karnataka chitrakala parishat; ಚಿತ್ರಕಲಾ ಪರಿಷತ್ತಿನಲ್ಲಿ ಕರಕುಶಲ ವೈಭವ; ವರಮಹಾಲಕ್ಷ್ಮಿ ಹಬ್ಬಕ್ಕೆ ಮೆರಗು ತಂದ ಕಲಾ ಮೇಳ
ಬೆಂಗಳೂರು, ಆ. 18: ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ (Karnataka Chitrakala Parishat) ಕೈಮಗ್ಗ, ಕರಕುಶಲ ವಸ್ತುಗಳ ವೈಭವ “ಇಂಡಿಯನ್ ಹಾತ್ ಫೆಸ್ಟಿವಲ್” ಆರಂಭವಾಗಿದೆ. ವರಮಹಾಲಕ್ಷ್ಮಿ ಹಬ್ಬದ (varamahalaxmi festival) ಅಂಗವಾಗಿ ಆ. 18 ರಿಂದ 27 ರ ವರೆಗೆ ದೇಶದ ಎಲ್ಲಾ ಭಾಗಗಳ ವಿಶೇಷ ವಿನ್ಯಾಸಗಳ ವಸ್ತುಗಳು ದೊರೆಯಲಿವೆ.
ಉತ್ಪಾದಕರು ನೇರವಾಗಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದು, ಸುಲಭ ದರದಲ್ಲಿ ದೊರೆಯುತ್ತಿವೆ. ಅತ್ಯುತ್ತಮ ಗುಣಮಟ್ಟದ ಚಿತ್ತಾಕರ್ಷಕ ಬಣ್ಣ ಬಣ್ಣದ ವಸ್ತುಗಳು, ಸೀರೆ, ಬಟ್ಟೆ, ವಡವೆ, ಮನೆಗಳ ಅಂದ ಹೆಚ್ಚಿಸುವ ಭಿನ್ನ ವಿಭಿನ್ನ ಅಲಂಕಾರಿಕ ವಸ್ತುಗಳು ಗ್ರಾಹಕರನ್ನು ಸೆಳೆಯುತ್ತಿವೆ. ವೈವಿಧ್ಯಮಯ ಕೆತ್ತನೆಯ ಕಸೂರಿ ವಸ್ತುಗಳು, ಮಹಿಳೆಯರ ಅಂದ ಹೆಚ್ಚಿಸುವ ವಸ್ತುಗಳ ಮಾರಾಟಕ್ಕೆ ವೇದಿಕೆ ಸನ್ನದ್ಧವಾಗಿದೆ. ವಿಶೇಷವಾಗಿ ವರಮಹಾಲಕ್ಷ್ಮಿ ಹಬ್ಬಕ್ಕೆ ಮೆರಗು ತರುವ ವಸ್ತುಗಳನ್ನು ಸಹ ಮಾರಾಟ ಮಾಡಲಾಗುತ್ತಿದೆ.
ರೈಲ್ವೆ ಬಜೆಟ್ ಒಂದು.! ನಿರೀಕ್ಷೆಗಳು ಹಲವಾರು.! ದಾವಣಗೆರೆಗೆ ರೈಲ್ವೆ ನಿರೀಕ್ಷೆ ಏನು.?
ಜೀವನ ಶೈಲಿ ಮೇಲೆ ಪ್ರಭಾವ ಬೀರುವ ಕಲಾವಿದೆ ಜೀವಿತ ಜಗದೀಶ್ ಮೇಳಕ್ಕೆ ಚಾಲನೆ ನೀಡಿ ಮಾತನಾಡಿ, ಇದು ನಿಜಕ್ಕೂ ವಿಶೇಷವಾದ ಮೇಳವಾಗಿದ್ದು, ವರಮಹಾಲಕ್ಷ್ಮಿ ಹಬ್ಬಕ್ಕಾಗಿ ಮೇಳ ವಿಶೇಷ ಮನ್ನಣೆ ಪಡೆದಿದೆ. ಬೇರೆ ಬೇರೆ ರಾಜ್ಯಗಳ ಜೀವನ ಶೈಲಿ ತಿಳಿಯಲು, ಅಲ್ಲಿನ ವಿಶೇಷತೆಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಲು ಮೇಳ ಪೂರಕವಾಗಿದೆ ಎಂದರು.
ಶಾಲಾ – ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸಹ ಮೇಳದ ವೈಶಿಷ್ಟ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.