Chancellor; ಜಿಎಂ ವಿಶ್ವವಿದ್ಯಾಲಯಕ್ಕೆ ಕುಲಪತಿಗಳಾಗಿ ಡಾ ಎಸ್ ಆರ್ ಶಂಕಪಾಲ್ ಅಧಿಕಾರ ಸ್ವೀಕಾರ
ದಾವಣಗೆರೆ, ನ.07: ದಾವಣಗೆರೆಯ ಪ್ರತಿಷ್ಠಿತ ನೂತನ ಜಿಎಂ ವಿಶ್ವವಿದ್ಯಾಲಯಕ್ಕೆ ಮೊದಲನೇ ಕುಲಪತಿಗಳಾಗಿ (Chancellor) ಡಾ ಎಸ್ ಆರ್ ಶಂಕಪಾಲ್ ಅಧಿಕಾರವನ್ನು ಸ್ವೀಕರಿಸಿದರು.
ಶಿಕ್ಷಣ ಕ್ಷೇತ್ರ, ಆಡಳಿತ ಮತ್ತು ನಿರ್ವಹಣೆ ವಿಭಾಗದಲ್ಲಿ ಸುಧೀರ್ಘ 40 ವರ್ಷಗಳ ಅನುಭವವಿರುವ ಇವರು ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿಯನ್ನು 1982ರಲ್ಲಿ, ಎಮ್ ಟೆಕ್ ಪದವಿಯನ್ನು ಮದ್ರಾಸಿನ ಐಐಟಿಯಲ್ಲಿ ಮತ್ತು 1998 ರಲ್ಲಿ ಡಾಕ್ಟರೇಟ್ ಪದವಿಯನ್ನು ಪ್ರತಿಷ್ಠಿತ ಬಿಟ್ಸ್ ಪಿಲಾನಿ ಯಲ್ಲಿ ಪಡೆದಿರುತ್ತಾರೆ. ಹಲವಾರು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅನುಭವವಿರುವ ಇವರು ಎಂಎಸ್ ರಾಮಯ್ಯ ಯುನಿವರ್ಸಿಟಿ ಆಫ್ ಅಪ್ಲೈಡ್ ಸೈನ್ಸ್ ನ ಕುಲಪತಿಗಳಾಗಿ ಐದು ವರ್ಷಗಳ ಸುಧೀರ್ಘ ಸೇವೆಯನ್ನು ಸಲ್ಲಿಸಿರುತ್ತಾರೆ. ಪಿಇಎಸ್ ವಿಶ್ವವಿದ್ಯಾಲಯದ ಸಹ ಕುಲಪತಿಗಳಾಗಿ, ದಯಾನಂದ ಸಾಗರ್ ವಿಶ್ವವಿದ್ಯಾಲಯದ ಸಹ ಕುಲಪತಿಗಳಾಗಿ, ರೇವಾ ವಿಶ್ವವಿದ್ಯಾಲಯದ ಮಾರ್ಗದರ್ಶಕರಾಗಿ, ಈಸ್ಟ್ ಪಾಯಿಂಟ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ನ ಕಾರ್ಯನಿರ್ವಾಹಕ ನಿರ್ದೇಶಕರಾಗಿಯೂ ಸೇವೆಯನ್ನು ಸಲ್ಲಿಸಿದ್ದಾರೆ. ಇವರ ಸೇವಾ ಅವಧಿಯಲ್ಲಿ 10 ಕೋಟಿಗೂ ಅಧಿಕ ಅನುದಾನವನ್ನು ಭಾರತ ಸರ್ಕಾರದ ವಿವಿಧ ಸಂಸ್ಥೆಗಳಿಂದ ಮತ್ತು ಕೈಗಾರಿಕೆಗಳಿಂದ ಹಾಗೂ ಕರ್ನಾಟಕ ಸರ್ಕಾರದ ಐಟಿ, ಬಿಟಿ ಮತ್ತು ಎಸ್ ಟಿ ವಿಭಾಗಗಳಿಂದ 526 ಲಕ್ಷಕ್ಕೂ ಅಧಿಕ ಅನುದಾನವನ್ನು ಇನ್ಕ್ಯೂಬೇಷನ್ ಕೇಂದ್ರಗಳ ಸ್ಥಾಪನೆಗೆ ತಂದಿರುತ್ತಾರೆ.
scholarship; ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗಾಗಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆರ್ಥಿಕ ನೆರವು.!
ಇದುವರೆಗೂ 85ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ. 9 ತಾಂತ್ರಿಕ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಶಿಕ್ಷಣದ ಜ್ಞಾನಾರ್ಜನೆಗೆ ಹಲವಾರು ದೇಶಗಳ 30ಕ್ಕೂ ಹೆಚ್ಚಿನ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಿಗೆ ಭೇಟಿಯನ್ನು ನೀಡಿದ್ದಾರೆ.
ಮೊದಲ ಕುಲಪತಿಗಳಾಗಿ ಅಧಿಕಾರ ಸ್ವೀಕರಿಸಿದ ಇವರಿಗೆ ಶ್ರೀಶೈಲ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷ ಜಿಎಂ ಪ್ರಸನ್ನ ಕುಮಾರ್, ಜಿಎಂ ವಿಶ್ವವಿದ್ಯಾಲಯದ ಕುಲಾಧಿಪತಿಗಳು ಹಾಗೂ ಟ್ರಸ್ಟ್ ನ ಕಾರ್ಯದರ್ಶಿ ಜಿಎಂ ಲಿಂಗರಾಜು, ಖಜಾಂಚಿ ಜಿ ಎಸ್ ಅನಿತ್ ಕುಮಾರ್, ಆಡಳಿತಾಧಿಕಾರಿ ಸುಭಾಷ್ ಚಂದ್ರ ವೈ ಯು, ಜಿಎಂ ವಿಶ್ವವಿದ್ಯಾಲಯದ ಸಹ-ಕುಲಪತಿಗಳಾದ ಡಾ ಎಚ್ ಡಿ ಮಹೇಶಪ್ಪ, ಫ್ಯಾಕಲ್ಟಿ ಆಫ್ ಇಂಜಿನಿಯರಿಂಗ್ ವಿಭಾಗದ ಡೀನ್ ಡಾ ಜಿ ಎಂ ಪಾಟೀಲ್, ಫ್ಯಾಕಲ್ಟಿ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್ ಡೀನ್ ಡಾ ಬಸವರಾಜ್ ಸ್ವಾಮಿ, ಕಾಲೇಜಿನ ಸಿಬ್ಬಂದಿ ವರ್ಗದವರು ಅಭಿನಂದನೆಗಳನ್ನು ತಿಳಿಸಿದ್ದಾರೆ.