‘ದಿ ವ್ಯಾಕ್ಸಿನ್ ವಾರ್’ ಬಾಲಿವುಡ್ ಚಿತ್ರದಲ್ಲಿ ಕಾಂತಾರ ಬೆಡಗಿ ಸಪ್ತಮಿ ಗೌಡ

ಮುಂಬೈ: ‘ದಿ ವ್ಯಾಕ್ಸಿನ್ ವಾರ್’ನಲ್ಲಿ ನಟಿ ಸಪ್ತಮಿ ಗೌಡ ನಟಿಸುತ್ತಿದ್ದಾರೆ. ಇದು ಕಾಶ್ಮೀರ ಫೈಲ್ಸ್ ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ನಿರ್ದೇಶಿಸುತ್ತಿರುವ ಮುಂದಿನ ಚಿತ್ರವಾಗಿದೆ. ಈಗಾಗಲೇ ಚಿತ್ರದ ಶೂಟಿಂಗ್ ಆರಂಭವಾಗಿದ್ದು, ಕಾಂತಾರ ಬೆಡಗಿ ಸೇರ್ಪಡೆ ಹೊಸ ಸುದ್ದಿಯಾಗಿದೆ.


ಈ ಪ್ರಾಜೆಕ್ಟ್‌ ಭಾಗವಾಗಲು ನನಗೆ ಅತ್ಯಂತ ಸಂತೋಷವಾಗಿದ್ದು, ಚಿತ್ರದಲ್ಲಿ ಕೆಲಸ ಮಾಡಲು ಉತ್ಸುಕಳಾಗಿದ್ದೇನೆ. ಈ ಅವಕಾಶ ನೀಡಿದ ವಿವೇಕ್ ಅಗ್ನಿಹೋತ್ರಿ ಸರ್ ನಿಮಗೆ ಧನ್ಯವಾದ ಎಂದು ಸಪ್ತಮಿ ಗೌಡ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!