ಜಲಸಿರಿ ಯೋಜನೆ ಕಾಮಗಾರಿ ಹಿನ್ನೆಲೆ ಈ ಭಾಗದಲ್ಲಿ ವಿದ್ಯುತ್ ವ್ಯತ್ಯಯ

ದಾವಣಗೆರೆ :66/11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಫೀಡರ್‍ಗಳಲ್ಲಿ 24*7 ಜಲಸಿರಿ ಯೋಜನೆಯಡಿ ನಿರಂತರ ಶುದ್ದಕುಡಿಯುವ ನೀರಿನ ಸರಬರಾಜು ಯೋಜನೆ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ  ಜ.20 ಮತ್ತು 21 ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ಜ. 20 ರಂದು ಡಿಸಿಎಂ ಎಫ್-06  ಫೀಡರ್ ವ್ಯಾಪ್ತಿಯ ಶಕ್ತಿನಗರ, ಬನಶಂಕರಿ ಬಡಾವಣೆ, ಡಿ..ಸಿ.ಎಂ ಟೌನ್‍ಶಿಪ್ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು

ಜ.21 ರಂದು ಶನೇಶ್ವರ ಎಫ್09 ಫೀಡರ್ ವ್ಯಾಪ್ತಿಯ ಜಿ.ಎಂ.ಐ.ಟಿ. ಕಾಲೇಜು, ದೇವರಾಜ ಅರಸ್ ಬಡಾವಣೆ, ಪೂಜಾ ಹೋಟಲ್, ಸಾಯಿ ಹೋಟಲ್, ಶಂಕರ ವಿಹಾರ  ಬಡಾವಣೆ, ವಿನಾಯಕ ನಗರ, ಸಬ್‍ರಿಜಿಸ್ಟರ್ ಆಫೀಸ್, ಬಿ.ಎಸ್.ಎನ್.ಎಲ್ ಆಫೀಸ್, ಕೋರ್ಟ್ ಸುತ್ತ ಮುತ್ತ, ಗಿರಿಯಪ್ಪ ಲೇಔಟ್, ಪಿಬಿ. ರಸ್ತೆ, ಸಂಗೊಳ್ಳಿ ರಾಯಣ್ಣ ಸರ್ಕಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪದರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!