ಕೆ. ಜೈಮುನಿ ಅವರಿಗೆ ರಾಷ್ಟ್ರೀಯ ಮಾಧ್ಯಮ ರತ್ನ ಪ್ರಶಸ್ತಿ ಪ್ರದಾನ

ಗೋವಾ : ಶ್ರೀನಿಧಿ ಫೌಂಡೇಶನ್ ಕರ್ನಾಟಕ, ನಮ್ಮವರಿಗಾಗಿ ನಮ್ಮ ಧ್ವನಿ ಸಮಾಜಮುಖಿ ಸೇವಾ ಸಂಘ ಕರ್ನಾಟಕ ಅಖಿಲ ಗೋವಾ ರಾಜ್ಯ ಘಟಕ, ಕನ್ನಡ ಸಾಹಿತ್ಯ ಪರಿಷತ್ತು ಇವರ ಸಹಯೋಗದಲ್ಲಿ ರಾಷ್ಟ್ರಮಟ್ಟದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮವು ಗೋವಾದ ವಾಸ್ಕೋ  ಸಿಟಿಯ ರವೀಂದ್ರ ಕಲಾಭವನದಲ್ಲಿ ಏರ್ಪಡಿಸಲಾಗಿತ್ತು.ಈ ಸಮಾರಂಭದಲ್ಲಿ ಸುಮಾರು 30 ವರ್ಷಗಳ ಕಾಲ ನಿರಂತರ ಸೇವೆಯಲ್ಲಿ ತೊಡಗಿ ಉತ್ತಮ ಸಾಧನೆ, ಹಾಗೂ ಹಲವಾರು ಪ್ರಶಸ್ತಿಗಳನ್ನು ಪಡೆದಂತಹ ದಾವಣಗೆರೆಯ ಸುಭಾಷಿತ ಪತ್ರಿಕೆಯ ಸಂಪಾದಕರೂ, ಅಂತರಾಷ್ಟ್ರೀಯ ಯೋಗಪಟುಗಳೂ, ಡಾಕ್ಟರೇಟ್ ಪುರಸ್ಕೃತರೂ ಆದ ಕೆ. ಜೈಮುನಿ ಅವರಿಗೆ `ರಾಷ್ಟ್ರೀಯ ಮಾಧ್ಯಮ ರತ್ನ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಇಟಗಿಯ ಭೂಕೈಲಾಸ ಮೇಲುಗದ್ದಿಗೆ ಹಿರೇಮಠ ಶ್ರೀ ಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳವರು ಪ್ರಶಸ್ತಿ ಪ್ರದಾನ ಮಾಡಿದರು.ಅಖಿಲ ಕರ್ನಾಟಕ ಬಂಜಾರ ನೌಕರ ಕ್ಷೇಮಾಭಿವೃದ್ಧಿ ಸಂಘ ರಾಜ್ಯಾಧ್ಯಕ್ಷ ಎಸ್.ಎಲ್. ರಾಥೋಡ್, ಹಾವೇರಿ ಮಹಿಳಾ ರಾಜ್ಯಾಧ್ಯಕ್ಷರೂ, ಭಾರತೀಯ ಸೇವಾ ಸಮಿತಿ ರೈತಪರ ಹೋರಾಟಗಾರ್ತಿ ಡಾ. ಮಂಜುಳಾ, ಎಸ್. ಅಕ್ಕಿ, ಬೆಂಗಳೂರು ಮೇಘ ಮೈತ್ರಿ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷರಾದ ಬಾಗಲಕೋಟೆ ರಮೇಶ್ ಕಮತಗಿಮಠ್  ಕಾರ್ಯಕ್ರಮದ  ಮುಖ್ಯ ಅತಿಥಿಗಳಾಗಿದ್ದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಮಂಜುನಾಥ್ ಶಿವಕ್ಕನವರ್ ವಹಿಸಿದ್ದರು. ಸಮ್ಮೇಳನದ ಅಧ್ಯಕ್ಷರೂ ಹಾಗೂ ಹಿರಿಯ ಸಾಹಿತಿಗಳೂ ಆದ ಹೊಳೆನರಸೀಪುರದ ಆರ್.ಬಿ ಪುಟ್ಟೇಗೌಡ ಸೇರಿದಂತೆ ಮುಂತಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!