ದಾವಣಗೆರೆ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ದಾವಣಗೆರೆ ವಿಭಾಗದಿಂದ ಕಾರ್ಗೋ ಪಾರ್ಸಲ್ ಸೇವಾ ಕೇಂದ್ರವನ್ನು ನಗರದ ಹೈಸ್ಕೂಲ್ ಮೈದಾನದಲ್ಲಿರುವ ಕೆ.ಎಸ್.ಆರ್.ಟಿ.ಸಿ ತಾತ್ಕಾಲಿಕ ಬಸ್ ನಿಲ್ದಾಣ ಹಾಗೂ ಹರಿಹರ ಬಸ್ ನಿಲ್ದಾಣದಲ್ಲಿ ಪ್ರಾರಂಭಿಸಲಾಗಿದೆ.
ಅತೀ ಕಡಿಮೆ ಸಾಗಣಿಕೆ ದರ ಹಾಗೂ ಬೆಲೆ ಬಾಳುವ ವಸ್ತುವಿನ ಸುರಕ್ಷಿತ ವಿಮಾ ವ್ಯವಸ್ಥೆಯೊಂದಿಗೆ ಪಾರ್ಸಲ್ ಸೇವೆಯನ್ನು ಒದಗಿಸಲಾಗುತ್ತಿದೆ.
ಹೆಚ್ಚಿನ ಮಾಹಿತಿಗಾಗಿ ಕ.ರಾ.ರ.ಸಾ.ನಿಗಮ ದಾವಣಗೆರೆ ಕಛೇರಿ, ವಿಭಾಗೀಯ ಸಂಚಾರ ಅಧಿಕಾರಿ ದೂ.7760990452, ಸಹಾಯಕ ಸಂಚಾರ ಅಧೀಕ್ಷಕ 7022030183, ಸಂಚಾರ ನಿರೀಕ್ಷಕ 9945941875ಗೆ ಸಂಪರ್ಕಿಸಬಹುದೆಂದು ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
