ಜಗಳೂರಿನಲ್ಲಿ ಶಾಲಾ ದಾಖಲಾತಿ ಆಂದೋಲನ ಮನೆಮನೆಗೆ ತೆರಳಿದ ಶಿಕ್ಷಕರು

ಜಗಳೂರು.ಜೂ.೩೦; ತಾಲ್ಲೂಕಿನ ಸೂರಡ್ಡಿಹಳ್ಳಿ ಗ್ರಾಮ
ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವತಿಯಿಂದ ಆಯೋಜಿಸಿದ್ದ 2021-22 ನೇ ಸಾಲಿನ  ಶಾಲಾ  ದಾಖಲಾತಿ ಆಂದೋಲನಕ್ಕೆ ಮತ್ತು ಮಾಸ್ಕ್ ವಿತರಣೆಗೆ ಚಾಲನೆ ನೀಡಲಾಯಿತು.

ನಂತರ ಮಾತನಾಡಿದ ಕ್ಷೇತ್ರ ಶಿಕ್ಷಣಾದಿಕಾರಿ ಮಂಜಪ್ಪ ದಿದ್ದಿಗಿ  ಕೊರೊನಾ ಹಾವಳಿಯಿಂದ ಕಳೆದ ಎರಡು ವರ್ಷಗಳಿಂದ ಮಕ್ಕಳು ಶಾಲೆಯಿಂದ ಹೊರಗುಳಿಯುವಂತಾಗಿದೆ ಶೈಕ್ಷಣಿಕ ಪ್ರಗತಿಗೆ ಆನ್ ಲೈನ್ ತರಗತಿಗಳು ನಡೆಯುತ್ತಿವೆ ಪೋಷಕರು ಸಹ ಮಕ್ಕಳ ಶಿಕ್ಷಣದ ಬಗ್ಗೆ ಜಾಗೃತಿವಹಿಸಿ ಮನೆಪಾಠದ ಕಡೆ ಗಮನಹರಿಸಿ ಸದಾ ಶೈಕ್ಷಣಿಕ ಚಟುವಟಿಕೆಯಲ್ಲಿ ತೊಡಗುವಂತೆ ಪ್ರೇರೇಪಿಸಬೇಕು  ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಪ್ರತಿಯೊಬ್ಬ ಮಗು ಸಹ ಸರ್ಕಾರಿ ಶಾಲೆ ದಾಖಲಾಗುವಂತೆ ಮನೆ ಮನೆಗೂ ಕರಪತ್ರ ನೀಡಿ ಜಾಗೃತಿ ಮೂಡಿಸಲಾಗುವುದು ಸರ್ಕಾರಿ ಶಾಲೆಯಲ್ಲಿ ಉಚಿತ ದಾಖಲಾತಿ ಪಠ್ಯ ಪುಸ್ತಕ ಸಮವಸ್ತ್ರ ಹಾಗು ಬಿಸಿಯೂಟ ಸೌಲಭ್ಯ ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ  ಗಿರೀಶ್, ಕ್ಷೇತ್ರ ಸಂಪನ್ಮೂಲ ಅಧಿಕಾರಿ ಆಂಜನೇಯ, ಶಾಲೆಯ ಮುಖ್ಯೋಪಾಧ್ಯಾಯರಾದ ದಿನಕರ್, ಮತ್ತು ಎಸ್.ಡಿ.ಎಂ.ಸಿ ಅಧ್ಯಕ್ಷ ಸತೀಶ್ ಮತ್ತು ಸದಸ್ಯರು .ಗ್ರಾಮ ಪಂಚಾಯಿತಿ ಸದಸ್ಯರಾದ ವೀರೇಶ್. ನೀಲಮ್ಮ. ಚಂದ್ರಪ್ಪ .ಹಾಗೂ ಶಾಲಾ ಶಿಕ್ಷಕರು. ಊರಿನ ಎಲ್ಲಾ ಮುಖಂಡರು ಸೇರಿದಂತೆ ಶಿಕ್ಷಣ ಪ್ರೇಮಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!