Lok sabha; ಬೆಣ್ಣೆ ನಗರಿಯಲ್ಲಿ ವಿನಯ್‌ಗೆ ಅಹಿಂದ ಪ್ಲೇ ಕಾರ್ಡ್ ವರ್ಕ್ ಔಟ್ ಆಗುತ್ತಾ?

ದಾವಣಗೆರೆ, ಅ.05: ಇಂದಿನ ರಾಜಕೀಯ ಕೂಡ ಹೊಸಗಾಳಿ, ಹೊಸ ನೀರು ಬಯಸುತ್ತಿದೆ. ರಾಜಕೀಯಕ್ಕೆ ಯುವ ಪಡೆ ಬಂದಾಗಲೇ ದೇಶದ ಅಭಿವೃದ್ಧಿಯ ದಿಕ್ಕು ಬದಲಿಸಲು ಸಾಧ್ಯ ಎನ್ನುವುದು ನಿರ್ವಾದದ ಅನಿಸಿಕೆ. ಈ ನಿಟ್ಟಿನಲ್ಲಿ ದಾವಣಗೆರೆ ಲೋಕಸಭಾ (Lok sabha) ಕ್ಷೇತ್ರ ಕೂಡ ಹೊಸತನ ಬಯಸುತ್ತಿದೆ. ಈ ನಿಟ್ಟಿನಲ್ಲಿ ಹೊಸ ಮುಖಗಳು ಕಾಣಿಸಿಕೊಂಡಿವೆ.‌ ಕಾಂಗ್ರೆಸ್ ನಿಂದ ಪ್ರಮುಖವಾಗಿ ಕೇಳಿಬರುತ್ತಿರುವ ಹೆಸರು ಜಿ.ಬಿ.ವಿನಯ್ ಕುಮಾರ್ ಅವರದ್ದು.

ಸಿಎಂ ಸಿದ್ದರಾಮಯ್ಯ ಅಹಿಂದ ಪ್ಲೇ ಕಾರ್ಡ್ ಬಳಸಿದಂತೆ ದಾವಣಗೆರೆಯಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಇನ್ ಸೈಟ್ ಐಎಎಸ್ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ಜಿ.ಬಿ. ವಿನಯ್ ಕುಮಾರ್ ಅಹಿಂದ ಪ್ಲೇ ಕಾರ್ಡ್ ಬಳಸಲು ಮುಂದಾಗಿರುವುದು ಎದ್ದು ಕಾಣುತ್ತಿದೆ.

ಸಿಎಂ ಸಿದ್ದರಾಮಯ್ಯ ಅಹಿಂದ ನಾಯಕನೆಂದೇ ಪ್ರಚಲಿತದಲ್ಲಿದ್ದು, 2013ರ ಅಸೆಂಬ್ಲಿ ಚುನಾವಣೆಯಲ್ಲಿ ತಾನು ಬಲವಾಗಿ ನಂಬಿದ್ದ ವರ್ಗದಿಂದ ಮುಖ್ಯಮಂತ್ರಿ ಹುದ್ದೆಗೇರುವಷ್ಟರ ಮಟ್ಟಿಗೆ ಸಿದ್ದರಾಮಯ್ಯನವರಿಗೆ ಅವರಿಂದ ಬೆಂಬಲ ವ್ಯಕ್ತವಾಗಿತ್ತು. ಇದಾದ ನಂತರ, 2018ರ ಅಸೆಂಬ್ಲಿ ಚುನಾವಣೆಯಲ್ಲಿ ಇದು ಪುನರಾವರ್ತನೆಗೊಂಡಿರಲಿಲ್ಲ. ಇದೀಗ ಇದೇ ತಂತ್ರವನ್ನು ಜಿ.ಬಿ. ವಿನಯ್ ಕುಮಾರ್ ಬಳಸಲು ಮುಂದಾಗುತ್ತಿದ್ದಾರೆ.

ಆರ್ಥಿಕ ಸಂಕಷ್ಟಕ್ಕೆ ನೆರವಾಗಿ  ವಿದ್ಯಾಭ್ಯಾಸಕ್ಕೆ 5 ಲಕ್ಷ ನೇರವು ಸಂಸದ ಸ್ಥಾನದ ಆಕ್ಷಾಂಕ್ಷೀತ ಜಿ.ಬಿ.ವಿನಯ್ ಕುಮಾರ್

ಕಳೆದ ಮೂರು ದಶಕಗಳಿಂದ ಅಹಿಂದ ವರ್ಗದ ಯಾರೊಬ್ಬರೂ ದಾವಣಗೆರೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ. ಕಳೆದ ಬಾರಿ ಹೊನ್ನಾಳಿ ಮಂಜಪ್ಪನವರಿಗೆ ಕೇವಲ 15 ದಿನಗಳು ಇದ್ದಾಗ ಇಂತಹ ಚುನಾವಣೆ ಸಂದರ್ಭದಲ್ಲಿ ಟಿಕೆಟ್ ನೀಡಿ ಅವರನ್ನು ಸೋಲಿಸಿದ ಉದಾಹರಣೆ ನಮ್ಮ ಮುಂದಿದೆ. ಮೊದಲೇ ಘೋಷಣೆ ಮಾಡಿದ್ದರೆ ಅವರು ಗೆಲ್ಲುತ್ತಿದ್ದರು. ಈ ತಂತ್ರಗಾರಿಕೆ ಈ ಕ್ಷೇತ್ರದಲ್ಲಿ ನಡೆಯುತ್ತಿದೆ. ಆ ತಂತ್ರ ಕುತಂತ್ರಗಳನ್ನ ಮೆಟ್ಟಿ ನಿಂತು ಗೆದ್ದೆ ಗೆಲ್ಲುತ್ತೇನೆಂದು ವಿನಯ್‌ಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅದಕ್ಕಾಗಿ ಮೊದಲು ಕುರುಬ ಸಮಾಜದ ಮತಗಳನ್ನು ಒಟ್ಟುಗೂಡಿಸುತ್ತಿದ್ದಾರೆ.

ದಾವಣಗೆರೆ ಜಿಲ್ಲೆಯಲ್ಲಿ ಅತಿ ಹೆಚ್ಚು ಲಿಂಗಾಯತ ಮತಗಳಿವೆ, ಇದು ಪ್ರಬಲ ಸಮುದಾಯವಾಗಿದೆ. ಅದನ್ನು ಬಿಟ್ಟರೇ ಕುರುಬ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರನ್ನು ಮೊದಲು ಟಾರ್ಗೆಟ್ ಮಾಡಲಾಗುತ್ತಿದೆ. ನಂತರ ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳು ದಲಿತರ ಮತಗಳು ಕಾಂಗ್ರೆಸ್‌ಗೆ ಸಿಗಲಿದೆ ಎಂಬುದು ವಿನಯ್‌ಕುಮಾರ್ ಲೆಕ್ಕಾಚಾರ.

ಇನ್ನು ಬಿಜೆಪಿಯಿಂದ ಲಿಂಗಾಯತ ಸಮಾಜಕ್ಕೆ ಟಿಕೆಟ್ ಕೊಟ್ಟರೇ, ಲಿಂಗಾಯತ ಮತಗಳು ಬಿಜೆಪಿಗೆ ಬರಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಅಹಿಂದ ಮತಗಳು ಕಾಂಗ್ರೆಸ್‌ಗೆ ಬೀಳಲಿದ್ದು, ಸುಮಾರು ಒಂದೂವರೆ ಲಕ್ಷ ಮತಗಳಿಂದ ಗೆಲ್ಲುತ್ತೇನೆ ಎನ್ನುವುದು ವಿನಯ್ ಕುಮಾರ್ ಲೆಕ್ಕಾಚಾರ. ಇದೇ ಪ್ಲೇ ಕಾರ್ಡ್ ಹಿಡಿದು ಕುರುಬ ಹಾಗೂ ಲಿಂಗಾಯತ ಸ್ವಾಮೀಜಿಗಳನ್ನು ಒಟ್ಟುಗೂಡಿಸಿ ಬೃಹತ್ ಕಾರ್ಯಕ್ರಮಗಳನ್ನು ಮಾಡಿದ್ದಾರೆ.

ರೇಣುಕಾಮಂದಿರದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ದಾವಣಗೆರೆ ಲೋಕಸಭೆ ಚುನಾವಣೆಯ ಆಕಾಂಕ್ಷಿ ವಿನಯ್‌ಕುಮಾರ್ ಮಾತನಾಡಿ, ನಾನು ಮುಂದಿನ ದಿನಗಳಲ್ಲಿ ರೈತರು, ದಲಿತರು, ಅಲ್ಪಸಂಖ್ಯಾತರು, ಮಹಿಳೆಯರು, ಯುವಕರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಯಾವುದೇ ಸಮಾಜ, ಜಾತಿ, ವರ್ಗ ಮೇಲೇಳಬೇಕೆಂದರೆ, ಆ ಸಮಾಜದವರು ರಾಜಕಾರಣ, ಉನ್ನತ ಹುದ್ದೆಗಳಲ್ಲಿ ಇರಬೇಕಾಗುತ್ತದೆ. ತುಳಿತಕ್ಕೊಳಗಾದವರನ್ನು ಮೇಲಕ್ಕೆತ್ತಬೇಕೆ ಹೊರತು, ಅವರಿಗೆ ಅನ್ಯಾಯ ಮಾಡಬಾರದು. ಹಣ ಅಂತಸ್ತು ಬಂದಾಗ ಗುಡ್ಡೆ ಹಾಕಿಕೊಂಡು ಕೂರುವುದಲ್ಲ. ಆತ್ಮ ಸಂತೋಷಕ್ಕಾಗಿ ಸಮಾಜ ಸೇವೆಗೂ ಮುಂದಾಗಬೇಕು. ಈ ನಿಟ್ಟಿನಲ್ಲಿ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂಬ ಮಾತಿನ ಹಿಂದೆ ನಾನಾ ಅರ್ಥವಿದೆ.

ರಾಜ್ಯ, ರಾಷ್ಟ್ರೀಯ ಮಟ್ಟದ ಹೈಕಮಾಂಡ್ ನಾಯಕರ ಒಪ್ಪಿಗೆ ಪಡೆದೇ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಸತತ ಮೂರು ತಿಂಗಳಿಂದ ಜನರ ಸಂಪರ್ಕ ಮಾಡುತ್ತಾ ಹತ್ತು ಹಲವು ಸಾಮಾಜಿಕ ಸೇವಾ ನಿರತನಾಗಿದ್ದೇನೆ. ಕಾಂಗ್ರೆಸ್ ಪಕ್ಷ ಈ ಬಾರಿ ಅಹಿಂದ ವರ್ಗದಿಂದ ಟಿಕೆಟ್ ನೀಡುವ ಭರವಸೆ ಇದೆ. ಎದುರಾಳಿ ಬಿಜೆಪಿ ಅಭ್ಯರ್ಥಿಗಿಂತ 1.5 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುವುದಾಗಿ ವಿನಯ್ ಹೇಳಿರುವುದು ಅಹಿಂದ ಮತಗಳನ್ನು ನಂಬಿಯೇ ಎಂಬ ಮಾತಿದೆ. ಇನ್ನು ವಿನಯ್, ದಾವಣಗೆರೆ ಹಿರಿಯ ರಾಜಕಾರಣಿ ಶಾಮನೂರು ಶಿವಶಂಕರಪ್ಪನವರು, ಸಚಿವ ಮಲ್ಲಿಕಾರ್ಜುನ ರವರ ಸಲಹೆ ಸಹಕಾರ ಪಡೆದು ಕೊಂಡೆ ಅವರ ಬಾಯಲ್ಲಿ ನಾನೇ ಸೂಕ್ತ ಅಭ್ಯರ್ಥಿ ಎಂದು ಗುರುತಿಸಿ ಕೊಳ್ಳುತ್ತೇನೆ. ಆ ನಿಟ್ಟಿನಲ್ಲಿ ಇಡೀ ಕ್ಷೇತ್ರವನ್ನು ನಾಲ್ಕೈದು ಬಾರಿ ಸುತ್ತಿ ನಿತ್ಯ ಹಳ್ಳಿಗಳ ಮುಖಂಡರು ಹಿರಿಯರು ನಿಷ್ಟಾವಂತ ಕಾರ್ಯಕರ್ತರ ನಡುವೆ ರಾಜಕೀಯ ಸಮಾಲೋಚನೆ ನಡೆಸುತ್ತಿರುವೆ. ಅಲ್ಲಿನ ಸಮಸ್ಯೆ ಗಳ ವಿವರ ಸಂಗ್ರಹಿಸಿ ಸೂಕ್ತ ಪರಿಹಾರ ಹುಡುಕುವ ಹಾದಿಯಲ್ಲಿರುವೆ ಎಂದು ಹೇಳಿದ್ದಾರೆ. ಏನೇ ಆಗಲಿ ಕಾಂಗ್ರೆಸ್‌ನ ಎಂಪಿ ಟಿಕೆಟ್ ಆಕಾಂಕ್ಷಿ ವಿನಯ್ ಅಹಿಂದ ಮತಗಳನ್ನು ನಂಬಿದ್ದುಘಿ,ಈ ರಾಜಕೀಯ ತಂತ್ರ ಚುನಾವಣೆಯಲ್ಲಿ ಕೈ ಹಿಡಿಯುತ್ತಿದೆಯೇ ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *

error: Content is protected !!