KVJ; ಕರ್ನಾಟಕ ವಿಡಿಯೋ ಜರ್ನಲಿಸ್ಟ್ ಅಸೋಸಿಯೇಷನ್ ನೂತನ ತಂಡ ಆಯ್ಕೆ

ಬೆಂಗಳೂರು, ಅ.30: ಕರ್ನಾಟಕ ವಿಡಿಯೋ ಜರ್ನಲಿಸ್ಟ್ (KVJ) ಅಸೋಸಿಯೇಷನ್ ಗೆ ಅವಿರೋಧವಾಗಿ ಪದಾಧಿಕಾರಿಗಳ ಆಯ್ಕೆಯಾಗಿದೆ.

ನೂತನ ಅಧ್ಯಕ್ಷರಾಗಿ ಟಿವಿ9 ಚಾನೆಲ್ ನ ಹಿರಿಯ ಕ್ಯಾಮೆರಾಮನ್ ಸಂದೇಶ್ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಎನ್‌.ಡಿ ಟಿವಿ ಚಾನೆಲ್‌ ನ ಹಿರಿಯ ಕ್ಯಾಮೆರಾಮೆನ್‌ ಗೋವಿಂದಸ್ವಾಮಿ, ಕಾರ್ಯದರ್ಶಿಯಾಗಿ ಝೀ ಟಿವಿಯ ಹಿರಿಯ ಕ್ಯಾಮೆರಾಮನ್‌ ತಾರಕ್‌ ರಾಮ್‌, ಖಜಾಂಚಿಯಾಗಿ ಇಂಡಿಯಾ ಟಿವಿ ಚಾನೆಲ್‌ ನ ಹಿರಿಯ ಕ್ಯಾಮೆರಾಮನ್‌ ಕಿರಣ್‌ ಕುಮಾರ್‌ ಆಯ್ಕೆಯಾಗಿದ್ದಾರೆ.

ಕಮಿಟಿ ಸದಸ್ಯರಾಗಿ ಆರ್ ಕನ್ನಡ ಚಾನೆಲ್ ನ ಕೃಷ್ಣ, ಟಿವಿ 9 ಹಿರಿಯ ಕ್ಯಾಮರಾಮನ್‌ ಮಂಜು, ಎಎನ್‌ ಐ ಚಾನೆಲ್‌ ನ ಹಿರಿಯ ಕ್ಯಾಮೆರಾಮನ್‌ ಸಂಜೀವ್‌, ಈ ದಿನ ಯೂ ಟ್ಯೂಬ್ ಚಾನೆಲ್‌ ನ ದೇವರಾಜು ಆಯ್ಕೆಯಾಗಿದ್ದಾರೆ.

lokayukta; ಲೋಕಾ ಬಲೆಗೆ ಬಿದ್ದ ಪಿಡಿಒ

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!