krishna janmashtami; ಪುಟ್ಟ ಕೃಷ್ಣನಾದ ನಿಖಿಲ್ ಪುತ್ರ ಆವ್ಯಾನ್ ದೇವ್
ಬೆಂಗಳೂರು, ಸೆ. 07: ನಟ ನಿಖಿಲ್ ಕುಮಾರ್, ಪತ್ನಿ ರೇವತಿ ಹಾಗೂ ಕುಟುಂಬ ಕೃಷ್ಣ ಜನ್ಮಾಷ್ಟಮಿ (krishna janmashtami)ಸಂಭ್ರಮದಲ್ಲಿದ್ದು, ಇವರ ಮಗ ಮುದ್ದು ಕೃಷ್ಣನಾಗಿ ಮಿಂಚಿದ್ದಾನೆ.
ಪುತ್ರ ಆವ್ಯಾನ್ ದೇವ್‌ಗೆ ಕೃಷ್ಣನ ವೇಷ ಹಾಕಿಸಿ ಮಸ್ತ್ ಫೋಟೋಶೂಟ್ ಮಾಡಿಸಲಾಗಿದ್ದು, ಮೊಮ್ಮಗನ ಜೊತೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿ ಕೃಷ್ಣ ಜನ್ಮಾಷ್ಟಮಿ ಆಚರಿಸಿದ್ದಾರೆ.
ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿರೋ ಕುಮಾರಸ್ವಾಮಿ ಕುಟುಂಬದ ಜೊತೆ ಕೃಷ್ಣ ಜನ್ಮಾಷ್ಟಾಮಿ ಆಚರಿಸಿದ್ದು, ಮೊಮ್ಮಗನಿಗೆ ಕೃಷ್ಣನ ವೇಷ ಧರಿಸಿ ಖುಷಿಪಟ್ಟಿದ್ದಾರೆ. ಹೊಸ ಸಿನಿಮಾದ ಬ್ಯುಸಿಯ ನಡುವೆಯೂ ತಪ್ಪದೇ ಮನೆಯ ಸಮಾರಂಭದಲ್ಲಿ ನಿಖಿಲ್ ಕುಮಾರ್ ಭಾಗಿಯಾಗಿದ್ದಾರೆ.