Female foeticide; ಹೆಣ್ಣು ಭ್ರೂಣ ಹತ್ಯೆ ತಡೆಗಟ್ಟುವುದು ನಮ್ಮೆಲ್ಲರ ಕರ್ತವ್ಯ

ಚನ್ನಗಿರಿ, ಅ.18: ರಾಷ್ಟ್ರಾದ್ಯಂತ ಹೆಣ್ಣು ಭ್ರೂಣಹತ್ಯೆಯನ್ನು (foeticide) ತಡೆಗಟ್ಟಲು ಸಿ.ಎಂ. ಜಕ್ಕಾಳೆಯವರು ಕನ್ಯಾಕುಮಾರಿಯಿಂದ ದೆಹಲಿಯವರೆಗೆ ಪಾದಯಾತ್ರೆಯನ್ನು ಹಮ್ಮಿಕೊಂಡಿರುವುದು ಅವರ ಸಾಮಾಜಿಕ ಕಳಕಳಿ ಮತ್ತು ನಿಸ್ವಾರ್ಥ ಸೇವೆಯನ್ನು ತೋರಿಸುತ್ತದೆ ಎಂದು ಚನ್ನಗಿರಿ ಹಿರೇಮಠದ ಕೇದಾರಲಿಂಗ ಶಿವಶಾಂತವೀರ ಸ್ವಾಮೀಜಿ ಹೇಳಿದರು.

ಪಟ್ಟಣದ ಬಸವೇಶ್ವರ ದೇಗುಲದಲ್ಲಿ ವೀರಶೈವ ಕುಂಬಾರ ಸಮಾಜದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಹೆಣ್ಣು ಬ್ರೂಣ ಹತ್ಯೆ ತಡೆಗಟ್ಟುವ ಕಾರ್ಯಕ್ರಮಕ್ಕೆ ಸಮಾಜದವರ ಜೊತೆಗೂಡಿ ಚಾಲನೆ ನೀಡಿ ಮಾತನಾಡಿ, ಇಂದಿನ ಸಮಾಜದಲ್ಲಿ ಹೆಣ್ಣು ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಾ ಬಂದಿದ್ದರೂ ಹೆಣ್ಣುಭ್ರೂಣ ಎಂದಾಕ್ಷಣ ತೆಗೆದುಹಾಕುವ ಕೆಲಸ ಮಾಡುತ್ತಿದ್ದಾರೆ.

electricity; ವಿದ್ಯುತ್ ಪೂರೈಸುವಂತೆ ಸರ್ಕಾರದ ವಿರುದ್ಧ ಯುವಕರ ಆಗ್ರಹ

ಯಾವುದೇ ಒಂದು ಜೀವಿಯು ಭೂಮಿಗೆ ಬೇಕಾದರೆ ದೇವರ ಅನುಗ್ರಹ ಇರಬೇಕು. ಆದರೆ ಅಂತಹ ಶಿಶುಗಳನ್ನು ಕೊಲ್ಲುವುದು ಮಹಾಪರಾಧವಾಗಿದೆ ಎಂದರು.

ಕಾರ್ಯಕ್ರಮದ ರುವಾರಿ ಹೊನ್ನಾಳಿ ಗ್ರಾಮದ ಸಿ.ಎಂ. ಜಕ್ಕಾಳೆಯವರು ಮಾತನಾಡಿ, ಕಳೆದ ಸೆಪ್ಟಂಬರ್ ತಿಂಗಳಿನಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು ಸುಮಾರು 3650 ಕಿ.ಮೀಗಳನ್ನು ಕ್ರಮಿಸಬೇಕಾಗುತ್ತದೆ. ನಮ್ಮ ಈ ಕಾರ್ಯಕ್ಕೆ ನಮ್ಮ ಕುಟುಂಬದ ಪ್ರತಿಯೊಬ್ಬ ಸದಸ್ಯರು ಸಹಕಾರ ನೀಡಿದ್ದು ದೆಹಲಿಯನ್ನು ತಲುಪಿ ಪ್ರಧಾನಮಂತ್ರಿಗಳಿಗೆ ಮನವಿಪತ್ರ ಸಲ್ಲಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಪುರಸಭೆಯ ಅದ್ಯಕ್ಷರು ಲಕ್ಷೀದೇವಮ್ಮ , ಸದಸ್ಯರಾದ ಕಮಲ ಹರೀಶ, ತಾಲೂಕು ಬಿಜೆಪಿ ಮಹಿಳಾ ಮೋರ್ಚಾ ಅದ್ಯಕ್ಷರಾದ ಲತಾ ರಾಜೇಶ್ ಮಹಿಳಾ ರಕ್ಷಣಾ ವೇದಿಯ ಅದ್ಯ್ಷರಾದ ಜ್ಯೋತಿ ಕೋರಿ, ಮತ್ತು ಹೋನ್ನಾಳಿ ತಾಲ್ಲೂಕಿನ ಗ್ರಾಮ ಪಂಚಾಯತಿ ಸದಸ್ಯರ ಒಕ್ಕೂಟದ ಅದ್ಯಕ್ಷರಾದ ಶ್ವೇತ ಬಸವರಾಜ್ ಮತ್ತು ಗ್ರಾಮ ಪಂಚಾಯತಿ ಸದಸ್ಯರ ಒಕ್ಕೂಟದ ಸಹ ಕಾರ್ಯದರ್ಶಿ ಯಾದ ರೇಖಾ ಲೋಕೇಶ್,ಕುಂಬಾರ ಸಮಾಜದ ಬಾಂದವರು ಅಗಮಿಸಿ ಪಾದಯಾತ್ರೆಗೆ ಶುಭವನ್ನು ಕೋರಿದರು.

Leave a Reply

Your email address will not be published. Required fields are marked *

error: Content is protected !!