ಲೋಕಸಭಾ ಚುನಾವಣೆ; ಅಬಕಾರಿ ಅಕ್ರಮ ತಡೆಗಟ್ಟಲು ತಂಡಗಳ ರಚನೆ
ದಾವಣಗೆರೆ; ಲೋಕಸಭಾ ಚುನಾವಣೆ ನಡೆಯುತ್ತಿದ್ದು ಶಾಂತಯುತ, ಪಾರದರ್ಶಕ, ನಿಷ್ಪಕ್ಷಪಾತ ಚುನಾವಣೆ ನಡೆಸಲು ಅಕ್ರಮ ಕಳ್ಳಭಟ್ಟಿ ತಯಾರಿಕೆ, ನಕಲಿ ಮದ್ಯ, ಸರಾಯಿ, ಅಕ್ರಮ ಮದ್ಯ ಹಂಚಿಕೆ, ಮದ್ಯ, ಮಾದಕ ವಸ್ತುಗಳ ಸರಬರಾಜು ತಡೆಗಟ್ಟಲು ಜಿಲ್ಲೆಯಾದ್ಯಂತ ಕಟ್ಟುನಿಟ್ಟಿನ ಎಚ್ಚರ ವಹಿಸಲು ಅಬಕಾರಿ ಇಲಾಖೆ ಅಧಿಕಾರಿಗಳ ತಂಡ ರಚಿಸಲಾಗಿದೆ.
ನಕಲಿ ಮದ್ಯ, ಅಕ್ರಮ ಮದ್ಯ ಹಂಚಿಕೆ, ಮಾದಕ ವಸ್ತುಗಳ ಸರಬರಾಜು ಸೇರಿದಂತೆ ಇತರೆ ಅಕ್ರಮಗಳು ಕಂಡುಬಂದಲ್ಲಿ ಟೋಲ್ ಫ್ರೀ ಸಂಖ್ಯೆ 18004250379 ಗೆ ಕರೆ ಮಾಡಬಹುದಾಗಿದೆ. ಉಳಿದಂತೆ ಅಬಕಾರಿ ಉಪ ಆಯುಕ್ತರ ಕಚೇರಿ ದೂರವಾಣಿ 08192-235316, 9449597061, 9449597063. ದಾವಣಗೆರೆ ಉಪವಿಭಾಗ ಉಪ ಅಧೀಕ್ಷಕರಿಗೆ 08192-225042, 9449597064, 9449597065, ಹೊನ್ನಾಳಿ ಉಪವಿಭಾಗದ ಉಪಾಧೀಕ್ಷಕರಿಗೆ 08188-295202, 9449597066, 9449597067, ಅಬಕಾರಿ ನಿರೀಕ್ಷಕರು ದಾವಣಗೆರೆ ವಲಯ-1 ಕ್ಕೆ 08192-224177, ವಲಯ-2 08192-221150, ಹರಿಹರ 08192-242166, ಚನ್ನಗಿರಿ 08189-295445, ಹೊನ್ನಾಳಿ ವಲಯ ಅಬಕಾರಿ ನಿರೀಕ್ಷಕರಿಗೆ 08188-295315 ಗೆ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ.