ಮಾರ್ಚ್ ೧೫ ರಂದು ದಾವಣಗೆರೆ ಜಿಲ್ಲಾ ಕುರುಬರ ವಿದ್ಯಾವರ್ಧಕ ಸಂಘದ ಚುನಾವಣೆ

ಕುರುಬರ ವಿದ್ಯಾವರ್ಧಕ

ದಾವಣಗೆರೆ ಫೆ ೧೨: ಹದಡಿ ರಸ್ತೆಯಲ್ಲಿ ಇರುವ ದಾವಣಗೆರೆ ಜಿಲ್ಲಾ ಕುರುಬರ ವಿದ್ಯಾವರ್ಧಕ ಸಂಘಕ್ಕೆ ಮೂರು
ಅವಧಿಗೆ ಆಡಳಿತ ಮಂಡಳಿ ನಿರ್ಧೆಶಕ ಸ್ಥಾನಗಳಿಗೇ ಬರುವ ಮಾರ್ಚ್ ತಿಂಗಳ ೧೫ರಂದು ನೆಡೆಯಲಿದೆ ಎಂದು ಸಂಘದ ಅಧ್ಯಕ್ಷ ವಿರುಪಾಕ್ಷಪ್ಪ ವೈ ಕುಂಬಳೂರು ತಿಳಿಸಿದರು.
ವರದಿಗಾರ ಕೂಟದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ೧೫ ರಿ ಬೆಳಿಗ್ಗೆ ೯ ಗಂಟೆ ಯಿಂದ ಸಂಜೆ ೪ಗಂಟೆವರೆಗೂ ಚುನಾವಣೆ ಮತದಾನ ಜರುಗಲಿದೆ, ಜಿಲ್ಲೆಯಾದ್ಯಂತ ಸುಮಾರು ೪೮೦೦ ಜನರು ಅಜೀವ ಸದಸ್ಯ ರಿದ್ದು ಸಂಘದ ಸದಸ್ಯತ್ವ ಗುರುತಿನ ಚೀಟಿ ಕಡ್ಡಾಯ ಇರುವವರು ಫೆಬ್ರವರಿ ೨೦ ರೊಳಗಾಗಿ ಗುರುತಿನ ಚೀಟಿ ಪಡೆದುಕೊಂಡು ಚುನಾವಣೆಯ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ಇದೆ ಎಂದರು.
೨೧ ಜನ ನಿರ್ದೇಶಕ ಜನ ಆಡಳಿತ ಮಂಡಳಿ ಸದಸ್ಯರುಗಳ ಆಯ್ಕೆ ಗಾಗಿ ಇದೇ ಫೆಬ್ರವರಿ ೨೨ ರಿಂದ ನಾಮಪತ್ರ ಸಲ್ಲಿಕೆ ಮಾ.೧ ವರೆಗೂ ನಾಮಪತ್ರ ಸಲ್ಲಿಸಬಹುದು.
ಮಾ.೨ ನಾಮಪತ್ರ ಪರಿಶೀಲನೆ,ಮಾ.೩ ನಾಮಪತ್ರ ಹಿಂಪಡೆಯಲು ಕೊನೆ ದಿನ,ಅಂದೇ ಸ್ಪರ್ಧೆ ಯಲ್ಲಿ ಇರುವ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟ,ಮಾ ೪ ಅಭ್ಯರ್ಥಿ ಗಳಿಗೆ ಚಿಹ್ನೆ ಗಳ ಹಂಚಿಕೆ,ಮಾಡಿ.೫ ಕಣದಲ್ಲಿ ಇರುವ ಅಭ್ಯರ್ಥಿಗಳ ಪಟ್ಟಿ ಪ್ರಕಟ ಪಡಿಸುವುದು.
ಮಾರ್ಚ್ ತಿಂಗಳ ೧೫ ರಂದು ಮತದಾನ ನಡೆದು ಅಂದೇ ಎಣಿಕೆ ಕಾರ್ಯ ನೆಡೆಯಲಿದೆ ಎಂದು ವಿರುಪಾಕ್ಷಪ್ಪ ತಿಳಿಸಿದರು
ಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಎಸ್ ಹೆಚ್, ಪ್ರಕಾಶ್ ಮಳಲ್ಕೆರೆ, ನಿರ್ದೇಶಕ ರಾದ ಎಸ್ ಎಸ್ ಗಿರೀಶ್, ಬಿ ಲಿಂಗರಾಜ್, ಮುದಹದಡಿ ದಿಳ್ಳೆಪ್ಪ, ಸಿಧ್ಧಪ್ಪ ಅಡಣಿ, ಚಿಕ್ಕಣ್ಣ ಜಡಗನಹಳ್ಳಿ, ಶಶಿಧರ್ ಹೆಚ್ ವೈ , ಪುರಂದರ್ ಲೋಕಿಕೆರೆ, ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!