ಬೆಂಗಳೂರು: ಟಿಪ್ಪುವನ್ನು ಮೇಲಕ್ಕೆ ಕಳುಹಿಸಿದಂತೆ ಸಿದ್ಧರಾಮಯ್ಯ ಅವರನ್ನೂ ಕಳುಹಿಸಬೇಕು. ಹೊಡೆದು ಹಾಕಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಮತ್ತೊಂದೆಡೆ ನಾನು ಎಲ್ಲಾ ಧರ್ಮದವರನ್ನೂ ಪ್ರೀತಿಸುವವನು. ನನ್ನನ್ನು ಹೊಡೆಯಲು ಬಿಡುತ್ತೀರಾ? ಎಂದು ಸಿದ್ಧರಾಮಯ್ಯ ಕಾರ್ಯಕ್ರಮವೊಂದರಲ್ಲಿ ಜನತೆಯನ್ನು ಪ್ರಶ್ನಿಸಿದ್ದಾರೆ.
ಮಂಡ್ಯ ಜಿಲ್ಲೆಯ ಸಾತನೂರು ಗ್ರಾಮದ ಹೊರವಲಯದ ಕಂಬದನರಸಿಂಹಸ್ವಾಮಿ ದೇವಾಲಯದ ಆವರಣದಲ್ಲಿ ಮಂಗಳವಾರ ನಡೆದ ಮಹಾಶಕ್ತಿ ಕೇಂದ್ರದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿರುವ ಅಶ್ವತ್ಥನಾರಾಯಣ, ಟಿಪ್ಪು ಎಂದೊಡನೆ ಸಿದ್ದರಾಮಯ್ಯ ಅವರು ಬಂದುಬಿಡುತ್ತಾರೆ. ಉರಿಗೌಡ, ನಂಜೇಗೌಡ ಟಿಪ್ಪುವನ್ನು ಮೇಲಕ್ಕೆ ಕಳುಹಿಸಿದಂತೆ ಇವರನ್ನೂ ಕಳುಹಿಸಬೇಕು, ಹೊಡೆದುಹಾಕಬೇಕು ಎಂದು ಅಶ್ವತ್ಥನಾರಾಯಣ ಹೇಳಿದ್ದಾರೆ.
ಸಿದ್ದರಾಮಯ್ಯ ಅವರನ್ನು ಟಿಪ್ಪುವಿಗೆ ಹೋಲಿಸಿದ ಸಚಿವರು ಉರಿಗೌಡ ನಂಜೇಗೌಡ ಏನು ಮಾಡಿದರು ಎಂದು ಪ್ರಶ್ನಿಸುತ್ತಾರೆ. ಕಾರ್ಯಕರ್ತರು ಇದಕ್ಕೆ ಮೇಲಕ್ಕೆ ಕಳುಹಿಸಿದರು, ಹೊಡೆದು ಹಾಕಿದರು ಎಂದು ಉತ್ತರಿಸುತ್ತಾರೆ. ಅದೇ ರೀತಿ ಇವರನ್ನೂ ಹೊಡೆದು ಹಾಕಬೇಕು, ಮೇಲಕ್ಕೆ ಕಳುಹಿಸಬೇಕು ಎಂದು ಸಚಿವರು ಉತ್ತರಿಸುತ್ತಾರೆ.
ಇತ್ತ ಬಾಗಲಕೋಟೆಯ ಕಲಾದಗಿಯಲ್ಲಿ ಗುರುವಾರ ನಡೆದ ‘ಪ್ರಜಾಧ್ವನಿ’ ಯಾತ್ರೆಯ ಸಮಾವೇಶದ ಅಂತ್ಯದಲ್ಲಿ ಭಾವುಕರಾಗಿ ಮಾತನಾಡಿದ ಸಿದ್ಧರಾಮಯ್ಯ, ಮಂಡ್ಯದಲ್ಲಿ ಸಚಿವ ಅಶ್ವತ್ಥನಾರಾಯಣ, ಸಿದ್ದರಾಮಯ್ಯನನ್ನು ಟಿಪ್ಪು ರೀತಿ ಹೊಡೆದು ಹಾಕಬೇಕು ಎಂದಿದ್ದಾರೆ. ನನ್ನನ್ನು ಹೊಡೆಯಲು ಬಿಡುತ್ತೀರಾ? ಎಂದು ಜನರನ್ನು ಪ್ರಶ್ನಿಸಿದರು.
ಆಗ ‘ಇಲ್ಲ’ ಎಂಬ ಕೂಗು ಜನರಿಂದ ಮಾರ್ದನಿಸಿತು.
ಟಿಪ್ಪು ಸುಲ್ತಾನ್, ಸೇವಾಲಾಲ್, ಸಂಗೊಳ್ಳಿ ರಾಯಣ್ಣ, ಚನ್ನಮ್ಮ, ಬಸವಣ್ಣ ಸೇರಿದಂತೆ ಎಲ್ಲರನ್ನೂ ನಾನು ಗೌರವಿಸುತ್ತೇನೆ. ಬಸವಣ್ಣನವರ ಭಾವಚಿತ್ರವನ್ನು ಸರ್ಕಾರಿ ಕಚೇರಿಗಳಲ್ಲಕಚೇರಿಕಚೇರಿಗಳಲ್ಲ್ಲಕಚಕಚೇರಿಗಳಲ್ಲಕಚೇರಿಕಚೇರಿಗಳಲ್ಲ ಹಾಕಬೇಕು ಎಂದು ನಾನು ಮುಖ್ಯಮಂತ್ರಿಯಾಗಿದ್ದಾಗಲೇ ಆದೇಶ ಮಾಡಿದ್ದೆ ಎಂದು ಸಿದ್ದರಾಮಯ್ಯ ಹೇಳಿದರು.
