“ಕೋಗಿಲೆ” ಮತ್ತೆ ಹಾಡಲಿ…..”ಕೊವಿಡ್” ಗೆ ತುತ್ತಾಗಿರುವ ಭಾರತದ ಕೋಗಿಲೆ ಲತಾ ಮಂಗೇಷ್ಕರ್ ಆರೋಗ್ಯ ಗಂಭೀರ…

ಭಾರತ ಚಿತ್ರ ಸಂಗೀತದ ಕೋಗಿಲೆ ಎಂದೇ ಖ್ಯಾತರಾಗಿರುವ ಬಹುಭಾಷಾ ಗಾಯಕಿ ಲತಾ ಮಂಗೇಷ್ಕರ್ ಆರೋಗ್ಯದಲ್ಲಿ ಏರುಪೇರಾಗುತ್ತಿದೆ.92 ವರ್ಷ ವಯಸ್ಸಿನ ಲತಾ ದೀದಿ ಅನಾರೋಗ್ಯದ ಹಿನ್ನಲೆಯಲ್ಲಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

ಜನವರಿ 8 ರಂದು ಕೊವಿಡ್ ಸೋಂಕು ಪತ್ತೆಯಾಗಿ ದ್ದರಿಂದ ತಡಮಾಡದೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ನುರಿತ ವೈದ್ಯರ ತಂಡಗಳು ಲತಾ ಮಂಗೇಷ್ಜರ್ ಅವರ ಆರೋಗ್ಯದ ಮೇಲೆ ಸೂಕ್ಷ್ಮ ನಿಗಾ ಇರಿಸಿದ್ದಾರೆ. ವಯಸ್ಸು,ಅನಾರೋಗ್ಯ,ದಣಿವಿನಿಂದಾಗಿ ಲತಾ ಮಂಗೇಷ್ಕರ್ ಅವರ ದೇಹ ಸ್ಥಿತಿ ವೈದ್ಯರ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎನ್ನುವ ಮಾಹಿತಿಗಳು ಹೊರ ಬರಲಾಂಭಿಸಿವೆ.

ಕೊವಿಡ್ ಚಿಕಿತ್ಸೆ ಹಿನ್ನಲೆಯಲ್ಲಿ ಇನ್ನೂ ಲತಾ ಮಂಗೇಷ್ಕರ್ ಐಸಿಯುನಲ್ಲಿರುವುದು ಅವರ ಕೋಟ್ಯಾಂತರ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.ಕೆಲವೆಡೆ ಲತಾ ಅವರ ಕುರಿತು ಕೆಟ್ಟ ಸುದ್ದಿಗಳು ಹರಿದಾಡಲಾರಂಭಿಸಿವೆ.ಆದರೆ ಅವೆಲ್ಲಾ ಸುಳ್ಳು..ಅವರ ಆರೋಗ್ಯ ಸ್ಥಿರವಾಗಿದೆ.ಹೆದರುವಂತದ್ದೇನೂ ಇಲ್ಲ.ವೈದ್ಯರು ಕೊಡುತ್ತಿರುವ ಚಿಕಿತ್ಸೆಗೆ ಲತಾ ಸ್ಪಂದಿಸುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿವೆ.ಆದರೂ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿದೆ.. ಕೆಲವೆಡೆ ಹಬ್ಬುತ್ತಿರುವ ಸುದ್ದಿಗಳು ಸುಳ್ಳಾಗಲಿ..ಲತಾ ಮಂಗೇಷ್ಕರ್ ಶೀಘ್ರವೇ ಗುಣಮುಖವಾಗಿ ಬರಲಿ,ಸಂಗೀತ ಪರಂಪರೆ ಹಾಗೂ ಹಾಡುಗಾರಿಕೆಯನ್ನು ಮುಂದುವರೆಸಲಿ ಎನ್ನುವುದೇ ಅವರ ಅಪಾರ ಅಭಿಮಾನಿಗಳ ಆಶಯ..ಕನ್ನಡ ಫ್ಲ್ಯಾಶ್ ನ್ಯೂಸ್ ಬಳಗ ಕೂಡ ಲತಾ ಅವರ ಶೀಘ್ರ ಚೇತರಿಕೆ ಆಶಿಸುತ್ತದೆ.

ಭಾರತದ 36 ಭಾಷೆಗಳಲ್ಲಿ ಹಾಡುಗಾರಿಕೆ ಪ್ರದರ್ಶಿಸಿರುವ ಲತಾ ಮಂಗೇಷ್ಕರ್ ಸಾವಿರಕ್ಕೂ ಹೆಚ್ಚು ಹಿಂದಿ ಭಾಷೆಗಳಲ್ಲಿ ಹಾಡಿದ್ದಾರೆ.ಮೂರು ರಾಷ್ಟ್ರೀಯ ಪ್ರಶಸ್ತಿ,15 ಬಂಗಾಳಿ ರಾಜ್ಯ ಪ್ರಶಸ್ತಿ,ನಾಲ್ಕು ಫಿಲ್ಮ್ ಫೇರ್ ಪ್ರಶಸ್ತಿ,2 ವಿಶೇಷ ಫಿಲ್ಮ್ ಫೇರ್ ಪ್ರಶಸ್ತಿ,ಜೀವಮಾನ ಶ್ರೇಷ್ಟ ಸಾಧನೆಯ ಪ್ರಶಸ್ತಿ ಗಳಿಸಿದ್ದಾರೆ.

ಸರ್ವೋತ್ಕ್ರಷ್ಟ ಭಾರತ ರತ್ನ,ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಪಡೆದಿರುವ ಲತಾ ಲಂಡನ್ ನ ಪ್ರತಿಷ್ಟಿತ ರಾಯಲ್ ಆಲ್ಬರ್ಟ್ ಹಾಲ್ ನಲ್ಲಿ ಹಾಡಿದ ದೇಶದ ಏಕೈಕ ಗಾಯಕಿ ಎನ್ನುವ ಹೆಗ್ಗಳಿಕೆ ಪಡೆದವರು.ಮೀನಾ ಕಡಲ್ಕರ್,ಆಶಾ ಬೋಸ್ಲೆ,ಉಷಾ ಮಂಗೇಷ್ಕರ್,ಹೃದಯನಾಥ್ ಮಂಗೇಷ್ಕರ್ ಅವರು ಲತಾ ಮಂಗೇಷ್ಕರ್ ಅವರ ಸಹೋದರ-ಸಹೋದರಿಯರು.

1929 ರಲ್ಲಿ ಮದ್ಯಪ್ತದೇಶದ ಇಂದೋರ್ ನಲ್ಲಿ ದೀನನಾಥ್ ಮಂಗೇಷ್ಕರ್ ಶೇವಂತಿ ದಂಪತಿ ಪುತ್ರಿಯಾಗಿ ಜನಿಸಿದ ಲತಾ ಮಂಗೇಷ್ಕರ್, ತನ್ನ 13ನೇ ವಯಸ್ಸಿನಲ್ಲಿ ಹಾಡುಗಾರಿಕೆ ಶುರುಮಾಡಿದರು.ಅಲ್ಲಿಂದ ಶುರುವಾದ ಅವರ ಗಾಯನದ ಪಯಣ 50 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡುವ ಮಟ್ಟದವರೆಗೂ ಸಾಗಿ ಬಂತು.ಅನಾರೋಗ್ಯದ ಹಿನ್ನಲೆಯಲ್ಲಿ ಹಾಡುಗಾರಿಕೆಯನ್ನು ನಿಲ್ಲಿಸಿದ್ದ ಲತಾ ಉದಯೋನ್ಮುಖ ಗಾಯಕಿಯರಿಗೆ ಅವಕಾಶ ಮಾಡಿಕೊಡುವ ಸಲುವಾಗಿ ತಮ್ಮ ಹೆಸರನ್ನು ಯಾವತ್ತೂ ಯಾವುದೇ ಪ್ರಶಸ್ತಿಗಳಿಗೂ ನಾಮ ನಿರ್ದೇಶನ ಮಾಡಬೇಡಿ ಎಂದು ವಿನಂತಿಸಿಕೊಂಡು ಹಿರಿತನ ಪ್ರದರ್ಶಿಸಿದ್ದರು.

Leave a Reply

Your email address will not be published. Required fields are marked *

error: Content is protected !!