lpg; ಸಿಲಿಂಡರ್ ಬೆಲೆ ಇಳಿಕೆ, ಸಂಭ್ರಮಿಸಿದ ಪಾಲಿಕೆ ಸದಸ್ಯರು, ಬಿಜೆಪಿ ಮುಖಂಡರು
ದಾವಣಗೆರೆ, ಆ.30: ಎಲ್ ಪಿಜಿ (LPG) ಸಿಲಿಂಡರ್ ಬೆಲೆ 200 ರೂ. ಇಳಿಕೆ ಕಂಡಿದ್ದು ಹಾಗೂ ಉಜ್ವಲಾ ಯೋಜನೆ ಅಟಿ ಉಚಿತ ಗ್ಯಾಸ್ ಕನೆಕ್ಷನ್ ಪಡೆದವರಿಗೆ ೪೦೦ ರೂ, ನಷ್ಟು (ಸಬ್ಸಿಡಿ) ಕಡಿತ ಮಾಡಲಾಗಿದ್ದು, ಈ ನಿಮಿತ್ತ ಇಂದು ನಗರದ ಪಾಲಿಕೆ ಆವರಣದಲ್ಲಿ ಪಾಲಿಕೆ ಸದಸ್ಯರು ಮತ್ತು ಅನೇಕ ಬಿಜೆಪಿ ಮುಖಂಡರೂ ಸೇರಿ ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು. ಇದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭಾರತದ ಮಹಿಳೆಯರಿಗೆ ರಕ್ಷಾ ಬಂಧನದ ನಿಮಿತ್ತ ನೀಡಿದ ಉಡುಗೊರೆ ಎಂದು ಖುಷಿಪಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ಪಾಲಿಕೆ ಸದಸ್ಯ ಪ್ರಸನ್ನ ಕುಮಾರ್, ಪ್ರಧಾನಿ ನರೇಂದ್ರ ಮೋದಿಜಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ ೯ ವರ್ಷದಲ್ಲಿ ವಿಶ್ವವೇ ಶ್ಲಾಘಿಸುವಂತಹ ಮಹತ್ವಾಕಾಂಕ್ಷಿ ಬದಲಾವಣೆಗಳನ್ನು ಮಾಡಿದ್ದಾರೆ, ಈ ಹಿಂದಿನ ಸರ್ಕಾರದಲ್ಲಿ ದಶಕಗಳುದ್ದಕ್ಕೂ ಲಕ್ಷ ಲಕ್ಷ ಕೋಟಿ ಭ್ರಷ್ಟಾಚಾರ ಹಗರಣಗಳು ಬೆಳಕಿಗೆ ಬರುತ್ತಲೇ ಇದ್ದವು. 13, 14ನೇ ಸ್ಥಾನದಲ್ಲಿದ್ದ ನಮ್ಮ ದೇಶ ಆರ್ಥಿಕತೆಯೂ 10ನೇ ಸ್ಥಾನ ಬರಲು 30ವರ್ಷ ತೆಗೆದುಕೊಂಡಿತು. ಆದರೆ, ಪ್ರಧಾನಿ ನರೇಂದ್ರ ಮೋದಿಜಿ ನೇತೃತ್ವದಲ್ಲಿ ದೇಶ ಕೇವಲ 9 ವರ್ಷದಲ್ಲಿ 10ನೇ ಸ್ಥಾನದಿಂದ 5ನೇ ಸ್ಥಾನಕ್ಕೇರಿ, ವಿಶ್ವದ ಆರ್ಥಿಕ ಶಕ್ತಿಶಾಲಿ ರಾಷ್ಟ್ರಗಳಲ್ಲಿ ಒಂದು ಎಂಬ ಹೆಗ್ಗಳಿಕೆ ಪಡೆದಿದೆ ಎಂದು ಬಿಜೆಪಿ ಸರ್ಕಾರದ ಸಾಧನೆಗಳನ್ನು ಹೊಗಳಿದರು.
ಇದೇ ವೇಳೆ ಉಪ ಮಹಾಪೌರರಾದ ಯಶೋದ ಹೆಗ್ಗಪ್ಪ ಮಾತನಾಡಿ ಉಜ್ವಲ ಯೋಜನೆ ಅಡಿಯಲ್ಲಿ ೭೫ಲಕ್ಷ ಉಚಿತ ಹೊಸ ಎಲ್ ಪಿಜಿ ಕನೆಕ್ಷನ್ ಗಳನ್ನು ಒದಗಿಸಲು ತೀರ್ಮಾನಿಸಿರುವ ಕ್ರಮ ನಿಜಕ್ಕೂ ಶ್ಲಾಘನೀಯ ಎಂದರು.
ಸಂಭ್ರಮಾಚರಣೆಯಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಎಸ್.ಟಿ ವೀರೇಶ್, ಪ್ರಸನ್ನ ಕುಮಾರ್ ಕೆ, ಆರ್ ಶಿವಾನಂದ್, ಗೋಣ್ಯಪ್ಪ, ಡಿ.ಎಲ್.ಆರ್ ಶಿವಪ್ರಕಾಶ್, ಕೆ.ಎಂ ವೀರೇಶ್, ಶಿಲ್ಪಾ ಜಯಪ್ರಕಾಸ್, ಗಾಯತ್ರಿ ಬಾಯಿ ಖಂಡೋಜಿರಾವ್, ರೇಣುಕಾ ಶ್ರೀನಿವಾಸ್, ಬಿಜೆಪಿ ಮುಖಂಡರಾದ ಸುರೇಶ್ ಗಂಡುಗಳೆ, ಮುಕುಂದಪ್ಪ, ಜಯಪ್ರಕಾಶ್, ಶ್ರೀನಿವಾಸ್, ನಾಗಪ್ಪ, ಪದ್ಮನಾಬ್ ಶೆಟ್ಟಿ, ಮತ್ತು ಇತರೆ ಮುಖಂಡರುಗಳಾದ ಮುಕುಂದಪ್ಪ. ಗಣೇಶ್ ಪವರ್. ಯುವ ಮುಖಂಡರಾದ ಸಚಿನ್ ರ‍್ಣೇಕರ್, ಕಿರಣ, ಸಂತೋಷ್ ಕೋಟೆ, ದಂಡಪಾಣಿ, ರಘು ತೋಗಾಟ್, ರುದ್ರೇಶ್ ಭಾಗವಹಿಸಿದ್ದರು.