lokayukta; ಪತಿ-ಪತ್ನಿ ಇಬ್ಬರೂ ಇಂಜಿನಿಯರ್; ಲೋಕಾ ದಾಳಿಯಲ್ಲಿ ಲಕ್ಷಾಂತರ ನಗದು, ಚಿನ್ನಾಭರಣ ಪತ್ತೆ
ದಾವಣಗೆರೆ, ಆ.17: ಬೆಳ್ಳಂಬೆಳಗ್ಗೆ ಕೋಟೆ ನಾಡಿನ ಅಧಿಕಾರಿಗಳ ಮನೆ, ಕಚೇರಿಯಲ್ಲಿ ಲೋಕಾಯುಕ್ತ (Lokayukta) ದಾಳಿ ನಡೆದಿದ್ದು, ಒಂದು ಕೆ.ಜಿ ಚಿನ್ನ, 15 ಲಕ್ಷ ನಗದು ಸಿಕ್ಕಿದೆ.
ಮಹೇಶ್ ಹಾಗು ಭಾರತಿ ಇಬ್ಬರೂ ದಂಪತಿಗಳಾಗಿದ್ದು, ಇಬ್ಬರು ಇಂಜಿನಿಯರ್. ಇವರ ಮನೆ ಮೇಲೆ ಕೂಡ ಲೋಕಾಯುಕ್ತ ಪೊಲೀಸರು ದಾಳಿ (Raid) ನಡೆಸಿದ್ದಾರೆ. ಈ ವೇಳೆ ಮನೆಯಲ್ಲಿಚಿನ್ನ, ನಗದು ಜೊತೆಗೆ ಇನ್ನೂ ಮಹತ್ತರ ದಾಖಲೆಗಳು ಸಿಕ್ಕಿವೆ, ಪರಿಶೀಲನೆ ನಡೆದಿದೆ. ಲೋಕಾಯುಕ್ತ ಎಸ್ಪಿ ವಾಸುದೇವರಾಮ್ ಮತ್ತು ಡಿವೈಎಸ್ಪಿ ಮೃತ್ಯುಂಜಯ ನೇತೃತ್ವದಲ್ಲಿ ದಾಳಿ ನಡೆದಿದೆ.
Mayakonda; ಮಾಯಕೊಂಡ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿ – ಶಾಸಕ ಕೆ.ಎಸ್.ಬಸವಂತಪ್ಪ
ಯಾರು ಇವರಿಬ್ಬರು?
ಮಹೇಶ್ ಹೊಳಲ್ಕೆರೆ ತಾಲೂಕಿನ ಸಣ್ಣನೀರಾವರಿ ಇಲಾಖೆ ಇಂಜಿನಿಯರ್. ಬಿಬಿಎಂಪಿಯಲ್ಲಿ ಇಇ ಆಗಿರುವ ಹೆಚ್ ಭಾರತಿ ಇದಕ್ಕೂ ಮೊದಲು ಚಿತ್ರದುರ್ಗ ನಗರಸಭೆಯ ಆಯುಕ್ತರು, ನಂತರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು, ದಾವಣಗೆರೆ ಮಹಾನಗರ ಪಾಲಿಕೆ ಇಂಜಿನಿಯರ್ ಮತ್ತು ಪಂಚಾಯತ್ ಇಂಜಿನಿಯರಿಂಗ್ ವಿಭಾಗದಲ್ಲಿ ಕಾರ್ಯ ನಿರ್ವಾಹಕ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ನಂತರ ಬೆಂಗಳೂರಿನ ಬಿಬಿಎಂಪಿಯಲ್ಲಿ ಇಇ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಲೋಕಾಯುಕ್ತ ಪೊಲೀಸರು ಮತ್ತಷ್ಟು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.