kondaji jayaprakash; ಸಚಿವ ಎಸ್ ಎಸ್ ಎಂ ಮಾತಿಗೆ ಕೊಂಡಜ್ಜಿ ಜಯಪ್ರಕಾಶ್ ಕೌಂಟರ್

ದಾವಣಗೆರೆ, ನ.07: ಯಾವುದೇ ಜನಪ್ರತಿನಿಧಿ ಆಗಲೀ,‌ ಸಾರ್ವನಿಕರಿಗಾಗಲೀ, ಇನ್ನೊಬ್ಬ ಜನಪ್ರತಿನಿಧಿ ಬಗ್ಗೆ ಮಾತನಾಡುವಾಗ ಪದ ಪ್ರಯೋಗ, ಭಾಷಾ ಉಚ್ಛಾರಣೆ ಸರಿ ಇದ್ದರೆ ಮಾತ್ರ ಅವರೊಬ್ಬ ಉತ್ತಮ ಜನಪ್ರತಿನಿಧಿ ಅಗಲು ಸಾಧ್ಯ. ಇಲ್ಲವಾದಲ್ಲಿ ಅವರು ಜನಪ್ರತಿನಿಧಿಗಳಾಗಲು ಅರ್ಹತೆ ಹೊಂದಿರುವುದಿಲ್ಲ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಕೊಂಡಜ್ಜಿ ಜಯಪ್ರಕಾಶ್ (kondaji jayaprakash) ಅಭಿಪ್ರಾಯ ಪಟ್ಟರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿಗೆ ಮಾಧ್ಯಮಗಳ ಮುಂದೆ ಮಾತನಾಡುವಾಗ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವನ್ಯಾರು ಜೆಪಿ ಎಂದು ಹೇಳಿಕೆ ನೀಡಿದ್ದಾರೆ. ಈ 40 ವರ್ಷಗಳ ಕಾಲ ನಾನು ರಾಜಕೀಯದಲ್ಲಿ ಹಲವಾರು ಸೇವೆಗಳನ್ನು ಸಲ್ಲಿಸಿದ್ದೇನೆ. ಸಾರ್ವಜನಿಕ ವಲಯದಲ್ಲಿ ನಾನ್ಯಾರು ಎಂದು ತಿಳಿದಿದೆ. ನಿಮಗೆ ತಿಳಿದಿಲ್ಲವೇ, ನಾನು ಯಾವುದೇ ಗಾಡ್ ಫಾದರ್ ಗಳಿಲ್ಲದೆ ಈ ಮಟ್ಟಿಗೆ ಬೆಳೆದಿದ್ದೇನೆ. ನೀವು ಶಿವಶಂಕರಪ್ಪ ಅವರ ಮಗ ಅನ್ನೋದು ಬಿಟ್ಟರೆ ನಿಮ್ಮ ಸ್ವಂತ ಐಡೆಂಟಿಟಿ ಏನಿದೆ ಎಂದು ಪ್ರಶ್ನಿಸಿದರು.

ನಾನು ವಿದ್ಯಾರ್ಥಿ ನಾಯಕನಾಗಿ, ಹೋರಾಟಗಾರನಾಗಿ ದಾವಣಗೆರೆ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಸಂದರ್ಭದಲ್ಲಿ ಅಂದಿನ ಉಪಕುಲಪತಿಗಳ ಜೊತೆ ಚರ್ಚಿಸಿ ಥೀಮ್ ಪಾರ್ಕ್ ಮಾಡಲಾಗಿದೆ. ಇದಲ್ಲದೆ ರಾಜಕೀಯವಾಗಿ 1985ರಿಂದ ವಿದ್ಯಾರ್ಥಿ ಸಂಘಟನೆಯಲ್ಲಿ ಪಾಲ್ಗೊಳ್ಳುವ ಜೊತೆಗೆ 1996 ರಿಂದ 2008ರ ವರೆಗೆ ಕಾಂಗ್ರೆಸ್ ನಲ್ಲಿದ್ದ ವೇಳೆ ನಾನು ಏನು ಎಂದು ನಿಮಗೆ ತಿಳಿದಿಲ್ಲವೇ ಎಂದು ಮರು ಪ್ರಶ್ನಿಸಿದರು.

Chancellor; ಜಿಎಂ ವಿಶ್ವವಿದ್ಯಾಲಯಕ್ಕೆ ಕುಲಪತಿಗಳಾಗಿ ಡಾ ಎಸ್ ಆರ್ ಶಂಕಪಾಲ್ ಅಧಿಕಾರ ಸ್ವೀಕಾರ

ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಸಂಸದರ ಪಾತ್ರವೇನು ಎಂದು ಪದೇಪದೇ ಕೇಳುತ್ತಿರುವ ಎಸ್ ಎಸ್ ಮಲ್ಲಿಕಾರ್ಜುನ್ ಅವರೇ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ, ಕುಂದುವಾಡ ಕೆರೆ ಅಭಿವೃದ್ಧಿಯಲ್ಲಿ, ಗ್ಲಾಸ್ ಹೌಸ್ ನಿರ್ಮಾಣದಲ್ಲಿ ನಿಮ್ಮ ಪಾತ್ರ ಏನು ಎಂಬುದು ನೀವು ತಿಳಿಸಬೇಕು. ಇವೆರಡರಲ್ಲೂ ನಿಮ್ಮ ಪಾತ್ರ ಶೂನ್ಯ ಎಂದು ಕಿಡಿಕಾರಿದರು.

2016ರಲ್ಲಿ ನರೇಂದ್ರ ಮೋದಿಯವರ ಶ್ರಮದಿಂದಾಗಿ ಅಂದಿನ ಕೇಂದ್ರದ ನಗರಾಭಿವೃದ್ಧಿ ಸಚಿವರಾದ ವೆಂಕಯ್ಯ ನಾಯ್ಡು ಅವರಿಗೆ ಸಂಸದರಾದ ಜಿಎಂ ಸಿದ್ದೇಶ್ವರ ಅವರು ಸ್ಮಾರ್ಟ್ ಯೋಜನೆ ಅಡಿ ದಾವಣಗೆರೆಯನ್ನು ಸೇರ್ಪಡೆಸಲು ಒತ್ತಾಯ ಪರಿಣಾಮವಾಗಿ ಇಂದು ದಾವಣಗೆರೆ ಯೋಜನೆಗೆ ದೊರಕಿದೆ. ಇದನ್ನು ಜಿಲ್ಲಾ ಉಸ್ತುವಾರಿ ಉಸ್ತುವಾರಿ ಸಚಿವ ಮಲ್ಲಿಕಾರ್ಜುನ ಅರಿಯಬೇಕಾಗಿದೆ ಎಂದು ಹೇಳಿದರು.

ಯಾವುದೇ ಒಬ್ಬ ಜನಪ್ರತಿನಿಧಿ ಇನ್ನೊಬ್ಬ ಜನಪ್ರತಿನಿಧಿ ಬಗ್ಗೆ ಮಾತನಾಡುವಾಗ ಅಸಂವಿಧಾನಿಕ ಪದಗಳನ್ನು ಬಳಸುವುದು ಅತ್ಯಂತ ಖಂಡನೀಯ. ಇಂತಹ ವ್ಯಕ್ತಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವುದು ನಮ್ಮ ದುರ್ದೈವವೇ ಸರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಶಿವರಾಜ್ ಪಾಟೀಲ್ ಇದ್ದರು

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!