ಅಧ್ಯಾತ್ಮದಿಂದ ಅನ್ನದಾತರ ಸಬಲೀಕರಣ

ಅಧ್ಯಾತ್ಮ

ದಾವಣಗೆರೆ : ಅಂತರರಾಷ್ಟ್ರೀಯ ಮಟ್ಟದ ಅಧ್ಯಾತ್ಮಿಕ ಸೇವಾ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಸ್ಥಳೀಯ ಶಾಖೆಯಿಂದ `ಅಧ್ಯಾತ್ಮದಿಂದ ಅನ್ನದಾತರ ಸಬಲೀಕರಣ’ ವಿಷಯ ಕುರಿತಂತೆ ಅನ್ನದಾತರಿಗಾಗಿ ವಿಶೇಷ ಕಾರ್ಯಕ್ರಮವೊಂದನ್ನು ದಿನಾಂಕ 27ರ ಮಂಗಳವಾರ ಹಮ್ಮಿಕೊಳ್ಳಲಾಗಿದೆ.

ಬ್ರಹ್ಮಾಕುಮಾರೀಸ್‌ ಸಂಸ್ಥೆಯು ವಿಶ್ವವನ್ನು ಪರಿವರ್ತಿಸುವ ದೆಸೆಯಲ್ಲಿ ರಚಿಸಿರುವ 18 ವಿಭಾಗಗಳಲ್ಲೊಂದಾಗಿರುವ ರಾಜಯೋಗ ಶಿಕ್ಷಣ ಮತ್ತು ಸಂಶೋಧನಾ ಪ್ರತಿಷ್ಠಾನದ ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ ವಿಭಾಗದ ಆಶ್ರಯದಲ್ಲಿ ಈ ಕಾರ್ಯಕ್ರಮ ಆಯೋಜನೆಗೊಂಡಿದೆ.

ದಿನಾಂಕ 27ರ ಮಂಗಳವಾರ ಸಂಜೆ 5 ಗಂಟೆಗೆ ಸ್ಥಳೀಯ ಶ್ರೀ ಡಿ. ದೇವರಾಜ ಅರಸು ಬಡಾವಣೆ `ಬಿ’ ಬ್ಲಾಕ್‌ನಲ್ಲಿರುವ `ಶಿವಧ್ಯಾನ ಮಂದಿರ’ದಲ್ಲಿ ಈ ಕಾರ್ಯಕ್ರಮ ಏರ್ಪಡಾಗಿದೆ ಎಂದು ಸಂಸ್ಥೆಯ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ ತಿಳಿಸಿದ್ದಾರೆ.

ಕೃಷಿ ಪ್ರಕ್ರಿಯೆಯಲ್ಲಿ ರಾಜಯೋಗ ಧ್ಯಾನದ ಶಕ್ತಿಯನ್ನು ಬಳಸುವ ನಿಟ್ಟಿನಲ್ಲಿ ಬ್ರಹ್ಮಾಕುಮಾರೀಸ್‌ ಸಂಸ್ಥೆಯು ರೈತರಿಗೆ ಪರಿಚಯಿಸಿರುವ `ಸುಸ್ಥಿರ ಯೋಗ ಕೃಷಿ’ ಕುರಿತಂತೆ ರೈತ ಬಾಂಧವರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರಪಾಂಚಾದ್ಯಂತ ಈ ಕಾರ್ಯಕ್ರಮ ನಡೆಯುತ್ತಿದ್ದು, ಸಂಸ್ಥೆಯ ರಾಜಯೋಗ ತಜ್ಞರು ಮತ್ತು ಸುಸ್ಥಿರ ಯೋಗ ಕೃಷಿಯಲ್ಲಿ ಅನುಭವ ಪಡೆದ ರೈತರು ಈ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.

ಸಮಕಾಲೀನ ಕೃಷಿಯಲ್ಲಿ ಅಸ್ತಿತ್ವದಲ್ಲಿರುವ ಸಮಸ್ಯೆಗಳನ್ನು ಅಧ್ಯಾತ್ಮಿಕತೆಯ ಮೂಲಕ ಮತ್ತು ರಾಜಯೋಗ ಧ್ಯಾನದ ಅಭ್ಯಾಸದಿಂದ ಸುಲಭವಾಗಿ ನಿವಾರಿಸಬಹುದು ಎಂದು ವಿಶ್ವದ ಸರ್ವೋಚ್ಚ ಶಕ್ತಿವಂತ ಪರಮಪಿತ ಶಿವ ಪರಮಾತ್ಮನು ತಿಳಿಸಿದ್ದು, ಇದನ್ನು ರಾಜಯೋಗ ತಜ್ಞರು ಇಂತಹ ಕಾರ್ಯಕ್ರಮಗಳ ಮೂಲಕ ರೈತ ಬಾಂಧವರಿಗೆ ಮನವರಿಕೆ ಮಾಡಿಕೊಡುವ ಸೇವೆ ಮಾಡುತ್ತಿದ್ದಾರೆ ಎಂದು ಲೀಲಾಜಿ ವಿವರಿಸಿದ್ದಾರೆ.

ಅಧ್ಯಾತ್ಮ

ಕಾರ್ಯಕ್ರಮ :
ಬ್ರಹ್ಮಾಕುಮಾರೀಸ್‌ ಸಂಸ್ಥೆಯ ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ ವಿಭಾಗದ ಅಧ್ಯಕ್ಷರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಸರಳಾಜಿ ಈ ಕಾರ್ಯಕ್ರಮವನ್ನು ನಡೆಸಲಿದ್ದಾರೆ. ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ ವಿಭಾಗದ ಉಪಾಧ್ಯಕ್ಷರಾದ ರಾಜಯೋಗಿ ಬ್ರಹ್ಮಾಕುಮಾರ ರಾಜು ಅವರು ವಿಶೇಷ ಉಪನ್ಯಾಸ ನೀಡಲಿದ್ದು, ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ ವಿಭಾಗದ ರಾಷ್ಟ್ರೀಯ ಸಂಯೋಜಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಸುನಂದಾಜಿ ದಿಕ್ಸೂಜಿ ಮಾತುಗಳನ್ನಾಡುವರು.

ಬ್ರಹ್ಮಾಕುಮಾರೀಸ್‌ ಸಂಸ್ಥೆಯ ಹುಬ್ಬಳ್ಳಿ ವಲಯ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ನಿರ್ಮಲಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸುರೇಶ್‌ ಬಿ. ಇಟ್ನಾಳ್‌ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳವರು.

ಜಿಲ್ಲಾ ಕೃಷಿ ಇಲಾಖೆ ಉಪ ನಿರ್ದೇಶಕ ಎಸ್. ಅಶೋಕ, ಜಿಲ್ಲಾ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಜಿ.ಸಿ. ರಾಘವೇಂದ್ರ ಪ್ರಸಾದ್‌, ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಟಿ. ಎನ್. ದೇವರಾಜ್‌, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ತೇಜಸ್ವಿ ವಿ. ಪಟೇಲ್‌, ರಾಜ್ಯ ರೈತ ಸಂಘದ ಉಪಾಧ್ಯಕ್ಷ ಅರುಣಕುಮಾರ್‌ ಕುರುಡಿ ಅವರುಗಳು ವಿಶೇಷ ಆಹ್ವಾನಿತರಾಗಿ ಆಗಮಿಸುವರು.

Leave a Reply

Your email address will not be published. Required fields are marked *

error: Content is protected !!