ಜೆ.ಡಿ.ಎಸ್ ಗೆ ಆತ್ಮಸಾಕ್ಷಿ ಇದೆಯೇ: ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು, ಫೆಬ್ರವರಿ 27; ಜೆಡಿಎಸ್ ಗೆ ಗೆಲ್ಲಲು 45 ಮತಗಳ ಅಗತ್ಯವಿದೆ ಅಷ್ಟು ಮತಗಳು ಅವರಿಗಿದೆಯೇ ? ಅವರಿಗೆ ಆತ್ಮಸಾಕ್ಷಿ ಇದೆಯೇ ಎಂದು ಪ್ರಶ್ನಿಸಿ ಅವರ ಮತಗಳೇ ನಮಗೆ ಬರುತ್ತವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಮಾಜಿ ಮುಖ್ಯಮಂತ್ರಿ ದಿವಂಗತ ಕೆ.ಸಿ.ರೆಡ್ಡಿ ಅವರ ಪುಣ್ಯತಿಥಿಯ ಅಂಗವಾಗಿ ಅವರ ಪ್ರತಿಮೆಯ ಬಳಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾಧ್ಯಮದವರೊಂದಿಗೆ ಮಾತನಾಡಿದರು.
ರಾಜ್ಯ ಸಭಾ ಚುನಾವಣೆಯ ಬಗ್ಗೆ ಮಾತನಾಡಿ ಎಲ್ಲರೂ ಗೆಲ್ಲಬೇಕೆಂದೆ ಸ್ಪರ್ಧಿಸುತ್ತಾರೆ ಎಂದರು.
ಶಾಸಕರಿಗೆ ಆಮಿಷ
ಅಡ್ಡಮತ ವಿಚಾರವಾಗಿ ಕಾನೂನು ತಿದ್ದಿ ಎಫ್.ಐ.ಆರ್. ಹಾಕಲಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿ ಅವರಿಗೆ ಮತವಿಲ್ಲ ದಿದ್ದರೂ ಅಭ್ಯರ್ಥಿಯನ್ನು ನಿಲ್ಲಿಸಿ , ಶಾಸಕರಿಗೆ ಆಮಿಷಗಳನ್ನು ಒಡ್ಡುತ್ತಿದ್ದಾರೆ. ಬೆದರಿಕೆ ಹಾಕಿರುವುದಕ್ಕೆ ಎಫ್.ಐ.ಆರ್ ಹಾಕಲಾಗಿದೆ ಎಂದರು. ನಮ್ಮ ಮೂವರು ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ಅವರು ಆತ್ಮವಿಶ್ವಾಸ ವ್ಯಕ್ತಪಡಿಸಿದರು.