ

ದಾವಣಗೆರೆ: ಶ್ರೀಮದ್ ವೀರಶೈವ ಸದ್ಭೋದನಾ ಸಂಸ್ಥೆ ಜಿಲ್ಲಾ ಘಟಕದ ವತಿಯಿಂದ ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಶ್ರೀಗಳ ಅಧಿಕ ಶ್ರಾವಣ ಮಾಸದ ಇಷ್ಟಲಿಂಗ ಮಹಾಪೂಜಾ ಹಾಗೂ ಜನ ಜಾಗೃತಿ ಧರ್ಮ ಸಮಾವೇಶ ಕಾರ್ಯಕ್ರಮವನ್ನು ಆ.೯ರಿಂದ ೧೩ರವರೆಗೆ ಪ್ರತಿದಿನ ಸಂಜೆ ೬:೩೦ರಿಂದ ನಗರದ ಶ್ರೀ ಅಭಿನವ ರೇಣುಕಾ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಐದು ದಿನಗಳ ಕಾಲ ನಡೆಯುವ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಬಾಳೆಹೊನ್ನೂರು ಪೀಠದ ಪ್ರಸನ್ನ ರೇಣುಕಾ ಡಾ. ವೀರಸೋಮೇಶ್ವರ ಶ್ರೀಗಳು ವಹಿಸಲಿದ್ದಾರೆ. ಆ.೯ರಂದು ಕಾರ್ಯಕ್ರಮಕ್ಕೆ ಶಾಸಕ ಶಾಮನೂರು ಶಿವಶಂಕರಪ್ಪ ಚಾಲನೆ ನೀಡಲಿದ್ದಾರೆ. ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಶ್ರೀಗಳು ನೇತೃತ್ವ ವಹಿಸಲಿದ್ದು, ಕೊಟ್ಟೂರು ಹಿರೇಮಠದ ಯೋಗಿರಾಜೇಂದ್ರ ಸ್ವಾಮೀಜಿ ಉಪದೇಶಾಮೃತ ನೀಡಲಿದ್ದಾರೆ. ಮುಖ್ಯತಿಥಿಗಳಾಗಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ವಿಧಾನ ಪರಿಷತ್ ಸದಸ್ಯ ಅಬ್ಧುಲ್ ಜಬ್ಬಾರ್ ಸೇರಿದಂತೆ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ರಾಜನಹಳ್ಳಿ ರಮೇಶ್ ಬಾಬು ಅವರಿಗೆ ಸಮಾಜಸೇವಾ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಆ.೧೦ರಂದು ನಡೆಯುವ ಕಾರ್ಯಕ್ರಮದ ನೇತೃತ್ವವನ್ನು ವಿಮಲ ರೇಣುಕ ವೀರಮುಕ್ತಿಮುನಿ ಸ್ವಾಮೀಜಿ ವಹಿಸಲಿದ್ದಾರೆ. ಶ್ರೀಪೀಠದ ದಾಖಲೆ ಸಂಪುಟ-೩ರನ್ನು ಸಂಸದ ಜಿ.ಎಂ. ಸಿದ್ದೇಶ್ವರ್ ಬಿಡುಗಡೆಗೊಳಿಸಲಿದ್ದು, ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಎಸ್.ಎ. ರವೀಂದ್ರನಾಥ್, ಮಾಜಿ ಸಚೇತಕ ಎ.ಹೆಚ್. ಶಿವಯೋಗಿಸ್ವಾಮಿ, ದೂಡಾ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ. ಇದೇ ವೇಳೆ ಡಿಹೆಚ್‌ಯುಸಿಬಿ ಬ್ಯಾಂಕ್ ಅಧ್ಯಕ್ಷ ಎನ್.ಎ. ಮುರುಗೇಶ್ ಅವರಿಗೆ ‘ಸಹಕಾರಿ ಸೇವಾ ಭೂಷಣ’ ಪ್ರಶಸ್ತಿ ನೀಡಲಾಗುವುದು.
ಆ.೧೧ರಂದು ನಡೆಯುವ ಕಾರ್ಯಕ್ರಮದಲ್ಲಿ ಬಾಪೂಜಿ ವಿದ್ಯಾಸಂಸ್ಥೆ ನಿರ್ದೇಶಕಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ‘ಕನಸೇವಾ ಶಿರೋಮಣಿ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು, ಆ.೧೨ರ ಕಾರ್ಯಕ್ರಮದಲ್ಲಿ ಡಾ. ವಿ.ಜೆ. ಮಲ್ಲಿಕಾರ್ಜುನ್ ಅವರಿಗೆ ‘ವೈದ್ಯರತ್ನ’ ಪ್ರಶಸ್ತಿ ನೀಡಲಾಗುವುದು.
ಆ.೧೩ರಂದು ನಡೆಯುವ ಕಾರ್ಯಕ್ರಮದಲ್ಲಿ ಜಿಲ್ಲಾ ಮಂತ್ರಿ ಎಸ್.ಎಸ್. ಮಲ್ಲಿಕಾರ್ಜುನ್, ವಿಪ ಸದಸ್ಯ ಅಬ್ಧುಲ್ ಜಬ್ಬಾರ್, ಉದ್ಯಮಿಗಳಾದ ಅಥಣಿ ವೀರಣ್ಣ, ಅಣಬೇರು ರಾಜಣ್ಣ ಸೇರಿದಂತೆ ಮತ್ತಿತರರು ಮುಖ್ಯಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಸಮಾವೇಶದಲ್ಲಿ ಶ್ರೀಶೈಲ ಎಜ್ಯುಕೆಶನ್ ಟ್ರಸ್ಟ್ ನಿರ್ದೇಶಕ ಜಿ.ಎಸ್. ಅನಿತ್‌ಕುಮಾರ್ ಅವರಿಗೆ ಶಿಕ್ಷಣ ಸೇವಾ ಧುರೀಣ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

Leave a Reply

Your email address will not be published. Required fields are marked *

error: Content is protected !!