ದಾವಣಗೆರೆ, ಸೆ.09: ನೂರಾರು ಮರಗಳನ್ನು ಬೆಳೆಸಿ ಕನ್ನಡದ ಹೋರಾಟಗಾರರು, ಕವಿಗಳು, ಸಾಹಿತಿಗಳ ಚಿತ್ರಗಳನ್ನು ಗೋಡೆ ಬರಹಗಳನ್ನು ಬರೆಸಿ ಕನ್ನಡ ಧ್ವಜವನ್ನು ನಿರ್ಮಿಸಿ ಪ್ರತಿವರ್ಷ ಕನ್ನಡ (kannada) ರಾಜ್ಯೋತ್ಸವ ಆಚರಿಸುತ್ತಿದ್ದ ಕನ್ನಡವನದ ಧ್ವಜಸ್ತಂಭವನ್ನು ಕಿಡಿಗೇಡಿಗಳು ಧ್ವಂಸ ಮಾಡಿದ್ದಾರೆ.
ಆ ಸ್ಥಳವನ್ನು ದಾವಣಗೆರೆ ನಗರದ ಎಂಸಿಸಿ ಬಿ ಬ್ಲಾಕ್ ನಲ್ಲಿರುವ ಹಾಳು ಬಿದ್ದ ಜಾಗವನ್ನು ಕನ್ನಡ ಅಭಿಮಾನ ಹಾಗೂ ಪರಿಸರ ಅಭಿಮಾನದಿಂದ ಕಸದ ರಾಶಿಯಿಂದ ತುಂಬಿದ್ದ ಸ್ಥಳವನ್ನು ಸ್ವಚ್ಛಗೊಳಿಸಿದರು.
fashion; ಬೆಣ್ಣೆ ನಗರಿಯ ಡಾ. ಶ್ರುತಿ ಮಿಸೆಸ್ ಇಂಡಿಯಾ ಕರ್ನಾಟಕದ ರನ್ನರ್ ಅಪ್
ಈ ಬಗ್ಗೆ ಪ್ರತಿಕ್ರಿಯಿಸಿದ ಸ್ಥಳೀಯ ಮಹಾನಗರ ಪಾಲಿಕೆಯ ಸದಸ್ಯರು, ಉದ್ದೇಶಪೂರ್ವಕವಾಗಿ ನಮ್ಮ ಕನ್ನಡ ವನದಲ್ಲಿ ದಿ. ಪುನೀತ್ ರಾಜಕುಮಾರ್ ಇವರ ಪ್ರತಿಮೆ ಮುಂದಿರುವ ಕನ್ನಡ ಧ್ವಜವಿದ್ದ ಧ್ವಜ ಸ್ತಂಭವನ್ನು ಧ್ವಂಸಗೊಳಿಸಲಾಗಿದೆ. ಕರ್ನಾಟಕದಲ್ಲಿದ್ದು ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತರುತ್ತಿರುವ ಕನ್ನಡ ವಿರೋಧಿಗಳಿಗೆ ಕನ್ನಡಿಗರು ಹೋರಾಟ ಮಾಡಬೇಕಾಗಿದೆ ಕಾನೂನು ಕ್ರಮ ಕೈಗೊಳ್ಳಬೇಕಾಗಿದೆ ಎಂದು ಒತ್ತಾಯಿಸಿದರು.
