ಮಕ್ಕಳಿಗೆ ವಿಜ್ಞಾನದ ಅಭಿರುಚಿ ಬೆಳೆಸಿದರೆ ಹೊಸ ರೀತಿಯ ಆವಿಷ್ಕಾರ ಕಾಣಲು ಸಾಧ್ಯ – ಬಸವಪ್ರಭು ಸ್ವಾಮೀಜಿ

ವಿಜ್ಞಾನದ ಅಭಿರುಚಿ

ದಾವಣಗೆರೆ: ನಗರದ ವಿರಕ್ತಮಠ ಎಸ್.ಜೆ.ಎಂ.ಸ್ಕೂಲ್ ನಲ್ಲಿ ನಡೆದ ವಿಜ್ಞಾನ ಮತ್ತು ಕಲಾ ವಸ್ತು ಪ್ರದರ್ಶನದ ಉದ್ಘಾಟಿಸಿ ಆಶೀರ್ವಚನ ನೀಡಿದರು.

ವಿಜ್ಞಾನದ ಅಭಿರುಚಿ

ಈ ಹಿಂದಿನ ದಿನಗಳಲ್ಲಿ ನಮ್ಮ ವಿಜ್ಞಾನಿಗಳು ಹೊಸ ಹೊಸ ರೀತಿಯ ಸಂಶೋಧನೆಯನ್ನು ನಡೆಸಿದ ಫಲವಾಗಿ ಇಂದು ದೇಶವು ಸಾಕಷ್ಟು ಪ್ರಗತಿಯನ್ನು ಖಂಡಿದೆ. ಅದರಲ್ಲಿ ಪ್ರಮುಖವಾಗಿ ಚಂದ್ರಯಾನ -3 ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ . ದೇಶದ ಪ್ರಗತಿಗೆ ನಮ್ಮ ವಿಜ್ಞಾನಿಗಳ ಕೊಡುಗೆ ಅಪಾರವಾಗಿದೆ ಹಾಗಾಗಿ ಇಂದಿನ ಮಕ್ಕಳಿಗೆ ವಿಜ್ಞಾನ ತಂತ್ರಜ್ಞಾನಗಳ ಮಾಹಿತಿಯನ್ನು ನೀಡಿ ಅವರಿಂದಲೇ ಮುಂದಿನ ದಿನಗಳಲ್ಲಿ ಒಳ್ಳೆಯ ಆವಿಷ್ಕಾರಗಳನ್ನು ಕಾಣಬಹುದು ಎಂದರು. ಸಾಧಕರು ಬಡತನದಲ್ಲಿ ಹುಟ್ಟುತ್ತಾರೆ ಹಾಗಾಗಿ ನಾವು ಬಡವರು ಎಂಬ ಕೀಳರಿಮೆಯನ್ನು ಬಿಟ್ಟು ದೃಢ ನಿರ್ಧಾರದಿಂದ ಕಾರ್ಯವನ್ನು ಮಾಡಿದರೆ ಯಶಸ್ವಿಯಾಗಲು ಸಾಧ್ಯ ಎಂದು ಸ್ವಾಮೀಜಿ ಹೇಳಿದರು.

Leave a Reply

Your email address will not be published. Required fields are marked *

error: Content is protected !!