ರಾಜ್ಯದ ರೈತರಿಗೆ ಲೈಪ್ ಇನ್ಸೂರೆನ್ಸ್- ಮರಣ ಹೊಂದಿದರೆ 2 ಲಕ್ಷ ಪರಿಹಾರ – ಸಿಎಂ ಬಸವರಾಜ ಬೊಮ್ಮಾಯಿ

ದಾವಣಗೆರೆ: ಕಳೆದ ಮೂರು ವರ್ಷದಲ್ಲಿ ನಮ್ಮ ಸರ್ಕಾರ ರಾಜ್ಯದ 40 ಲಕ್ಷ ಮನೆಗಳಿಗೆ ನೀರಿನ ವ್ಯವಸ್ಥೆ ಮಾಡಿದೆ. ಬರುವ ದಿನಗಳಲ್ಲಿ 1.10 ಕೋಟಿ ಮನೆಗಳಿಗೆ ನಳದ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

ಹೊನ್ನಾಳಿ ನಗರದಲ್ಲಿ ಶುಕ್ರವಾರ ಹೊನ್ನಾಳಿ-ನ್ಯಾಮತಿ ಅವಳಿ ತಾಲ್ಲೂಕುಗಳಲ್ಲಿ ಕೈಗೊಂಡಿರುವ  ರೂ.1933 ಕೋಟಿ ಮೊತ್ತದ ವಿವಿಧ  ಇಲಾಖೆಗಳ ಅಭಿವೃದ್ದಿ ಕಾಮಗಾರಿಗೆ ಶಂಕುಸ್ಥಾಪನೆ, ಹಾಗೂ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ,

ಫಲಾನುಭವಿಗಳಿಗೆ ಹಕ್ಕುಪತ್ರ ಮತ್ತು ಸೌಲಭ್ಯ ವಿತರಿಸಿ ಅವರು ಸ್ವಾತಂತ್ರ್ಯ ಬಂದು 72 ವರ್ಷ ಕಳೆದರೂ ರಾಜ್ಯದ 25 ಲಕ್ಷ ಮನೆಗಳಿಗೆ ಮಾತ್ರ ನಳದ ನೀರು ಸಂಪರ್ಕ ಕಲ್ಪಿಸಲಾಗಿತ್ತು. ಎಂದು ಹೇಳಿದರು.

12 ಕೋಟಿ ಮನೆಗಳಿಗೆ ನೀರು: ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಜಿ ಅವರು ಮೂರು ವರ್ಷಗಳ ಹಿಂದೆ  ಪ್ರತಿ ಮನೆಗೆ ಪ್ರತಿ ವ್ಯಕ್ತಿಗೆ 50 ಲೀಟರ್ ನೀರು ನೀಡುವುದಾಗಿ ಹೇಳಿದ್ದರು. ಇಂದು ಇಡಿ ದೇಶದಲ್ಲಿ 12 ಕೋಟಿ ಮನೆಗಳಿಗೆ  ನಳದ ನೀರು  ನೀಡಿದ್ದಾರೆ. ದೇಶದ 130 ಕೋಟಿ ಜನಸಂಖ್ಯೆಗೆ ಪ್ರತಿದಿನ ಪ್ರತಿ ಮನೆಗೆ ಕುಡಿಯುವ ನೀರು ಒದಗಸುವುದು ಕಷ್ಟವಾದ ಕೆಲಸವಾಗಿದರೂ ಕೊಟ್ಟ ಮಾತಿನಂತೆ ನಡೆದುಕೊಂಡು ಯಾವ ಪ್ರಧಾನಮಂತ್ರಿಗಳನ್ನು ಮಾಡದ ಕೆಲಸವನ್ನು ಮೋದಿ ಅವರು ಜನತೆಗೆ ನೀಡಿದ ಭರವಸೆಯನ್ನು ಇಡೇರಿಸಿದ್ದಾರೆ ಎಂದರು.

ರೂ.180 ಕೋಟಿ: ಈ ವರ್ಷ ಪ್ರತಿ ರೈತ ಕುಟುಂಬಕ್ಕೆ ಇನ್ಸೂರೆನ್ಸ್  ಮಾಡಿಸಲು ನಮ್ಮ ಸರ್ಕಾರ ರೂ.180 ಕೋಟಿ ಹಣ ಕಾಯ್ದಿರಿಸಿದೆ.  ಸಹಜ ಮರಣ ಹೊಂದಿದರೂ ರೂ. ಎರಡು ಲಕ್ಷ ಇನ್ಸೂರೆನ್ಸ್ ಹಣ ರೈತರಿಗೆ ಬರುತ್ತದೆ ಇದಲ್ಲದೆ ಎಲ್ಲ ರಂಗಗಳಲ್ಲಿ ಅಭಿವೃದ್ಧಿ ಯಾಗಬೇಕು ಎಂಬ ಉದ್ದೇಶದಿಂದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್, ರೈತ ವಿದ್ಯಾನಿಧಿ, ರೈತ ಶಕ್ತಿ ಯೋಜನೆ ಡಿಸೈಲ್ ಸಬ್ಸಿಡಿ ಯೋಜನೆ ಜಾರಿಗೆ ತರಲಾಗಿದೆ. ಯಶಸ್ವಿನಿ ಯೋಜನೆಯನ್ನು ಪುನಃ ಆರಂಭಿಸಲಾಗಿದೆ.


ಸ್ತ್ರೀ ಶಕ್ತಿ ಸಾಮಥ್ರ್ಯ: ಸ್ತ್ರೀ ಶಕ್ತಿ ಸಂಘಕ್ಕೆ ಸ್ತ್ರೀ ಶಕ್ತಿ ಸಾಮಥ್ರ್ಯ ಯೋಜನೆಯಡಿ ಪ್ರತಿ ಗ್ರಾಮ ಪಂಚಾಯತಿಯಲ್ಲಿ ಎರಡು ಸಂಘಗಳಿಗೆ ರೂ.5ಲಕ್ಷ ನೀಡಿ, ಉತ್ಪಾದನೆ, ಮಾರುಕಟ್ಟೆ ಹಾಗೂ ಮಾರಾಟ ಸೌಲಭ್ಯ ಒದಗಿಸಲಾಗಿದೆ. ಅದೇ ರೀತಿ ಯುವ ಶಕ್ತಿ ಯೋಜನೆಯಡಿ ಯುವಕ ಸಂಘಗಳಿಗೆ  ರೂ.5 ಲಕ್ಷ ನೀಡಲಾಗುತ್ತಿದೆ ಎಂದರು.
ರೈತರಿಗೆ ಮತ್ತು ರೈತ ಮಕ್ಕಳಿಗೆ ಶಕ್ತಿ ತುಂಬಲು ರಾಜ್ಯದ 13 ಲಕ್ಷ ರೈತರ ಮಕ್ಕಳಿಗೆ ಸ್ಕಾಲರ್‍ಶಿಪ್ ನೀಡಲಾಗಿದೆ.  ಬ್ಯಾಂಕಸಾಲ ರೂ.3 ಲಕ್ಷದಿಂದ ರೂ.5 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಅತಿವೃಷ್ಟಿ ಬೆಳೆಹಾನಿ ಪರಿಹಾರ ದ್ವಿಗುಣ ಮಾಡಲಾಗಿದೆ. ನೀರಾವರಿ ಬೆಳೆಗೆ  ಕೇಂದ್ರ ರೂ.15  ಸಾವಿರ, ರಾಜ್ಯ ಸರ್ಕಾರ ರೂ.25 ನೀಡಿದೆ. ರಾಜ್ಯದ 4 ಲಕ್ಷ ರೈತರಿಗೆ ರೂ.3 ಸಾವಿರ ಕೋಟಿ ಮೊತ್ತವನ್ನು ಒಂದು ತಿಂಗಳಲ್ಲಿ ನೀಡಿದ್ದು ಡಬಲ್ ಇಂಜಿನ್ ಸರ್ಕಾರ ಎಂದರು.
ನಿಜವಾದ ಸಾಮಾಜಿಕ ನ್ಯಾಯ ಕೊಟ್ಟಿದ್ದು ಯಡಿಯೂರಪ್ಪನವರು, ಭಾಗ್ಯ ಲಕ್ಷ್ಮೀ ಯೋಜನೆ, ಕಾಗಿನೆಲೆ ಅಭಿವೃದ್ಧಿ, ತಾಂಡಾ ಅಭಿವೃದ್ಧಿ ನಿಗಮ ಹಾಗೂ ಬೋವಿ ಅಭಿವೃದ್ಧಿ ನಿಗಮ ಮಾಡಿದ್ದು ಯಡಿಯೂರಪ್ಪನವರು ಎಂದು ಹೇಳಿದರು.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ಮೀಸಲಾತಿ ಹೆಚ್ಚಿಸುವ ಸಂದರ್ಭದಲ್ಲಿ ಜೇನುಗೂಡಿಗೆ ಕೈಹಾಕಿದಂತೆ ಎಂದು ಹೇಳುತ್ತಿದ್ದರು. ಆದರೆ ಧ್ವನಿ ಇಲ್ಲದ ಹಾಗೂ ನೆಲೆ ಇಲ್ಲದ ಜನಾಂಗಕ್ಕೆ ಜೇನು ತುಪ್ಪ ಕೊಡವ ದಿಟ್ಟ ಹೆಜ್ಜೆ ಇಡಲಾಗಿದೆ. ಅಭಿವೃದ್ಧಿ ಕೆಲಸಗಳನ್ನು ನೋಡಿ ರೇಣುಕಾಚಾರ್ಯರಿಗೆ ಮತ ನೀಡಬೇಕು ಎಂದು ಹೇಳಿದರು.
ಹೊನ್ನಾಳಿಯಲ್ಲಿ ಇವತ್ತು ಸುವರ್ಣಾಕ್ಷರದಲ್ಲಿ ಬರೆದಿಡುವ ದಿನ. ಈ ಕ್ಷೇತ್ರದಲ್ಲಿ ರೇಣುಕಾಚಾರ್ಯರ ಪ್ರಯತ್ನದಿಂದ ರೂ.1993 ಕೋಟಿ ಮೊತ್ತದ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ, ಇದೊಂದು ದಾಖಲೆ. ರೇಣುಕಾಚಾರ್ಯ ಈ ಕ್ಷೇತ್ರವನ್ನು ಮತ್ತು ಇಲ್ಲಿಯ ಜನರನ್ನು ಮಕ್ಕಳ ಪ್ರೀತಿ ಮಾಡುತ್ತಾರೆ. ಕರೋನಾ ಸಮಯದಲ್ಲಿ ನಿಮ್ಮೊಂದಿಗೆ ಇದ್ದು ಆತ್ಮಸ್ಥೈರ್ಯ ತುಂಬಿದ ನಾಯಕ. ಹೊನ್ನಾಳಿ-ನ್ಯಾಮತಿ ಚಿತ್ರಣ ಬದಲಾವಣೆ ಮಾಡಿದ್ದಾರೆ, ದಾಖಲೆ ಪ್ರಮಾಣದಲ್ಲಿ ಸೇವೆ ಮಾಡಿದ್ದಾರೆ. ಒಂದು ಹಳ್ಳಿಗೆ ಹತ್ತು ಹತ್ತು ಬಾರಿ ರೇಣುಕಾಚಾರ್ಯ ಬಂದಿದ್ದಾರೆ. ಜನಪ್ರೀಯ ಶಾಸಕರಿರುತ್ತಾರೆ, ಆದರೆ ರೇಣುಕಾಚಾರ್ಯ ಜನೋಪಯೋಗಿ ಶಾಸಕರಾಗಿದ್ದಾರೆ ಎಂದರು.
ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿ, ನನ್ನ ಹಾಗೂ ಬೊಮ್ಮಾಯಿ ಅವರ ಅವಧಿಯಲ್ಲಿ ಎಂ.ಪಿ.ರೇಣುಕಾಚಾರ್ಯ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಸಾವಿರಾರು ಕೋಟಿ ತಂದು ಅಭಿವೃದ್ಧಿ ಮಾಡಿದ್ದಾರೆ.  ಈ ಕ್ಷೇತ್ರದ ಜನತೆ 25 ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರು ಮಾತನಾಡಿ, ಈ ಕ್ಷೇತ್ರಕ್ಕೆ ರೂ.4,500 ಕೋಟಿ ಅನುದಾನ ತಂದು ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕು ಅಭಿವೃದ್ಧಿ ಮಾಡಲಾಗಿದೆ. ಸೇತುವೆ, ಶಾಲೆ-ಕಾಲೇಜು, ಕುಡಿಯುವ ನೀರು, ಧೂಳು ಮುಕ್ತ ರಸ್ತೆ,  ಚರಂಡಿಗೆ ಸಾವಿರಾರು ಕೋಟಿ ನೀರಿಗೆ ವೆಚ್ಚ ಮಾಡಲಾಗಿದೆ. ಅವಳಿ ತಾಲೂಕುಗಳಿಗೆ ಚುತುಸ್ಪಥ ರಸ್ತೆಯಾಗಿದೆ. ಸಿ.ಎಂ. ಬಸವರಾಜ ಬೊಮ್ಮಾಯಿ ಅವರು 250 ಹಾಸಿಗೆ ಆಸ್ಪತ್ರೆ ನೀಡಿದ್ದಾರೆ. ಬಸವರಾಜ  ಬೊಮ್ಮಾಯಿ  ಹಾಗೂ ಯಡಿಯೂರಪ್ಪ  ಅವರು ಈ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು.


ಬಸವರಾಜ ಬೊಮ್ಮಾಯಿ ಅವರು ಪರಿಶಿಷ್ಟ ಜಾತಿ ಮೀಸಲಾತಿ ಶೇ.15 ರಿಂದ ಶೇ.17ಕ್ಕೆ , ಪರಿಶಿಷ್ಟ ವರ್ಗ ಮೀಸಲಾತಿ ಶೇ.3 ರಿಂದ ಶೇ.7ಕ್ಕೆ  ಮೀಸಲಾತಿ ಹೆಚ್ಚಿಸಿದ್ದಾರೆ. ಸೇವಾಲಾಲ ಜಯಂತಿ, ವಾಲ್ಮೀಕಿ ಜಯಂತಿ  ಹಾಗೂ ಕನಕ ಜಯಂತಿ ಘೋಷಣೆ ಮಾಡಿದ್ದು ಯಡಿಯೂರಪ್ಪನವರು. ಕಳೆದ ಸಾಲಿನಲ್ಲಿ  ಯಡಿಯೂರಪ್ಪ ಅವರು ಮನೆಗಳಿಗೆ ರೂ.5 ಲಕ್ಷ ಮತ್ತು ರೂ.3 ಲಕ್ಷ ನೀಡಿದ್ದರು. ಈ ಸಾಲಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 4,500 ಮನೆಗಳಿಗೆ  ರೂ.151 ಕೋಟಿ ಅನುದಾನ ನೀಡಿದ್ದಾರೆ.  ಅತಿವೃಷ್ಟಿ ಸಮಯದಲ್ಲಿ ನಾನು  ಒಂದು ತಿಂಗಳು ಮಲಗಿಲ್ಲ, ಮನೆ ಮನೆಗೆ ಭೇಟಿ ನೀಡಿ ನೋಂದವರ ಕಣ್ಣೀರು ಒರೆಸಿದ್ದೇನೆ ಎಂದರು.

ನನಗೆ ಯಡಿಯೂರಪ್ಪನವರು ತಂದೆ ಸಮಾನ, ಬೊಮ್ಮಾಯಿ ಅವರು ಅಣ್ಣನ ಸಮಾನ ಹಾಗೂ ಪಕ್ಷ ತಾಯಿ ಸಮಾನ. ಭಾರತೀಯ ಜನತಾ ಪಾರ್ಟಿಗೆ ಚಿರರುಣಿಯಾಗಿರುತ್ತೇನೆ. ನಿಮ್ಮ ಸೇವಕನಾಗಿ ನಿಮ್ಮ ಮಧ್ಯ ಇದ್ದೇನೆ, ನಿಮ್ಮ ಸೇವಕನಾಗಿ ನಿಮ್ಮಜೊತೆಗೆ ಇರುತ್ತೇನೆ, ನಿಮ್ಮ ಆಶೀರ್ವಾದವಿರಲಿ ಎಂದರು.
ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಖಾತೆ ಸಚಿವರು ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಸಂಸದ ಜಿ.ಎಂ.ಸಿದ್ದೇಶ್ವರ, ಪಟ್ಟಣ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಜಿಲ್ಲಾಧಿಕಾರಿ ಶಿವಾನಂದ ಕಾಪಾಶಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್,  ಗಂಗಪ್ಪ, ಗುರುಮೂರ್ತಿ ಇತರರು ಉಪಸ್ಥಿತರಿದ್ದರು. ಜಿ.ಪಂ.ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಎ.ಚನ್ನಪ್ಪ ಅವರು ಸ್ವಾಗತಿಸಿದರು.

Leave a Reply

Your email address will not be published. Required fields are marked *

error: Content is protected !!