ಹುತಾತ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಯನ್ನು ಮರುಸ್ಥಾಪನೆ ಮಾಡಲು ಹಕ್ಕೊತ್ತಾಯ

ಸಂಗೊಳ್ಳಿ ರಾಯಣ್ಣ

ದಾವಣಗೆರೆ: ದಾವಣಗೆರೆ ಜಿಲ್ಲೆ, ಹರಿಹರ ತಾಲ್ಲೂಕು, ಭಾನುವಳ್ಳಿ ಗ್ರಾಮದ  ಶ್ರೀ ಲಕ್ಷö್ಮಪ್ಪ ತಂದೆ ನಾರಾಯಣಪ್ಪರವರಿಗೆ ಸೇರಿದ್ದ
ಆಸ್ತಿ ನಂ. 613/ಪಿ. ಪೂರ್ವ-ಪಶ್ಚಿಮ 12 ಅಡಿ, ಉತ್ತರ-ದಕ್ಷಿಣ 33 ಅಡಿ (ಪೂರ್ವಕ್ಕೆ : ನಾಗಿರೆಡ್ಡಿ ರಸ್ತೆ,
ಪಶ್ಚಿಮ : ಲಕ್ಷö್ಮಪ್ಪ ತಂದೆ ನಾರಾಯಣಪ್ಪನವರ ಸ್ವತ್ತು ಉತ್ತರಕ್ಕೆ : ದೊಡ್ಡಕರಿಯಪ್ಪನವರ ಸ್ವತ್ತು ದಕ್ಷಿಣಕ್ಕೆ : ನಂದಿಗುಡಿ ರಸ್ತೆ)
ಚಕ್ಕುಬಂದಿಯ ಖಾಸಗಿ ಜಾಗದಲ್ಲಿ ಸದರಿ ಭಾನುವಳ್ಳಿ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣನ ಅಭಿಮಾನಿಗಳಿಂದ
ಅಭಿಮಾನದಿಂದ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಪ್ರತಿಷ್ಟಾಪಿಸಲಾಗಿತ್ತು.
ಸ್ವಾತಂತ್ರö್ಯ ಸಂಗ್ರಾಮದಲ್ಲಿ ಪ್ರಥಮ ಬಾರಿ ಬ್ರಿಟೀಷರಿಗೆ ಸೋಲಿನ ರುಚಿಯನ್ನು ತೋರಿಸಿದ ದೇಶಕ್ಕಾಗಿ ಪ್ರಾಣವನ್ನೇ
ಕೊಟ್ಟ ಹುತಾತ್ಮ, ಸ್ವ್ವಾತಂತ್ರ ಹೋರಾಟಗಾರ   ಕ್ರಾಂತಿವೀರ  ಸಂಗೊಳ್ಳಿ  ರಾಯಣ್ಣರು  ಹುಟ್ಟಿದ್ದು  ಆಗಸ್ಟ್ 15,  ಅಂದು
ಭಾರತ ದೇಶಕ್ಕೆ  ಸ್ವಾತಂತ್ರö್ಯ ಸಿಕ್ಕ ದಿನವಾಗಿರುತ್ತದೆ ದೇಶಭಕ್ತ,  ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರನ್ನು ಬ್ರಿಟಿಷರು ನೇಣಿಗೆ
ಹಾಕಿದ ದಿನ  ಜನವರಿ 26, ಅಂದು  ಭಾರತ  ಗಣರಾಜ್ಯವಾದ ದಿನವಾಗಿರುತ್ತದೆ.  ಇಂತಹ  ವೀರಪುರುಷ ಜಗತ್ತಿನಲ್ಲೇ
ಅಪರೂಪ ಮತ್ತು ಭಾರತ ದೇಶದ ಹೆಮ್ಮೆಯೂ ಹೌದು. ಸಂಗೊಳ್ಳಿ ರಾಯಣ್ಣ ಯುವಕರಿಗೆ ಆದರ್ಶ,  ಇಂತಹ ವೀರನ
ಬಗ್ಗೆ ರಾಜ್ಯ  ಮತ್ತು  ಕೇಂದ್ರ ಸರ್ಕಾರಗಳು ಹೆಚ್ಚು ಪ್ರಚಾರ ಮಾಡಬೇಕಾಗಿತ್ತು. ಯುವಕರಲ್ಲಿ ದೇಶಪ್ರೇಮದ ಬಗ್ಗೆ ಜಾಗೃತಿ
ಮೂಡಿಸಬೇಕಿತ್ತು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ  ಸ್ವಾತಂತ್ರö್ಯ ಉದ್ಯಾನವನಗಳನ್ನು,  ಮೂರ್ತಿಗಳನ್ನು  ಸ್ಥಾಪಿಸ
ಬೇಕಿತ್ತು. ಆದರೆ ಸರ್ಕಾರಗಳು ಮಾಡಬೇಕಿದ್ದ ಕಾರ್ಯಗಳನ್ನು ಸಂಗೊಳ್ಳಿ ರಾಯಣ್ಣನವರ ಅಭಿಮಾನಿಗಳು ಮಾಡುತ್ತಿದ್ದಾರೆ.

ಸಂಗೊಳ್ಳಿ ರಾಯಣ್ಣ ಸಂಗೊಳ್ಳಿ ರಾಯಣ್ಣ

ಅನ್ಯ ಸಮುದಾಯದವರು ವಿರೋಧಿಸಿದರು ಎಂಬ ಒಂದೇ ಕಾರಣದಿಂದ ಸ್ವಾತಂತ್ರ‍್ಯ ಸೇನಾನಿ, ಹುತಾತ್ಮ ಸಂಗೊಳ್ಳಿ
ರಾಯಣ್ಣನ  ಪ್ರತಿಮೆಯನ್ನು  ಸ್ವಾತಂತ್ರ‍್ಯ  ಹೋರಾಟಗಾರನ  ಪ್ರತಿಮೆ ತೆರವುಗೊಳಿಸಲಾಗಿದೆ.  ತೆರವುಗೊಳಿಸುವ ಮುನ್ನ
ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಯ ಅಭಿಪ್ರಾಯ  ಹಾಗೂ  ಠರಾವನ್ನು ಸಂಗ್ರಹಿಸಿ ಕ್ರಮ  ಕೈಗೊಳ್ಳಬಹುದಾಗಿತ್ತು.
ಸರ್ಕಾರಿ ಜಾಗಗಳಲ್ಲಿ ಅನುಮತಿ ಪಡೆಯದೇ ವಿವಿಧ ಹೆಸರಿನ ವೃತ್ತಗಳ ನಾಮಫಲಕಗಳು, ಮಹಾದ್ವಾರಗಳು ನಿರ್ಮಿಸಿದ್ದು
ಗ್ರಾಮದ ಸೌಹಾರ್ದತೆಗೆ  ಸಾಕ್ಷಿಯಾಗಿದ್ದರೂ  ಸಹ,  ಟ್ರಸ್ಟ್ನವರ  ಖಾಸಗಿ  ಸ್ಥಳದಲ್ಲಿ  ಸ್ಥಾಪಿಸಿದ್ದ ಪ್ರತಿಮೆಯನ್ನು ತೆರವು
ಗೊಳಿಸಿದ್ದು, ಸ್ವಾತಂತ್ರö್ಯ ಹೋರಾಟ, ಹುತಾತ್ಮ ಸಂಗೊಳ್ಳಿ ರಾಯಣ್ಣನವರಿಗೆ ಮಾಡಿದ ಅಪಮಾನ. ಆದ ಕಾರಣ ಭಾನುವಳ್ಳಿ
ಗ್ರಾಮದಲ್ಲಿನ ಎಲ್ಲ ಸಮಾಜದವರ  ಸೌಹಾರ್ದತೆಯನ್ನು  ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಭಾನವಳ್ಳಿ ಗ್ರಾಮ ಪಂಚಾಯಿತಿಯ
ಸಾಮಾನ್ಯ ಸಭೆಯು ದಿಟ್ಟ ನಿರ್ಧಾರ ತೆಗೆದುಕೊಂಡಿದೆ.

ದಾವಣಗೆರೆಯ ಜಿಲ್ಲಾಧಿಕಾರಿಗಳಾದ ತಾವು  ಗ್ರಾಮ ಪಂಚಾಯಿತಿಯ  ಠರಾವಿಗೆ ಮಾನ್ಯತೆ ನೀಡಿ ಲೋಪದೋಷ
ಸರಿಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇವೆ.

ಜಿಲ್ಲಾ ಸಮಿತಿ ಹರಿಹರ ತಾಲ್ಲೂಕು ಸಮಿತಿ ಸಮಾಜದ ಎಲ್ಲಾ ಮುಖಂಡರು ಗ್ರಾಮಸ್ಥರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!